ಅನಧಿಕೃತ ಸುಣ್ಣದ ಬಟ್ಟಿಗಳನ್ನು ಸ್ಥಳಾಂತರಿಸುವಂತೆ ಮನವಿ

0
22
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ಕಾಕತಿಯಲ್ಲಿ ಇರುವ ಅನಧಿಕೃತ ಸುಣ್ಣದ ಗಂಜಿ ಮಾಡುವ ಬಟ್ಟಿಗಳಿಂದ ಪರಿಸರ ಮಾಲಿನ್ಯವಾಗುತಿದ್ದು, ಈ ಸುಣ್ಣದ ಗಂಜಿ ಮಾಡುವ ಬಟ್ಟಿಗಳನ್ನು ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಕಾಕತಿ ನಗರದ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಾಕತಿ ನಗರದಲ್ಲಿ ಹಲವಾರು ದಿನಗಳಿಂದ ಅನಿಧಿಕೃತವಾಗಿ ಸುಣ್ಣದ ಬಟ್ಟಿಗಳನ್ನು ನಡೆಸುತ್ತಿದ್ದು, ಇದರಿಂದ ಇಲ್ಲಿನ ಪರಿಸರಕ್ಕೆ ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ .ಇದರಿಂದ ಇಲ್ಲಿನ ಅನಿಧಿಕೃತ ಸುಣ್ಣದ ಬಟ್ಟಿಗಳನ್ನು ಕೂಡಲೇ ಸ್ಥಳಾಂತರಿಸಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಸಂಬಂಧ ಪಟ್ಟ ಎಲ್ಲ ಇಲಾಖೆಗಳಿಗೆ ಮನವಿ ಮೂಲಕ ತಿಳಿಸಲಾಗಿದೆ. ಅಧಿಕಾರಿಗಳು ವಿಕ್ಷಣೆಗೆ ಬಂದಾಗ, ಸುಣ್ಣದ ಬಟ್ಟಿಗಳನ್ನು ಬಂದಮಾಡಿ, ಇದರಿಂದ ವಾಯುದೇ ಪರಿಸರಕ್ಕೆ ಹಾನಿಯಾಗುವುದಿಲ್ಲ ಎಂದು ಸುಣ್ಣದ ಬಟ್ಟಿ ಮಾಲಿಕರು ಅಧಕಾರಿಗಳನ್ನು ಮರಳಿ ಕಳಿಸುತ್ತಾರೆ ಎಂದು ಆರೋಪಸಿದ್ದಾರೆÉ.
ಈ ವೇಳೆ ಕಾಕತಿ ನಗರದ ಕೆಲವು ಸಾರ್ವಜನಿಕರು ಇದ್ದರು.

loading...