ಆದಿ ಬಣಜಿಗ ಸ್ವಾಭಿಮಾನಿ ಸಮಾವೇಶ 23 ರಂದು

0
61
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ : ಅಖಿಲ ಕರ್ನಾಟಕ ಆದಿಬಣಜಿಗ ಸಮಾಜದ ರಾಜ್ಯಮಟ್ಟದ ಪ್ರಪ್ರಥಮ ಸದೃಢ ಸ್ವಾಭಿಮಾನಿ ಸಮಾವೇಶ ಇದೇ ದಿನಾಂಕ 23 ರಂದು ಮುಂಜಾನೆ 11ಗಂಟೆಗೆ ಕೂಡಲ ಸಂಗಮ ಬಸವ ಸಭಾ ಭವನದಲ್ಲಿ ನಡೆಯಲಿದೆ. ನಗರದ ಪತ್ರ ಕರ್ತರ ಭವನದಲ್ಲಿಂದು ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾದ್ಯಕ್ಷ ಆರ್ ವಿ ಶಂಕರಗೌಡರ ಅವರು ಆದಿನ ನಡೆಯುವ ಸಮಾವೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಸಾಧಕರನ್ನು ಹಾಗೂ ಶಿವಶಂಕರ ಬಿರಾದಾರ ಸಾಹಿತ್ಯ ಮತ್ತು ಗಾಯನವನ್ನೊಳಗೊಂಡ ಆದಿ ವೀರ ಶೈವರು ಎಂಬ ಆಡಿಯೋ ಕ್ಯಾಸೆಟ್ ಬಿಡುಗಡೆ ಮಾಡಲಾಗುವುದು ಎಂದರು. ಆದಿ ಬಣಜಿಗ ಸಮಾಜದವರನ್ನು 2 ಎ ಪ್ರವರ್ಗಕ್ಕೆ ಸೇರಿಸಬೇಕೆಂದು ಕೇಂದ್ರ ಸರಕಾರದ ಮೀಸಲಾತಿ ಯೋಜನೆಯಡಿ ಹಿಂದುಳಿದ ವರ್ಗಕ್ಕೆ ಸೇರಿಸಬೇಕು. ಕರ್ನಾಟಕ ಲೋಕ ಸೇವಾ ಆಯೊಗ, ಹಿಂದುಳಿದ ವರ್ಗಗಗಳ ಆಯೋಗ ಹಾಗೂ ಇನ್ನೀತರ ನಿಗಮ ಮಂಡಳಿಗಳಿಗೆ ಆದಿ ಬಣಜಿಗ ಸಮಾಜಕ್ಕೆ ಪ್ರಾತಿನಿಧ್ಯ ನೀಡುವುದು ಸೇರಿದಂತೆ ಇತರ ಬೇಡಿಕೆಗಳನ್ನು ಸಮಾವೇಶದ ಮೂಲಕ ಸರಕಾರಕ್ಕೆ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಅವರು ತಿಳಿಸಿದರು
ಸಮಾವೇಶದಲ್ಲಿ ಕೇಂದ್ರ ಸಚಿವ ರಮೇಶ ಜಿಗಜಿನಗಿ , ಮಾಜಿ ಸಿ ಎಂ ಗಳಾದ ಧರಂ ಸಿಂಗ್, ಏಡಿಯೂರಪ್ಪ, ಕುಮಾರ ಸ್ವಾಮಿ, ಸಚಿವರಾದ ಎಚ್ಕೆ ಪಾಟೀಲ, ಡಾ. ಶರಣ ಪ್ರಕಾಶ ಪಾಟೀಲ, ಎಂ ಬಿ ಪಾಟೀಲ, ವಿನಯ ಕುಲಕರ್ಣಿ, ರಾಜ್ಯ ಹಿಂದುಳಿದ ಆಯೋಗಗಳ ಅದ್ಯಕ್ಷ ಎಚ್ ಕಾಂತರಾಜು, ಡಾ. ಬಿ ಎಲ್ ಶಂಕರ್, ಮಾಜಿ ಸಚಿವರಾದ ಸಿ ಎಂ ಉದಾಸಿ, ಬಸವರಾಜ ಬೊಮ್ಮಾಯಿ, ಮಾಜಿ ಶಿಕ್ಷಣ ಮಂತ್ರಿ ಬಸವರಾಜ ಹೊರಟ್ಟಿ, ಎಂ ಪಿ ನಾಡಗೌಡಾ , ಶಾಸಕ ಎನ್ ಎಚ್ ಕೋನರೆಡ್ಡಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಮೂರುಸಾವಿರಪ್ಪಾ ಕೊರವಿ, ಮಲ್ಲಪ್ಪ ಸಾಂಬಾಜಿ, ಶೇಖಣ್ಣ ಹೈಬತ್ತಿ, ಬಸವರಾಜ ಮುಳ್ಳೊಳ್ಳಿ, ಚನ್ನಬಸಗೌಡಾ ಪಾಟೀಲ, ವಿರೂಪಾಕ್ಷಿ ಕಾರಡಗಿ, ಎಸ್ ಆರ್ ಡೇಂಗಿ ಮತ್ತೀತರರಿದ್ದರು.

loading...