ಸಂಭ್ರಮದಿಂದ ನಡೆದ ರೇಣುಕಾಚಾರ್ಯರ ಜಯಂತಿ

0
30
loading...

ಕನ್ನಡಮ್ಮ ಸುದ್ದಿ-ಗಜೇಂದ್ರಗಡ : ಪಟ್ಟಣದ ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರೇಣುಕಾಚಾರ್ಯರ ಜಯಂತಿ ಹಾಗೂ ಹಾನಗಲ್ ಕುಮಾರಸ್ವಾಮಿಗಳ 150ನೇ ಜಯಂತೋತ್ಸವವು ಶುಕ್ರವಾರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.
ಪಟ್ಟಣದ ಗಡದಪ್ಪಜ್ಜನಮಠದಲ್ಲಿ ಬೆಳಿಗ್ಗೆ 6 ಅಯ್ಯಾಚಾರ ನಡೆದ ಬಳಿಕ ಸಿ.ಸಿ.ಚಿನ್ನಯ್ಯನಮಠದಲ್ಲಿ ರೇಣುಕಾಚಾರ್ಯರ ಮೂರ್ತಿಗೆ ವಿಶೇಷ ಅಭಿಷೇಕವು ಸದ್ಭಕ್ತರ ಸಮ್ಮುಖದಲ್ಲಿ ನಡೆಯಿತು.
ಪಟ್ಟಣದ ಎಪಿಎಂಸಿ ಗಣಪತಿ ಮಂದಿರದಲ್ಲಿ ಯಲಬುರ್ಗಾ ಶ್ರೀಧರ ಮರುಡಿ ಹಿರೇಮಠದ ಬಸವಲಿಂಗ ಶಿವಾಚಾರ್ಯರು, ನರೇಗಲ್ ಮಲ್ಲಿಕಾರ್ಜುನ ಶಿವಾಚಾರ್ಯರು, ಅಭಿನವ ಒಪ್ಪತ್ತೇಶ್ವರ ಸ್ವಾಮಿಜಿ ಹಾಗೂ ಗುರುಸಿದ್ದೇಶ್ವರ ಸ್ವಾಮಿಜಿಗಳು ರೇಣುಕಾಚಾರ್ಯರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯುದ್ದಕ್ಕೂ ಭಕ್ತರು ಭಕ್ತಿಯಿಂದ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ರೇಣುಕ ಮಹಾರಾಜಕೀ ಜೈ ಎಂದು ಘೋಷಣೆ ಹಾಕುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡು ಸಾವಿರಾರು ಸದ್ಭಕ್ತರು ಸ್ವಾಮಿಯ ದರ್ಶನ ಪಡೆದು ಪುನೀತರಾದರು.
ಚಂಬಣ್ಣ ಚವಡಿ, ಶಿವಕುಮಾರ ಕೋರಧ್ಯಾನಮಠ, ಗುರುಸಿದ್ದಯ್ಯ ಸೂಗಿರಯ್ಯನಮಠ, ಪ್ರಕಾಶ ಕಾರಡಗಿಮಠ, ಅಮರಯ್ಯ ಗೌರಿಮಠ, ಪ್ರಭು ಹಿರೆಮಠ, ಉಮಾಪತಿ ಜಡಿಮಠ, ನಾಗಯ್ಯ ಗೊಂಗಡಶೆಟ್ಟಿಮಠ, ಶರಣಯ್ಯ ಸಾಲಿಮಠ, ಬಸಯ್ಯ ಕಲ್ಮಿಂಗಿಮಠ, ಸಿ.ಸಿ.ಚಿನ್ನಯ್ಯನಮಠ, ಸಂತೋಷ ಚಿಕ್ಕಮಠ, ವಿರೇಶ ಸರಗಾಣಾಚಾರಿಮಠ, ಪ್ರದೀಪ ಗೊಂಗಡಶೆಟ್ಟಿಮಠ, ಶಿವಯ್ಯ ಗ್ಯಾನಯನಮಠ, ಗುರು ಕಲ್ಮಂಗಿಮಠ, ಕುಮಾರ ಗೌರಿಮಠ ಸೇರಿದಂತೆ ನೂರಾರು ಸದ್ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

loading...