ಏ.6 ರಂದು ರಾಮದುಗ೯ದಲ್ಲಿ ಜೆಡಿಎಸ್ ಸಮಾವೇಶ: ಮಾಡಲಗಿ

0
34
loading...

ಕನ್ನಡಮ್ಮ ಸುದ್ದಿ

ಬೆಳಗಾವಿ:1 ರಾಮದುಗ೯ ತಾಲೂಕಿನ ಪ್ರಗತಿ ಶಾಲೆಯ ಆವರಣದಲ್ಲಿ ಏ. 6ರಂದು ಜೆಡಿಎಸ್ ಕಾಯ೯ಕತ೯ರ ಬೃಹತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಹೇಳಿದರು.
ಅವರು ಶನಿವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ‌ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ರಾಜ್ಯದ ಜನತೆಗೆ ಆಗುತ್ತಿರುವ ಅನ್ಯಾಯ, ರೈತರ ಆತ್ಮಹತ್ಯೆ ಸೇರಿದಂತೆ ನಾಡಿನ‌ ವಿವಿಧ ಸಮಸ್ಯೆಯನ್ನು‌ ಬಗೆಹರಿಸುವ ನಿಟ್ಟಿನಲ್ಲಿ ಈ ‌ಬೃಹತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ರೈತರು ಆತ್ಮ ಹತ್ಯೆ ಮಾಡಿಕೊಂಡರೂ ಕೇಂದ್ರ ಹಾಗೂ ರಾಜ್ಯ ಸರಕಾರ ಬಜೆಟ್ ನಲ್ಲಿ ಸಾಲಮನ್ನಾ ಮಾಡುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ ರೈತರ ಸಾಲ ಮನ್ನಾ‌ ಮಾಡಲು ಎರಡೂ ಸರಕಾರಗಳು‌ ಮೀನಮೇಷ ಎಣಿಸುತ್ತಿವೆ. ಇವರಿಗೆ ರೈತರ ಬಗ್ಗೆ ಕಳಕಳಿಯಿಲ್ಲ. ಆದ್ದರಿಂದ ರೈತರ ಸಲಹೆ ಪಡೆದುಕೊಂಡು ರಾಮದುಗ೯ದಲ್ಲಿ ಸಮಾವೇಶವನ್ನು‌ ನಡೆಸಲಾಗುತ್ತಿದೆ.
ಜೆಡಿಎಸ್ ಕಾಯ೯ಕತ೯ರ ಸಮಾವೇಶದಲ್ಲಿ ಮಾಜಿ‌ ಮುಖ್ಯಮಂತ್ರಿ ಕುಮಾರಸ್ವಾಮಿ, ವಿಧಾನ ಸಭಾ ಸದಸ್ಯ ಬಸವರಾಜ ಹೋರಟ್ಟಿ‌ಸೇರಿದಂತೆ ಮೊದಲಾದವರು ಸಮಾವೇಶದಲ್ಲಿ‌ಭಾಗವಹಿಸಲಿದ್ದಾರೆ ಎಂದರು.
ರಾಜ್ಯದ ಸಂಸದರು ಪ್ರಧಾನಿ ಸಭೆ ಕರೆದ ಸಂದಭ೯ದಲ್ಲಿ ಈ ಭಾಗದ ಸಮಸ್ಯೆ ಬಗೆ ಹರಿಸುವಲ್ಲಿ ಪ್ರಯತ್ನ ಮಾಡದಿರುವುದು ವಿಪಯಾ೯ಸದ ಸಂಗತಿಯಾಗಿದೆ. ರಾಜ್ಯದ ಸಂಸದರಿಗೆ ನಾಡಿನ ಜನರ ಹಿತ ಕಾಯುವ ಮನಸ್ಸಿಲ್ಲ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಫೈಜೂಲಾ ಮಾಡಿವಾಲೆ, ಚನ್ನಪ್ಪ ವಗ್ಗನವರ ಸೇರಿದಂತೆ ಮೊದಲಾದವರು ಹಾಜರಿದ್ದರು.

loading...