ರೇಣುಕಾಚಾರ್ಯ ಕೊಡುಗೆ ಸಮಾಜಕ್ಕೆ ಅಪಾರ: ಶಿವಸಿದ್ಧ ಸೋಮೇಶ್ವರ ಶ್ರೀಗಳು

0
25
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ರೇಣುಕಾಚಾರ್ಯ ಕೊಡುಗೆ ಸಮಾಜಕ್ಕೆ ಅಪಾರವಾಗಿದ್ದು, ಅವರ ಮೂರ್ತಿಯನ್ನು ಪ್ರತಿಯೊಬ್ಬರು ಮನೆಯಲ್ಲಿ ಇಟ್ಟು ಪೂಜಿಸಬೇಕು ಎಂದು ಷ.ಬ್ರ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ನಗರದ ಹೊಸ ಕೋರ್ಟ್ ಆವರಣದ ವಕೀಲರ ಸಭಾಭವನದಲ್ಲಿ ರವಿವಾರ ಜಿಲ್ಲಾ ವೀರಶೈವ ಅರ್ಚಕ, ಪುರೋಹಿತರ ಸಂಘ ಆಯೋಜಿಸಿದ ಜಗದ್ಗುರು ರೇಣುಕಾಚಾರ್ಯ ಜಯಂತಿ ಉತ್ಸವ ಸಾನಿಧ್ಯ ವಹಿಸಿ ಮಾತನಾಡಿದ ಅವರು ಜಾತಿಗೆ ಜಾತಿ ಮುಳ್ಳುವಾಗದೇ ನಾವೇಲ್ಲರೂ ಒಂದು ಎಂದು ಸಮಾಜಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ನಡೆಯಬೇಕು.
ಶಿವಲಿಂಗ ಆರಾಧನೆ ಧರ್ಮ ಬೋಧನೆ ಮಾಡಲು ತಾವು ಅಣಿಯಾಗಬೇಕು. ಧರ್ಮ ನಿಷ್ಠೆ ಕಾಯಕ ಮಾಡಿರುವ ರೇಣುಕಾಚಾರ್ಯರÀ ಸಂದೇಶವು ಸಮಾಜದ ಏಳಿಗೆಗಾಗಿವೆ. ಹೀಗಾಗಿ ಅವರ ಸಂದೇಶಗಳನ್ನು ಎಲ್ಲರೂ ಪಾಲಿಸಬೇಕು. ಮಾನವ ಧರ್ಮಕ್ಕೆ ಜಯವಾಗಲಿ ಎಂಬುವುದನ್ನು ಪ್ರತಿಯೊಬ್ಬರು ತಮ್ಮಲ್ಲಿ ಬೆಳೆಸಿಕೊಳ್ಳಬೇಕು. ರೇಣುಕಾಚಾರ್ಯರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಮುಂದಿನ ದಿನಗಳಲ್ಲಿ ಯುವಮಾನ ಉತ್ಸವ ಎಂಬ ಬೃಹತ್ ಪ್ರಮಾಣದಲ್ಲಿ ಕಾರ್ಯಕ್ರಮ ನಡೆಯಬೇಕು. ಜಾತಿ ಜನಾಂಗ ಎನ್ನದೇ ಎಲ್ಲರನ್ನು ಸಮಾರಂಭಕ್ಕೆ ಕರೆತರುವ ಕಾರ್ಯ ಆಗಬೇಕು ಎಂದರು.
