ಅಂಬೇಡ್ಕರ್ ಸೇನೆಯಿಂದ ಪ್ರತಿಭಟನೆ

0
26
loading...

ಕನ್ನಡಮ್ಮ ಸುದ್ದಿ-ದಾಂಡೇಲಿ : ನಗರದ ಸೋಮಾನಿ ವೃತ್ತದಲ್ಲಿ ಡಾ : ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಿಸಬೇಕು ಮತ್ತು ಸೋಮಾನಿ ವೃತ್ತಕ್ಕೆ ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಸೇನೆಯು ಸೋಮಾನಿ ವೃತ್ತದ ಸಮೀಪ ಶನಿವಾರ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ನಗರದ ಪ್ರಮುಖ ವೃತ್ತದಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ಮತ್ತು ಪ್ರಮುಖ ವೃತ್ತಕ್ಕೆ ಅಂಬೇಡ್ಕರ್ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಆಗ್ರಹಿಸಿ ಕಳೆದ ಕೆಲ ವರ್ಷಗಳಿಂದ ಮನವಿ ಮಾಡಿಕೊಂಡು ಬರಲಾಗುತ್ತಿದ್ದರೂ, ಈ ವರೆಗೆ ನಗರ ಸಭೆ ಯಾವುದೆ ಕ್ರಮ ಕೈಗೊಳ್ಳದಿದ್ದ ಕಾರಣ ಅಂಬೇಡ್ಕರ್ ಸೇನೆಯು ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಬೇಡಿಕೆ ಈಡೇರುವರೆಗೆ ಪ್ರತಿಭಟನೆಯನ್ನು ಮುಂದುವರಿಸಲಾಗುವುದೆಂದು ಅಂಬೇಡ್ಕರ್ ಸೇನೆಯ ಹಳಿಯಾಳ ತಾಲ್ಲೂಕು ಅಧ್ಯಕ್ಷ ಚಂದ್ರಕಾಂತ ನಡಿಗೇರ ಅವರು ಪತ್ರಿಕೆಗೆ ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರುಗಳಾದ ಸಚ್ಚಿನ್ ಪೊಕಳೆ, ಸುಭಾಶ ಬೋವಿವಡ್ಡರ, ಸಹದೇವ ಕಾಂಬಳೆ, ಗಿರೀಶ ಹರಿಜನ, ಯಲ್ಲಪ್ಪ ಕಾಂಭಲೆ, ಸುನೀಲ ಕಾಂಬಳೆ, ರತ್ನಾ ನಾಗರಾಜ ಬಳ್ಳಾರಿ, ನಿರ್ಮಲ, ದ್ಯಾಮಣ್ಣ ಹರಿಜನ ಮೊದಲಾದವರು ಉಪಸ್ಥಿತರಿದ್ದರು.

loading...