ಕಂಪ್ಯೂಟರ್ ಶಾಪ್ ನಲ್ಲಿ ಯುವಕ ನೇಣಿಗೆ ಶರಣು

0
25
loading...

ಕನ್ನಡಮ್ಮ ಸುದ್ದಿ
ಚಿಕ್ಕೋಡಿ 24: ಪಟ್ಟಣದಲ್ಲಿ ಕೆಲ ದಿನಗಳ ಹಿಂದೆ ಕಂಪ್ಯೂಟರ ಶಾಪ್ ತೆರೆದಿದ್ದ ಯುವಕ ಜೀವನದ ಮೇಲಿನ ಜಿಗುಪ್ಸೆಯಿಂದಾಗಿ ಕೆ.ಸಿ.ರಸ್ತೆಯಲ್ಲಿರುವ ತನ್ನ ಅಂಗಡಿಯಲ್ಲಿಯೇ ಯುವಕ ನೇಣಿಗೆ ಶರಣಾಗಿರುವ ಘಟನೆ ಜರುಗಿದೆ.
ತಾಲೂಕಿನ ಕೇರೂರ ಗ್ರಾಮದ ಯುವಕ ಮಲಗೌಡ ಚನಗೌಡ ಪಾಟೀಲ(32) ಮೃತ ದುದರ್ೈವಿಯಾಗಿದ್ದು, ವಿದ್ಯಾಭ್ಯಾಸದ ಬಳಿಕ ಸ್ವಯಂ ಉದ್ಯೋಗ ಮಾಡಲು ಮುಂದಾಗಿದ್ದ ಯುವಕ ಆರಂಭದಲ್ಲಿ ಉತ್ತಮ ವಹಿವಾಟು ನಡೆಸಿದ್ದ ಎನ್ನಲಾಗಿದ್ದು, ಇತ್ತೀಚಿನ ದಿನಗಳಲ್ಲಿ ವ್ಯಾಪಾರದಲ್ಲಿ ಅತ್ಯಧಿಕ ನಷ್ಟ ಅನುಭವಿಸಿದ್ದರಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದ ಯುವಕ ಅಂಗಡಿಯಲ್ಲಿ ಯಾರೂ ಇಲ್ಲದ ಸಮಯ ನೇಣಿಗೆ ಶರಣಾಗಿದ್ದಾನೆನ್ನಲಾಗಿದೆ.
ಆದರೆ ಈ ಯುವಕ ನೇಣು ಹಾಕಿಕೊಳ್ಳುವ ಮೊದಲು ಡೆತ್ ನೋಟ್ ಬರೆದಿಟ್ಟಿದ್ದು, ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿಟ್ಟಿದ್ದಾನೆ. ಈ ಕುರಿತು ಚಿಕ್ಕೋಡಿ ಪಿಎಸ್ಐ ಸಂಗಮೇಶ ದಿಡಗಿನಾಳ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದಾರೆ.

loading...