ಶ್ರೀ.ವರ್ಧಮಾನ ಸಾಗರ ಸಂಘದ ಕರ್ನಾಟಕ ಪ್ರವೇಶ

0
24
loading...

ಕನ್ನಡಮ್ಮ ಸುದ್ದಿ
ಬೆಳಗಾವಿ : ಮುಂದಿನ ವರ್ಷ 2018 ರಲ್ಲಿ ಶ್ರವಣಬೆಳಗೊಳದಲ್ಲಿ ನಡೆಯಲಿರುವ ಐತಿಹಾಸಿಕ ಭಗವಾನ ಬಾಹುಬಲಿ ಮಹಾಮಸ್ತಕಾಭಿಷೇಕದ ಸಾನಿಧ್ಯ ವಹಿಸಲಿರುವ ಆಚಾರ್ಯ ಶ್ರೀ. 108 ವರ್ಧಮಾನ ಸಾಗರ ಮತ್ತು ಅವರ ಸಂಘದ ಮುನಿಗಳು . ತ್ಯಾಗಿಗಳು ಇಂದು ವಿಜಾಪೂರ ಜಿಲ್ಲೆಯ ಧುಳಖೇಡ ಗ್ರಾಮದ ಮೂಲಕ ಕರ್ನಾಟಕವನ್ನು ಪ್ರವೇಶ ಮಾಡಿದರು.
ಫೆ.2018 ರಲ್ಲಿ ಶ್ರವಣಬೆಳಗೊಳದ ಮಹಾಮಸ್ತಕಾಭೀಷೇಕ ಕಾರ್ಯಕ್ರಮದ ಸಾನಿಧ್ಯವನ್ನು ಆಚಾರ್ಯ ಶ್ರೀ. ವರ್ಧಮಾನ ಸಾಗರಜೀ ಅವರು ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಅವರು ಹಾಗೂ ಅವರ ಸಂಘ ಪಾದಯಾತ್ರೆ ಮೂಲಕ ಶ್ರವಣಬೆಳಗೊಳದತ್ತ ಪ್ರಯಾಣ ಬೆಳೆಸಿದ್ದು, ಸೋಮವಾರ ಬೆಳಿಗ್ಗೆ ಮಹಾರಾಷ್ಟ್ರದ ಗಡಿಯಿಂದ ಕರ್ನಾಟಕದ ಹದ್ದಿನಲ್ಲಿರುವ ಭಿಮಾ ನದಿ ತೀರದ ಧುಳಖೇಡ ಗ್ರಾಮದ ಮೂಲಕ ಕರ್ನಾಟಕವನ್ನು ಪ್ರವೇಶ ಮಾಡಿದ್ದಾರೆ.
ಈ ಸಂದರ್ಭದಲ್ಲಿ ವಿಜಯಪೂರ ಜಿಲ್ಲೆ ಜೈನ ಸಮಾಜ. ಅಥಣಿ, ನಿಡೋನಿ, ಇಂಡಿ, ಚಡಚಣ, ಹಾರುಗೇರಿ ಸೇರಿದಂತೆ ಬೆಳಗಾವಿ ಜಿಲ್ಲೆಯ ಜೈನ ಸಮಾಜದ ಬಾಂಧವರು ಶ್ರೀಗಳಿಗೆ ಪಾದಪೂಜೆ ನೆರವೇರಿಸುವ ಮೂಲಕ ಅದ್ದೂರಿಯ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಜೈನ ಸಮಾಜದ ಮುಖಂಡರಾದ ಸಂಘಪತಿ ಶ್ರೀಪಾಲ ಗಂಗವಾಲ, ವಿಮುಕ್ತ ಕುಮಾರ, ಆನಂದಭಾಯಿ ಶಹಾ, ಡಿ.ಆರ್.ಪಾಟೀಲ, ಅರುಣ ಯಲಗುದ್ರಿ, ಎ.ಸಿ.ಪಾಟೀಲ, ಡಿ.ಆರ್.ಶಹಾ, ಅಶೋಕ ಬಾಗೇವಾಡಿ, ಕಿರಣ ಪಾಟೀಲ, ವಿನೋದ ದೊಡ್ಡಣವರ, ಶೈಲೇಶ ಶಹಾ, ಎ.ಆರ್.ರೊಟ್ಟಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜೈನ ಸಮಾಜ ಬಾಂಧವರು ಉಪಸ್ಥಿತರಿದ್ದರು.

loading...