ಸ್ನೇಹ ಸಮ್ಮೆಳನ ಕಾರ್ಯಕ್ರಮ

0
28
loading...

ಕನ್ನಡಮ್ಮ ಸುದ್ದಿ-ಮುಂಡಗೋಡ : ಮಕ್ಕಳಿಗೆ ಶಿಕ್ಷಣದೊಂದಿಗೆ ಸಾಂಸ್ಕøತಿಕ ಹಾಗೂ ಕ್ರೀಡೆ ಕೂಡ ಅಷ್ಟೇ ಮುಖ್ಯ ಎಂದು ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಟಿ.ಪಾಟೀಲ ಹೇಳಿದರು.
ತಾಲೂಕಿನ ಇಂದೂರ ಗ್ರಾಮದ ಶ್ರೀ ಮಂಜುನಾಥ ಶಿಕ್ಷಣ ಮತ್ತು ಸಮಾಜ ಸೇವಾ ಟ್ರಸ್ಟ್ ಆರ್.ಕೆ.ಎನ್ ಕಾನ್ವೆಂಟ್ ಸ್ಕೂಲ್ ನ ಸ್ನೇಹ ಸಮ್ಮೆಳನ ಉದ್ಘಾಟಿಸಿ ಮಾತನಾಡುತ್ತಿದ್ದರು. ಸಾಕಷ್ಟು ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಕ್ಷೇತ್ರ ವ್ಯಾಪಾರಿಕರಣವಾಗಿರುವ ಇಂದಿನ ದಿನಗಳಲ್ಲಿ ಆಂಗ್ಲ ಮಾದ್ಯಮ ಶಿಕ್ಷಣ ಸಾಮಾನ್ಯ ಜನರಿಗೆ ನಿಲುಕದ ನಕ್ಷತ್ರದಂತಾಗಿದೆ. ಆದರೆ ಪ್ರತಿಯೊಬ್ಬರಿಗೂ ಆಂಗ್ಲ ಮಾದ್ಯಮ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಮಂಜುನಾಥ ಸಂಸ್ಥೆ ಕಾರ್ಯನಿರ್ವಹಿಸುತ್ತಿರುವುದರಿಂದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಮಕ್ಕಳಿಗೆ ದಾರಿ ದೀಪವಾಗಿದೆ. ಯಾವುದೇ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವುದು ಅಷ್ಟು ಸುಲಭದ ಮಾತಲ್ಲ ಎಂದ ಅವರು, ಶಿಕ್ಷಕರೊಂದಿಗೆ ಪಾಲಕರು ಕೂಡ ತಮ್ಮ ಮಕ್ಕಳ ಶಿಕ್ಷಣ ಗುಣಮಟ್ಟದ ಬಗ್ಗೆ ನಿಗಾವಹಿಸಿದರೆ ಮಾತ್ರ ಮಕ್ಕಳ ಪ್ರಗತಿ ಸಾದ್ಯ ಎಂದರು.
ಶ್ರೀ ಮಂಜುನಾಥ ಶಿಕ್ಷಣ ಮತ್ತು ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಧರ್ಮರಾಜ ನಡಗೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧಿಕಾರ ಕ್ಷಣಿಕ ಆದರೆ ಜೀವನದಲ್ಲಿ ನಾವು ಮಾಡುವ ಸಾದನೆ ಮುಖ್ಯ. ಹಿಂದಿನ ದಿನಗಳಲ್ಲಿ ಶಿಕ್ಷಣವಿಲ್ಲದೇನೂ ಬದುಕಬಹುದಿತ್ತು. ಈಗ ಯಾವುದೇ ಕ್ಷೇತ್ರದಲ್ಲಿ ಶಿಕ್ಷಣವಿಲ್ಲದೇ ಇದ್ದರೆ ನಡೆಯುವುದಿಲ್ಲ. ಮಕ್ಕಳಿಗೆ ಸ್ಪರ್ದಾ ವೇದಿಕೆ ಕಲ್ಪಸಿಕೊಡುವ ಉದ್ದೇಶ ನಮ್ಮದಾಗಿದೆ ಎಂದು ಹೇಳಿದರು.
ತಾ.ಪಂ ಅಧ್ಯಕ್ಷೆ ದ್ರಾಕ್ಷಾಯಿಣಿ ಸುರಗಿಮಠ, ಪ.ಪಂ ಉಪಾಧ್ಯಕ್ಷ ಫಕ್ಕೀರಪ್ಪ ಅಂಟಾಳ, ವಸಂತ ಕೊಣಸಾಲಿ, ನಾಗರಾಜ ಅಂಟಾಳ, ಎಮ್.ಸಿ.ಪಾಟೀಲ, ಗುಡ್ಡಪ್ಪ ಪೂಜಾರ, ಬ್ರಿಷ್ಟನಗೌಡ ಪಾಟೀಲ, ಶಿವಾಜಿ ದೇವಿಕೊಪ್ಪ, ಎಮ್.ಐ.ನಡಗೇರಿ, ಅಶೋಕ ತಡಸದ, ಪತ್ರಕರ್ತ ಆರ್.ಎನ್.ನಾಯ್ಕ, ಸಂತೊಷ ಶೆಟ್ಟಪ್ಪನವರ, ವಿಜಯ ಮಲ್ಲಣ್ಣವರ, ಸಿದ್ದನಗೌಡ ಬಿಸನಗೌಡ್ರ, ಸಾಬಜಾನ ಮುಂತಾದವರಿದ್ದರು. ಧರ್ಮರಾಜ ನಡಗೇರಿ ಸ್ವಾಗತಿಸಿದರು. ಜಯಾ ನರಗುಂದ ಹಾಗೂ ಶ್ವೇತಾ ನಿರೂಪಿಸಿದರು. ಎಸ್.ಐ. ಕುನ್ನೂರ ಬಹುಮಾನ ವಿತರಣೆ ನೆರವೇರಿಸಿದರು.

loading...