ಗಡಿ ಕನ್ನಡ ಭವನಕ್ಕೆ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಮನವಿ

0
23
loading...

ಕನ್ನಡಮ್ಮ ಸುದ್ದಿ- ಬೆಳಗಾವಿ:3 ನಗರದ ಗಡಿ ಕನ್ನಡ ಭವನಕ್ಕೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಜಿಲ್ಲೆಯ ಸರ್ವೋದಯ ಸ್ವಯಂ ಸೇವಾ ಸಂಘ ಸೋಮವಾರ ಪ್ರತಿಭಟನೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಗಡಿ ಕನ್ನಡ ಭವನ ಉದ್ಘಾಟನೆ ಆಗಿ ಒಂದೂವರೆ ವರ್ಷ ಕಳೆದರೂ ಸಹ ಭವನಕ್ಕೆ ಇನ್ನೂ ವಿದ್ಯುತ್‍ನ ಸಂಪರ್ಕವಾಗಲಿ, ಧ್ವನಿವರ್ಧಕ ಗಳನ್ನು ಅಳವಡಿಸಿಲ್ಲ. ಕಾರ್ಯಕ್ರಮ ನಡೆದರೆ ಪ್ರೇಕ್ಷಕರಿಗೆ ಕುಳಿತು ಕೊಳ್ಳಲು ಆಸನಗಳ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯು ಇಲ್ಲದಂತಾಗಿದೆ. ಕಟ್ಟಡ ನಿರ್ಮಾಣವಾಗಿ ದಶಕಗಳೇ ಮುಗಿದರೂ ಸಹ ಸರ್ಕಾರದ ನಿರ್ಲಕ್ಷ್ಯದಿಂದ ಭವನವು ಅವ್ಯವಸ್ಥೆಗಳ ಆಗರವಾಗಿದೆ. ಈ ದುರಾವಸ್ಥೆಯಿಂದಲೇ ಜಿಲ್ಲೆಯ ದಕ್ಷಿಣ ಭಾಗದ ಬಹುಸಂಖ್ಯಾತ ನೇಕಾರರಿಗೆ ಹಾಗೂ ಕನ್ನಡ ಅಭಿಮಾನಿಗಳಿಗೆ ಭವನದಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸಲು ಭವನವಿದ್ದರೂ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
7 ದಿನಗಳೊಳಗಾಗಿ ಭವನಕ್ಕೆ ಮೂಲ ಸೌಕರ್ಯಗಳನ್ನು ನೀಡದೇ ಇದ್ದರೆ ಆಮರಣ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಶ್ರೀನಿವಾಸ ತಾಳೂಕರ, ರಾಮಚಂದ್ರ ಢವಳಿ, ವಿನೋದ ಬೆಟಗೇರಿ, ಗಣಪತಿ ಚಿಲ್ಲಾಳ ಹಾಗೂ ಆನಂದ ಲೋಕರಿ ಮೊದಲಾದವರು ಪಾಲ್ಗೊಂಡಿದ್ದರು.

loading...