ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೆದೆ ಸಾವು

0
40
loading...

ಬೆಳಗಾವಿ: ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಪೊಲೀಸ್ ಪೆದೆ ಸುರೇಶ ಶ್ರೀಶೈಲ್ ಡೆಂಗಿ (27) ಮೃತ ಪಟ್ಟ ಘಟನೆ ಗುರುವಾರ ನಡೆದಿದೆ.
ಮೃತ ವ್ಯಕ್ತಿಯು ಬೆಂಗಳೂರಿನ ಲೇವೊಟ್ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಮಂಗಳವಾರ ಕಾಣೆಯಾದ ವ್ಯಕ್ತಿಯನ್ನು ಹುಡುಕುವ ಉದ್ದೇಶದಿಂದ ದೂರು ನೀಡಿದ ವ್ಯಕ್ತಿ, ಠಾಣೆಯ ಪಿಎಸ್‍ಐ ಹೈದರಬಾದ್‍ಗೆ ತೆರಳಿದ್ದರು.
ರಾತ್ರಿ 4.30 ಕ್ಕೆ ಕರ್ನುಲ್ ಜಿಲ್ಲೆಯ ಹೆದ್ದಾರಿಯಲ್ಲಿ ಲೆನೋವೂ ಕಾರಿನಲ್ಲಿ ಹೋಗುತ್ತಿದ್ದ ವೇಳೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಪೆದೆ, ದೂರು ನೀಡಿದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಪಿಎಸ್‍ಐಗೆ ಗಂಭೀರ ಗಾಯವಾಗಿದೆ. ಇನ್ನು ವಾಹನ ಚಾಲಕನ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.

loading...