85ನೇ ಮಾಸಿಕ ಶಿವಾನುಭವ ಕಾರ್ಯಕ್ರಮ: ನಿಡಗುಂದಿ, ಮುಧೋಳರಿಗೆ ಸನ್ಮಾನ

0
67
loading...

ಕನ್ನಡಮ್ಮ ಸುದ್ದಿ-ಕೊಪ್ಪಳ : ಇತ್ತೀಚಿಗೆ ಯಲಬುರ್ಗಾ ತಾಲೂಕಿನ ತಳಕಲ್ಲ ಗ್ರಾಮದ ಅರಳಿಬೆಂಚಿ ಉಡರಾಜ ಮುಖಿ ಉಡಚ್ಚಮ್ಮದೇವಿ ದೇವಸ್ಥಾನದಲ್ಲಿ 185ನೇಯ ಮಾಸಿಕ ಶಿವಾನುಭವ ಜರುಗಿತು.
ಈ ಶಿವಾನುಭವ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ರಂ ರಾವ್ ನಿಡಗುಂದಿ ಹಾಗೂ ತಾಲೂಕ ಕನ್ನಡ ಸಮ್ಮೇಳದ ಅಧ್ಯಕ್ಷರಾಧ ಎ.ಪಿ ಮುಧೋಳ ಇವರನ್ನು ಶಿವಾನುಭ ಸಮಿತಿಯ ಸರ್ವಸದಸ್ಯರಿಂದ ಹಾಗೂ ತಳಕಲ್ಲ ತಳಬಾಳ ಗ್ರಾಮಗಳ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಿವಾನುಭವ ಸಮಿತಿಯ ಸಂಚಾಲಕ ಮಲ್ಲಿಕಸಾಬ್ ನೂರಬಾಷಾ, ಹೆಚ್.ಕೆ ಹೈತಾಪೂರ, ಬಸವರಾಜ ನರೆಗಲ್ಲ, ಭೀಮಣ್ಣ ಹೆಳವರ, ಅಣ್ಣಪ್ಪ ಬಂಗಾರಿ, ರಾಮಚಂದ್ರ ಉಪ್ಪಾರ ಹಾಗೂ ಊರಿನ ಗುರುಹಿರಿಯರು, ಗ್ರಾ.ಪಂ ಸರ್ವ ಸದಸ್ಯರು ಉಪಸ್ಥಿತರಿದ್ದರು

loading...