ಸಂಸದ ಸುರೇಶ ಅಂಗಡಿ ಮಾತನಾಡಿ, ಸ್ವಾತಂತ್ರ್ಯ ಬಂದ ಮೇಲೆ ಒಬ್ಬ ಯೋಗಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವುದನ್ನು ಗಮನಿಸಿದರೆ ದೇಶ ಗುರು ಮಾರ್ಗದರ್ಶನದಲ್ಲಿ ಸಾಗುತ್ತಿದೇ ಇವತ್ತು ಆದಿತ್ಯನಾಥ ಯೋಗಿ ಅಧಿಕಾರ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ನಮ್ಮ ಈ ಎರಡು ಮಠಾಧೀಶರು ಒಂದು ಉತ್ತಮ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಹೃದಯ ಸ್ಫರ್ಶಿ ಕಾರ್ಯಕ್ರಮವಾಗಿದೆ. ಮಾತೃ ಭಾಷೆ, ನಮ್ಮ ಸಂಸ್ಕøತಿ ಕಾಪಾಡುವಲ್ಲಿ ಕರ್ನಾಟಕದ ನಾನಾ ಮಠಗಳು ಶ್ರಮಿಸುತ್ತಿರುವ ಫಲಶೃತಿಯಿಂದ ಇನ್ನೂ ಸಂಸ್ಕøತಿ ಉಳಿದುಕೊಂಡಿದೆ. ಮುಂಬರುವ ದಿನಗಳಲ್ಲಿ ಕಟ್ಟಕಡೆಯ ವ್ಯಕ್ತಿ ಸಹ ಉತ್ತಮವಾಗಿ ಬದುಕಬಲ್ಲ ಎನ್ನುವುದರಲ್ಲಿ ಸದೇಹವಿಲ್ಲ ಎಂದರು.
ಷ.ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹುಕ್ಕೇರಿ ಅವರು ಮಾತನಾಡಿ, ಸಮಾಜ ಕಟ್ಟುವಲ್ಲಿ ಒಗ್ಗಟ್ಟಾಗಿ ಎಲ್ಲರೂ ಒಂದುಗೂಡಿ ನಡೆಯಬೇಕು ಆಗ ಮಾತ್ರ ಉತ್ತಮ ಸಮಾಜ ಆಗಲು ಸಾಧ್ಯ. ರೇಣುಕಾಚಾರ್ಯರು ಜಂಗಮ ಅಷ್ಟೇ ಅಲ್ಲ ಇಡೀ ಜಗತ್ತಿನ ನೊಂದಬೆಂದವರ ಸೇವೆ ಮಾಡಿದವರು. ಎಲ್ಲ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು. ಆಗ ಮಾತ್ರ ನಮ್ಮ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ. ಮುಮದಿನ ದಿನಗಳಲ್ಲಿ ಎಲ್ಲರೂ ಸೇರಿ ದೊಡ್ಡ ಮಟ್ಟದಲ್ಲಿ ಜಾತಿ ಮತ ಎನ್ನದೇ ರೇಣುಕಾರ್ಚಾರರ ಉತ್ಸವ ಮಾಡೋಣ ಎಂದರು.
ಡಾ. ಪಿ.ಶಿವರಾಮ ಅವರಿಗೆ ಪ್ರತಿವರ್ಷ ನೀಡುವ ರೇಣುಕಾಚಾರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತ್ತು. ನಂದಾಧಾಮ ಮಕ್ಕಳ ಹಾಗೂ ಅನಾಥ ಮಕ್ಕಳಿಗೆÀ ಪಠ್ಯ ಪುಸ್ತಕ ನೀಡಲಾಯಿತ್ತು.
ವಕೀಲ ಬಾರ್ ಅಸೋಶಿಯನ್ ಅಧ್ಯಕ್ಷ ಎಸ್.ಎಸ್ ಕಿವಡಸಣ್ಣವರ, ಡಾ. ಪಿ.ಶಿವರಾಮ, ಶಿವಯೋಗಿ ಕಂಬಾಳಿಮಠ, ಎ.ಪಿ ಮುಳವಾಡಮಠ, ವಿರೇಶ ಕಿವಡಸಣ್ಣವರ, ಪ್ರವೀಣ ಮೋತಿಮಠ ವಿರೇಶ ಪಂಚಾಕ್ಷರಿಮಠ ಸಮಿತಿಯ ನಿರ್ದೇಶಕ ಮಂಡಳಿ ಮತ್ತಿತರರು ಉಪಸ್ಥಿತರಿದ್ದರು.

loading...