ಅಂಕೋಲಾದಲ್ಲಿ ಕನ್ನಡ ಚಂದ್ರಮದಿಂದ ಯುಗಾದಿ ಕವಿಗೋಷ್ಠಿ

0
39
loading...

ಕನ್ನಡಮ್ಮ ಸುದ್ದಿ-ಅಂಕೋಲಾ : ಪ್ರತಿಯೊಬ್ಬರೂ ಕವಿತೆಗಳನ್ನು ಬರೆಯುವುದಕ್ಕಿಂತ ಮುಂಚಿತವಾಗಿ ಸಾಕಷ್ಟು ಅಭ್ಯಾಸವನ್ನು ಮಾಡಬೇಕು. ಶಬ್ಧ ಭಂಡಾರವಿದ್ದರೆ, ತಾವು ರಚಿಸುವ ಕವಿತೆಯಲ್ಲಿ ಸತ್ವವಿರುತ್ತದೆ. ಅದು ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿಯಲು ಸಹಕಾರಿಯಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಹೆಚ್ಚೆಚ್ಚು ಓದುವಂತಾಗಬೇಕು ಎಂದು ಕೃಷ್ಣ ನಾಯಕ ಹಿಚಕಡ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತ ಸಭಾಭವನದಲ್ಲಿ ಕನ್ನಡ ಚಂದ್ರಮದವರು ಹಮ್ಮಿಕೊಂಡ ಯುಗಾದಿ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉಪನ್ಯಾಸಕ ಮಂಜುನಾಥ ಇಟಗಿ ಆಶಯ ನುಡಿ ಗಳನ್ನಾಡಿದರು. ಕತೆಗಾರ ಡಾ. ಆರ್.ಜಿ. ಗುಂದಿ ಮಾತನಾಡಿದರು.
ಚಿಂತಕ ಗೌತಮ ಗಾಂವಕರ ಮಾತನಾಡಿ, ಅಂಕೋಲಾ ಸಾಹಿತ್ಯ ವಲಯದಲ್ಲಿ ಗುಂಪುಗಾರಿಕೆ ಕಂಡು ಬರುತ್ತಿದ್ದು, ಏಕವ್ಯಕ್ತಿಯ ಸ್ವಾಧೀನಕ್ಕೆ ಒಳಪಟ್ಟಂತಿದೆ. ಜಿಲ್ಲೆಯಲ್ಲಿ ಸಾಹಿತ್ಯ ಚಟುವಟಿಕೆಗಳಲ್ಲಿ ಅಂಕೋಲಾದಲ್ಲಿ ಈಗ ಅತೀ ಹೆಚ್ಚು ವೈಮನಸ್ಸುಗಳು ಅಧಿಕವಾಗುತ್ತಿದೆ. ಕನ್ನಡ ಭವನದಲ್ಲಿ ನಡೆಯ ಬೇಕಿದ್ದ ಸಭೆಗಳು ಇನ್ಯಾ ರದ್ದೋ ಕೊಠಡಿಯಲ್ಲಿ ನಡೆಯುತ್ತಿರುವುದು ವಿಷಾಧಕರ ಎಂದರು.
ಕವಿಗೋಷ್ಠಿ : ಪ್ರೊ. ಮೋಹನ ಹಬ್ಬು, ಪ್ರೊ. ನಾಗೇಶ ದೇವ ಅಂಕೋಲೆಕರ, ನಾಗಮಣಿ ನಾಯಕ, ನಾಗೇಂದ್ರ ನಾಯಕ, ಜಿ.ಯು. ನಾಯಕ, ರೇಣುಕಾ ರಮಾನಂದ, ಜಿ.ಆರ್. ತಾಂಡೇಲ, ಶಿವಬಾಬಾ ನಾಯ್ಕ, ಹೊನ್ನಪ್ಪ ನಾಯಕ, ಜೆ. ಪ್ರೇಮಾನಂದ, ಪುಷ್ಪಾ ನಾಯ್ಕ, ಕೃಷ್ಣ ನಾಯ್ಕ, ಕಲಾ ಭಟ್, ವೆಂಟು ಮಾಸ್ತರ, ಫಾಲ್ಗುಣ ಗೌಡ ಮುಂತಾದವರು ಸ್ವರಚಿತ ಕವನಗಳನ್ನು ವಾಚಿಸಿದರು. ಕನ್ನಡ ಚಂದ್ರಮದ ಅಧ್ಯಕ್ಷ ಜಗದೀಶ ಜಿ.ನಾಯಕ ಹೊಸ್ಕೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಸಿ.ಸಿ.ಅಧಿಕಾರಿ ಜಿ.ಆರ್. ತಾಂಡೇಲ ನಿರೂಪಿಸಿದರು. ವರದಿಗಾರ ನಾಗರಾಜ ಮಂಜಗುಣಿ ವಂದಿಸಿದರು.

loading...