ಶಿಕ್ಷಣ ಸಂವರ್ಧನೆಗೆ ಶ್ರಮಿಸಿದಾಗ ವಿದ್ಯಾವಂತರಾಗುತ್ತಾರೆ

0
25
loading...

ಕನ್ನಡಮ್ಮ ಸುದ್ದಿ-ಧಾರವಾಡ : ಆದರ್ಶದ ಬೆಳಕಿನಲ್ಲಿ ಯಾವ ದ್ವಂದ್ವಗಳಿಗೂ ಅವಕಾಶ ನೀಡದೇ ಎಲ್ಲರೂ ಒಗ್ಗೂಡಿ ಶ್ರಮಿಸಿದಾಗ ಸರ್ವ ಸಮಾಜಗಳ ಮಕ್ಕಳೂ ಸಹ ವಿದ್ಯಾವಂತರಾಗಲು ಸಾಧ್ಯವಾಗುತ್ತದೆ ಎಂದು ಕ.ವಿ.ವಿ. ವಿದ್ಯಾ ವಿಷಯಕ ಪರಿಷತ್ತಿನ ಸದಸ್ಯ ಎಸ್.ಬಿ. ಗಾಮನಗಟ್ಟಿ ಹೇಳಿದರು.
ನುಗ್ಗಿಕೇರಿದಲ್ಲಿರುವ ಸ್ನೇಹಿತರ ಶಿಕ್ಷಣ ಸಂಸ್ಥೆಯ ಸ್ಫೂರ್ತಿ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ‘ಸಾಂಸ್ಕøತಿಕ ಸಂಜೆ’ ಮಕ್ಕಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾವಿಕಾಸದ ಹಂಬಲ ಸಾಕಾರಗೊಳ್ಳಲು ನೂರಾರು ಕೈಗಳ ಸಹಕಾರ ಶಕ್ತಿಯ ಅವಶ್ಯವಿದೆ. ಪೂರ್ವಾಗ್ರಹ ಪೀಡಿತ ನೆಲೆಯಿಂದ ಹೊರಬಂದು ಶಿಕ್ಷಣ ಸಂವರ್ಧನೆಗೆ ಶ್ರಮಿಸಿದಾಗ ಎಲ್ಲರಿಗೂ ಶಿಕ್ಷಣ ಆಶಯ ಕೈಗೂಡುತ್ತದೆ. ವಿದ್ಯಾವಿಕಾಸದ ಪಥವನ್ನು ಬಲಗೊಳಿಸಲು ಸ್ವಾತಂತ್ರ್ಯ ಪೂರ್ವ ಕಾಲಘಟ್ಟದಿಂದಲೂ ನಮ್ಮ ನಾಡಿನ ಅನೇಕ ಗಣ್ಯರು ತಮ್ಮ ಮನೆ-ಮಠಗಳನ್ನು ತೊರೆದು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಲು, ತನ್ಮೂಲಕ ಅಕ್ಷರದ ಬೆಳಕು ಹಂಚಲು ಅಹರ್ನಿಶಿ ಶ್ರಮಿಸಿದ ಆದರ್ಶಗಳು ನಮ್ಮ ಕಣ್ಮುಂದೆ ಇವೆ ಎಂದರು.
ತೆರಿಗೆ ಸಲಹೆಗಾರ ಪ್ರಮೋದ ಜೋಷಿ, ನಿಂಗಪ್ಪ ಕುಡವಕ್ಕಲಿಗೇರ, ಶಿವು ಪಾಟೀಲ ಮಲ್ಲಿಕಾರ್ಜೂನ ಮಠಪತಿ ,ರಘುವೀರ ಬಡಿಗೇರ, ಶಶಿಕಲಾ ಹಿರೇಮಠ, ಮೀನಾಕ್ಷಿ ಸಾಂಬ್ರಾಣಿ, ಕವಿತಾ ಹಂಗರಕಿ, ವಿಜಯಲಕ್ಷ್ಮಿ ಹಿರೇಮಠ, ನಿಕ್ಕತ್ ಸೈಯ್ಯದ್ ಉಪಸ್ಥಿತರಿದ್ದರು.

loading...