ಇಂದಿನ ಶಿಕ್ಷಣ ಪಂಡಿತರನ್ನಾಗಿಸುತ್ತದೆ ಹೊರತು ಜ್ಞಾನಿಗಳನಲ್ಲ

0
35
loading...

ಕನ್ನಡಮ್ಮ ಸುದ್ದಿ-ಧಾರವಾಡ : ಭಾರತ ಮೊದಲಿನಿಂದಲೂ ಜ್ಞಾನ ಪ್ರಧಾನ ರಾಷ್ಟ್ರ. ಬದುಕಿನ ಅನುಭವದ ಹಿನ್ನೆಲೆಯಲ್ಲಿ ಜ್ಞಾನಕ್ಕಾಗಿ ಕೆಲಸ ಮಾಡಿದ ವ್ಯಕ್ತಿಗಳನ್ನು ಇಂದು ದೇವರನ್ನಾಗಿಸಿದ್ದೇವೆ ಹನ್ನೇರಡನೆ ಶತಮಾನದಲ್ಲಿಯೇ ಸಾಮಾಜಿಕ ಸಮಾನತೆಗೆ ಹೋರಾಡಿದ ಬಸವಣ್ಣನವರನ್ನು ದೇವರನ್ನಾಗಿಸಿದ್ದೇವೆ ಎಂದು ರಾಯಚೂರಿನ ಸುದ್ದಿ ಮೂಲ ಪತ್ರಿಕೆ ಸಂಪಾದಕ, ಮೊಹರೆ ಹಣಮಂತರಾಯ ಪ್ರಶಸ್ತಿ ಪುರಸ್ಕøತ ಬಸವರಾಜ ಸ್ವಾಮಿ ಅಭಿಪ್ರಾಯಪಟ್ಟರು.
ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಆಯೋಜಿಸಿದ್ದ ಪತ್ರಕರ್ತ ಮೊಹರೆ ಹಣಮಂತರಾಯ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಶಿಕ್ಷಣ ಪಂಡಿತರನ್ನಾಗಿಸುತ್ತದೆ ಹೊರತು ಜ್ಞಾನಿಗಳನಲ್ಲ, ಜ್ಞಾನವೆನ್ನುವುದು ದೇಹದಲ್ಲಿ ಸಂಗಮ. ದೇಶದಲ್ಲಿ ಜ್ಞಾನಕ್ಕಾಗಿ ಕೆಲಸ ಮಾಡಿದವರನ್ನು ದೇವರನ್ನಾಗಿಸಿರುವುದು ಸರಿಯಲ್ಲ. ವಿದ್ಯಾರ್ಥಿಗಳಿಗೆ ಅನುಭವ ಜನ್ಯ ತಿಳುವಳಿಕೆ ಅಗತ್ಯ. ಅನುಭವದಲ್ಲಿ ಒರೆಗಲ್ಲಿಗೆ ಹಚ್ಚಬೇಕು ಸದ್ಯ ದೇಶದಲ್ಲಿ ಮುದ್ರಣ ಮಾಧ್ಯಮ ಪರವಾಗಿಲ್ಲ, ಆದರೆ ಇಲೆಕ್ಟ್ರಾನಿಕ್ ಮೀಡಿಯಾ ಕೆಟ್ಟಿದೆ. ಇಲ್ಲಿ ಕೆಲಸ ಮಾಡುವ ಬಹಳಷ್ಟು ಜನರಿಗೆ ಸರಿಯಾಗಿ ಮಾಧ್ಯಮದ ಹಿನ್ನೆಲೆ ಇರುವುದಿಲ್ಲ.ಹಣ ಪಡೆದುಕೊಳ್ಳಲು ಉನ್ನತ ಸ್ಥಾನದಲ್ಲಿರುವವರನ್ನು ದುರ್ಬಳಕೆ ಮಾಡಲಾಗುತ್ತಿದೆ.ಮೂವತ್ತು ನಾಲ್ವತ್ತು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯನ್ನು ಒಂದೇ ಒಂದು ಶಬ್ದದ ಬಳಕೆ ಮೂಲಕ ಕೊಲೆ ಮಾಡಲಾಗುತ್ತಿದೆ ಎಂದರು.
ಮಾಧ್ಯಮದಲ್ಲಿರುವವರಿಗೆ ಭಾವ(ಗೆಳೆತನ) ಹೆಚ್ಚಬೇಕು. ದುರ್ಭಾವ( ದ್ವೇಷ) ಕಡಿಮೆ ಇರಬೇಕು ಪತ್ರಕರ್ತರ ಮನೋಭಾವನೆಗಳಿಗೆ ಬೇಸತ್ತು ಕೆಲ ಉದ್ದಿಮೆದಾರರು ಸ್ವತ ಟಿ.ವಿ.,ಪೇಪರ ಮಾಡಿದರು. ಪತ್ರಿಕೋದ್ಯಮದಲ್ಲಿ ಇತ್ತೀಚೆಗೆ ಖ್ಯಾತ ಪತ್ರಕರ್ತರನ್ನು ಎಸ್.ಎಂ.ಎಸ್. ಸಂದೇಶದ ಮೂಲಕ ಮನೆಗೆ ಕಳಿಸಿರುವ ಘಟನೆ ಸರಿಯಾದುದಲ್ಲ. ಪ್ರತಿಯೊಬ್ಬರು ಮೊದಲು ತಮ್ಮನ್ನು ತಾವು ಸರಿಪಡಿಸಿಕೊಳ್ಳಬೇಕು ಅಂದಾಗ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗುತ್ತದೆ ಎಂದರು.
ವಿಭಾಗದ ಮುಖ್ಯಸ್ಥೆ ಹಾಗೂ ಸಮಾಜ ನಿಕಾಯ ಡೀನ್ ಪ್ರೊ ವಿ.ಎ.ಅಮ್ಮಿನಭಾವಿ ಅಧ್ಯಕ್ಷತೆವಹಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಜಗತ್ತು ಸಕಾರಾತ್ಮಕ ಮತ್ತು ನಕಾರಾತ್ಮಕ ಮನೋಭಾನೆ ಮೇಲೆ ನಿಂತಿದೆ.ವಿದ್ಯಾರ್ಥಿಗಳು ತರ್ಕಬದ್ಧವಾಗಿ ಚಿಂತಿಸುವ ಮತ್ತು ತಮ್ಮನ್ನು ತಾವು ಅರಿತುಕೊಳ್ಳುವುದು. ಕೋಪದ ನಿರ್ವಹಣೆ ಅಗತ್ಯ ಎಂದರು. ಡಾ.ಜೆ.ಎಂ.ಚಂದುನವರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಅಕ್ಷಯ ಜೋಶಿ ನಿರೂಪಿಸಿದರು. ಡಾ.ಸಂಜಯ ಮಾಲಗತ್ತಿ ವಂದಿಸಿದರು.

loading...