ವಿರಾಟ್ ಫಿಟ್

0
26
loading...

ಕನ್ನಡಮ್ಮ ಸುದ್ದಿ-ರಾಂಚಿ: ಬಿದ್ದು ಗಾಯ ಮಾಡಿಕೊಂಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಆಡ್ತಾರಾ? ಮೈದಾನಕ್ಕೆ ಇಳಿದ್ರೂ ಕೊಹ್ಲಿಯ ಆಟ ಹೇಗಿರುತ್ತೆ ಎಂಬುದು ಎಲ್ಲರಲ್ಲಿ ಕುತೂಹಲ ಮೂಡಿಸಿದೆ.
ರಾಂಚಿ ಟೆಸ್ಟ್‍ನ ಮೂರನೇ ದಿನದಾಟ ಪ್ರಾರಂಭವಾಗಿದ್ದು, ಕ್ರೀಸ್‍ನಲ್ಲಿ ಚೇತೇಶ್ವರ್ ಪೂಜಾರಾ ಮತ್ತು ಮುರುಳಿ ವಿಜಯ್ ಇದ್ದಾರೆ. ಈಗಾಗಲೇ ಟೀಂ ಇಂಡಿಯಾದ ಒಂದು ವಿಕೆಟ್ ಪತನವಾಗಿದೆ. ಸಾಮಾನ್ಯವಾಗಿ ಟೆಸ್ಟ್‍ನಲ್ಲಿ ಎರಡು ವಿಕೆಟ್ ಪತನದ ಬಳಿಕ ಮೈದಾನಕ್ಕೆ ನಾಯಕ ಕೊಹ್ಲಿ ಆಡಲು ಇಳಿತಾರೆ. ಅದರಂತೆ ಈ ಪಂದ್ಯದಲ್ಲೂ ಕೊಹ್ಲಿ ಬ್ಯಾಟಿಂಗ್ ಮಾಡುವ ಎಲ್ಲ ಲಕ್ಷಣಗಳು ಇವೆ.
ಮೂರನೇ ದಿನದಾಟದ ವೇಳೆ ಪೆವಿಲಿಯನ್‍ನಲ್ಲಿ ಕುಳಿತಿರುವ ಕೊಹ್ಲಿ ಪ್ಯಾಡ್ ಕಟ್ಟಿಕೊಂಡು ರೆಡಿಯಾಗಿದ್ದಾರೆ. ಇದರಿಂದ ಕೊಹ್ಲಿ ಮೈದಾನಕ್ಕೆ ಇಳಿಯಲಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಡೆಲ್ಲಿ ಡ್ಯಾಶರ್ ಕ್ರೀಡಾಂಗಣಕ್ಕೆ ಇಳಿದರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಮಂದಹಾಸ ಮೂಡುವುದಂತೂ ನಿಶ್ಚಿತ.
ಕೊಹ್ಲಿ ಆಡುವುದರ ಕುರಿತು ನಿನ್ನೆ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್, ವಿರಾಟ್ ಕೊಹ್ಲಿ ರಾಂಚಿ ಟೆಸ್ಟ್‍ನಲ್ಲಿ ಆಡಲು ಫಿಟ್ ಆಗಿದ್ದಾರೆ ಎಂದು ತಿಳಿಸಿದ್ದರು. ಕೈಗೆ ಹಾಕಿರುವ ಬ್ಯಾಂಡೇಜ್ ಹಾಗೆಯೇ ಇದೆ. ಆದರೆ ಕೊಹ್ಲಿ ನೆಟ್ಸ್‍ನಲ್ಲಿ ಅಭ್ಯಾಸ ಮಾಡಿದ್ದು, ಮರಳಿ ರಾಂಚಿ ಟೆಸ್ಟ್‍ನಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದರು.

loading...