ಕಾಳಿಕಾದೇವಿಗೆ ಮಹಿಳೆಯರಿಂದ ತೊಟ್ಟಿಲು ಸೇವೆ

0
45
loading...

ಕನ್ನಡಮ್ಮ ಸುದ್ದಿ-ಗಂಗಾವತಿ : ನಗರದ ಬಸವಣ್ಣ ವೃತ್ತದಲ್ಲಿರುವ ಎಳುವರೆ ದಶಕಗಳಷ್ಟು ಹಳೇಯದಾದ ಕಾಳಿಕಾದೇವಿ ದೇವಸ್ಥಾನದಲ್ಲಿ ಮಹಿಳೆಯರಿಂದ ಕಾಳಿಕಾದೇವಿಯ ಉತ್ಸವ ಮೂರ್ತಿಗೆ ತೊಟ್ಟಿಲು ಸೇವೆ, ಕಾಣಿಕೆ ಅರ್ಪಣೆ, ಹರಕೆಯಂ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಅರ್ಚಕ ನೀಲಪ್ಪ ನೇತೃತ್ವದಲ್ಲಿ ದೇವಿಗೆ ಅಲಂಕಾರ, ಅಭಿಷೇಕ ನಡೆದವು. ಬಳಿಕ ದೇವಸ್ಥಾನದ ಆವರಣದಲ್ಲಿ ಇರಿಸಲಾಗಿದ್ದ ತೊಟ್ಟಿಲಲ್ಲಿ ದೇವಿಯ ಮೂರ್ತಿಯನ್ನಿಟ್ಟ ಮಹಿಳೆಯರು ತೂಗುವ ಮೂಲಕ ತೊಟ್ಟಿಲು ಸೇವೆ ನೆರವೇರಿಸಿದರು.
ವಿಶ್ವಕರ್ಮ ಸಮುದಾಯದ ಹಿರಿಯರಾದ ಸೀತಮ್ಮ ನೇತೃತ್ವದಲ್ಲಿ ದೇವೇಂದ್ರಕುಮಾರ ಎಂಜಿನೀಯರ್ ಉಷಾ ಹಾಗೂ ಕೃಷ್ಣಮೂರ್ತಿ ಪತ್ತಾರ ಲಕ್ಷ್ಮಿ ದಂಪತಿಗಳು ತೊಟ್ಟಿಲು ಸೇವೆಯ ಜವಾಬ್ದಾರಿ ವಹಿಸಿಕೊಂಡಿದ್ದರು.
ವಿಜಯಲಕ್ಷ್ಮಿ, ಎ.ಸುಮಾ, ಕೆ.ಓ. ಲತಾ, ಸೂಗಮ್ಮ, ಲಕ್ಷ್ಮಿ ಬಡಿಗೇರ, ಪೂರ್ಣಿಮಾ ನಾಗೇಶ, ಸತ್ಯಭಾಮಾ, ಸ್ಮೀತಾ ಜೆ.ಎಂ, ಶ್ರೀದೇವಿ ಬಡಿಗೇರ, ಚೈತ್ರಾ ಶ್ರೀನಿವಾಸ, ಲಕ್ಷ್ಮಿ ಪತ್ತಾರ, ನೇಹಾ, ಸೌಭಾಗ್ಯ ಮೊದಲಾದವರು ತೊಟ್ಟಿಲು ಸೇವೆಯಲ್ಲಿ ಪಾಲ್ಗೊಂಡಿದ್ದರು.
ಕಾಳಿಕಾದೇವಿ ಕ್ಷೇಮಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ನಾಗೇಶ ಕುಮಾರ, ಸುನಿಲ್ ಕುಮಾರ ಪಪತ್ತಾರ, ಮಂಜುನಾಥ ಪತ್ತಾರ, ಅಮರೇಶ ಪತ್ತಾರ, ಕೆ. ವಿಜಯಕುಮಾರ, ರಾಘವೇಂದ್ರ, ವೆಂಕಟೇಶ, ವಿರೂಪಾಕ್ಷಿ, ಸಿದ್ದೇಶ ಬಡಿಗೇರ, ಅನಿಲ್ ಮೊದಲಾದವರಿದ್ದರು.

loading...