ವೃತಿ ಮಾರ್ಗದರ್ಶನ ಹಾಗೂ ಆಪ್ತ ಸಮಾಲೋಚನಾ ಕಾರ್ಯಕ್ರಮ

0
49
loading...

ಕನ್ನಡಮ್ಮ ಸುದ್ದಿ-ಮುಂಡಗೋಡ ; ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಘಟ್ಟವಾಗಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ನಂತರ ಮುಂದೇನು ಮಾಡಬೇಕು ಎನ್ನುವದು ಬಹುತೇಕ ವಿದ್ಯಾರ್ಥಿಗಳಿಗೆ ತಿಳಿದಿರುವದಿಲ್ಲ. ಉತ್ತಮ ಅಂಕ ಗಳಿಸಿದರೆ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಳ್ಳುವದು ಕಡಿಮೆ ಅಂಕ ಬಂದರೆ ಬೇರೆ ವಿಷಯ ಆಯ್ಕೆ ಮಾಡಿಕೊಂಡು ಕಾಲೇಜು ಶಿಕ್ಷಣ ಪಡೆಯಲು ಮುಂದಾಗುತ್ತಾರೆ. ಆದರೆ ನಿಜಕ್ಕೂ ಎಸ್‍ಎಸ್‍ಎಲ್‍ಸಿ ಮುಗಿಸಿದ ನಂತರ ಏನನ್ನು ಕಲಿಯಬೇಕು ಎನ್ನುವ ಗೊಂದಲದಲ್ಲಿರುವ ಪೋಷಕರು ಹಾಗೂ ಮಕ್ಕಳಿಗೆ ತಾಲೂಕಿನ ಇಂದೂರ ಪ್ರೌಢ ಶಾಲೆಯಲ್ಲಿ ವಿಶಿಷ್ಟ ಕಾರ್ಯಕ್ರಮ ಜರುಗಿತು.
ವಿದ್ಯಾರ್ಥಿಗಳಿಗೆ ಎಸ್‍ಎಸ್‍ಎಲ್‍ಸಿ ಮುಗಿದ ಬಳಿಕ ಮುಂದೇನು? ವೃತಿ ಮಾರ್ಗದರ್ಶನ ಹಾಗೂ ಆಪ್ತ ಸಮಾಲೋಚನಾ ಕಾರ್ಯಕ್ರಮವನ್ನು ಇವೆಂಟ್ ಮ್ಯಾನೇಜ್‍ಮೆಂಟ್ ಆಶ್ರಯದಲ್ಲಿ ತಾಲೂಕಿನ ಇಂದೂರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವನ್ನು ಇವೆಂಟ್ ಮ್ಯಾನೇಜ್‍ಮೆಂಟನ ಎಮ್‍ಡಿ ಹಾಗೂ ಇದೆ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿ ಅಜಯ ಕುಮಾರ ಎಸ್ ಕರ್ಜಗಿ ಮತ್ತು ಸಿಬ್ಬಂದಿ ಸೇರಿ ಗುರುವಂದನಾ ಕಾರ್ಯಕ್ರಮದೊಂದಿಗೆ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಿಲ್ಪಾ ರಾಹುತ ಮಕ್ಕಳ ಅಭಿವೃದ್ಧಿಗೆ ಮತ್ತು ಜೀವನದ ಉದ್ದೇಶಗಳು ಸಹಕಾರಗೊಳ್ಳಲು, ಹಳ್ಳಿಗಾಡಿನ ಮಕ್ಕಳ ಮಾನಸಿಕ ಸಾಮಥ್ಯ ಮುಖ್ಯ. ಹಳ್ಳಿಗಾಡಿನ ಮಕ್ಕಳ ಸಾಮಥ್ಯ ಪಟ್ಟಣದ ಮಕ್ಕಳ ಸಾಮಥ್ಯಕಿಂತ್ತ ಹೆಚ್ಚಿಗೆ ಇದೆ, ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಡಿಎಮ್ ಮತ್ತು ಎಮ್‍ಬಿಎ ಕಾಲೇಜನ ಭೋಧಕರಾದ ಪವನ ರವರು ಮಾತನಾಡಿ ವಿದ್ಯಾರ್ಥಿಗೆ ಇರುವ ಅವಕಾಶಗಳು, ನೂನ್ಯತೆಯಿಂದ ಪಾರಾಗುವ ವಿಧಾನ, ಅವಕಾಶದ ಸದುಪಯೋಗ ಮತ್ತು ಪ್ರಯತ್ನದಿಂದ ಪರಮಾರ್ಥ ಹೀಗೆ ಹಲವು ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಮಾತನಾಡಿದರು.
ನಂತರ ವಿದ್ಯಾರ್ಥಿ ಮತ್ತು ಪಾಲಕರೊಂದಿಗೆ ವೃತಿ ಮಾರ್ಗದರ್ಶನ ಕುರಿತು ಆಪ್ತ ಸಮಾಲೋಚನೆ ನಡಸಲಾಯಿತು. ಇಲ್ಲಿ 61 ವಿದ್ಯಾರ್ಥಿಗಳು ಮತ್ತು ಪಾಲಕರು ಸಮಾಲೋಚನೆಯಲ್ಲಿ ಪಾಲಗೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಸತೀಶ ಎಸ್‍ಎನ್. ಕಾರ್ತಿಕ್ ಎಚ್. ಚೇತನ್ ಸಿ ಜಾನ್, ಪದ್ಮಿನಿ ಪೂಜಾರ, ಕೃಷ್ಣವೇಣಿ, ಸತೀಶ ಇವರು ಮಕ್ಕಳು ಮತ್ತು ಪಾಲಕರೊಂದಿಗೆ ಸಮಾಲೋಚನೆ ನಡಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ಎಸ್‍ಎಸ್ ಸುಂಕದ ವಹಿಸಿದ್ದರು. ಉಳಿದಂತೆ ಶಾಲಾ ಸಿಬ್ಬಂದಿಗಳು ಪಾಲಗೊಂಡಿದ್ದರು.

loading...