ಖಾಸಗಿ ಬಸ್ ಡಿಪೋ ನಿರ್ಮಾಣ: ವಿರೋಧಿಸಿ ಮನವಿ

0
27
loading...

ಕನ್ನಡಮ್ಮ ಸುದ್ದಿ- ಬೆಳಗಾವಿ 3: ಮಾರುತಿ ನಗರದ 3ನೇ ಕ್ರಾಸ್‍ನಲ್ಲಿ ಖಾಸಗಿ ಬಸ್ ಡಿಪೋ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಸೋಮವಾರ ಮಾರುತಿ ನಗರದ 3ನೇ ಕ್ರಾಸ್ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ವಿ.ಆರ್.ಎಲ್ ಲಾಜಿಸ್ಟಿಕ್‍ನವರು ಮಾರುತಿನಗರದ 3ನೇ ಕ್ರಾಸ್‍ನಲ್ಲಿ 27 ಗುಂಟಾದಲ್ಲಿ ಡಿಪೋ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಇಲ್ಲಿ ರಸ್ತೆಯು 24 ಫೂಟ್ ಇದ್ದು ದೊಡ್ಡ ವಾಹನಗಳು ಓಡಾಡಲು ಸೂಕ್ತವಾಗಿಲ್ಲ. ಈ ರಸ್ತೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದು. ಕುಡಿಯುವ ನೀರಿನ ಟ್ಯಾಂಕ್, ಅಂಗನವಾಡಿ ಕೇಂದ್ರ, ಗಣಪತಿ ಮಾರುತಿ ಮಂದಿರವಿದ್ದು ದೇವಸ್ಥಾನಕ್ಕೆ ಬರುವ ಜನರಿಗೆ ಹಾಗೂ ಮಹಿಳೆ ಮತ್ತು ಮಕ್ಕಳಿಗೆ ಓಡಾಡಲು ತೊಂದರೆ ಯಾವುಗುತ್ತಿರುವುದು ತಕ್ಷಣ ವಿಆರ್‍ಎಲ್ ಡಿಪೋ ನಿರ್ಮಾಣ ಮಾಡುತ್ತಿರುವ ಸ್ಥಳಾಂತರ ಮಾಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.

loading...