ವ್ಯಕ್ತಿ ಕಾಣೆ

0
21
loading...

ಕನ್ನಡಮ್ಮ ಸುದ್ದಿ-ಮುಂಡಗೋಡ : ಗದ್ದೆಗೆ ಹೋಗಿ ಬರುವುದಾಗಿ ಹೇಳಿ ಹೋದ ವ್ಯಕ್ತಿ ನಾಲ್ಕು ದಿನ ಕಳೆದರೂ ಮನೆಗೆ ಬಾರದೇ ಕಾಣೆಯಾದ ಘಟನೆ ತಾಲೂಕಿನ ಉಗ್ಗಿನಕೇರಿ ಗ್ರಾಮದಲ್ಲಿ ನಡೆದಿದೆ.
ಉಗ್ಗಿನಕೇರಿ ಗ್ರಾಮದ ಬುಡ್ಡೇಸಾಬ ಫಕ್ಕೀರಸಾಬ ಅಕ್ತಾರ(55) ಕಾಣೆಯಾದ ವ್ಯಕ್ತಿ, ಮಾರ್ಚ 28 ರಂದು ಬೆಳಗಿನ ಜಾವ ಎಂದಿನಂತೆ ಮನೆಯಿಂದ ಗದ್ದೆಗೆ ಹೋಗಿ ಬರುವುದಾಗಿ ಹೇಳಿ ಹೋದವನು ಇದುವರೆಗೆ ಮನೆಗೆ ಮರಳಿ ಬಂದಿಲ್ಲ. ಈ ಬಗ್ಗೆ ಸಂಬಂಧಿಕರಲ್ಲಿ ವಿಚಾರಿಸಿದರೂ ಪತ್ತೆಯಾಗಿಲ್ಲ ಎಂದು ಕಾಣೆಯಾದವನ ಪತ್ನಿ ಫಾತೀಮಾ ಬುಡ್ಡೇಸಾಬ ಅಕ್ತಾರ ಶುಕ್ರವಾರ ಮುಂಡಗೋಡ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

loading...