ಗಿಡ ಮರಗಳನ್ನು ಬೆಳೆಸಿ: ರುದ್ರಪ್ಪ ಲಮಾಣಿ

0
52
loading...

ಕನ್ನಡಮ್ಮ ಸುದ್ದಿ-ಹಾವೇರಿ : ನಗರ ಪ್ರದೇಶದಲ್ಲಿ ಉದ್ಯಾನವನಗಳಿಗೆ ಮೀಸಲಿಟ್ಟ ಜಾಗೆ ಗಳಲ್ಲಿ ದೇವಸ್ಥಾನಗಳನ್ನು ನಿರ್ಮಿಸುವದರ ಬದಲಾಗಿ ಗಿಡ ಮರಗಳನ್ನು ಬೆಳೆಸಿ ಉತ್ತಮ ಪರಿಸರ ನಿರ್ಮಾಣ ಮಾಡುವದು ಅತ್ಯಂತ ಅವಶ್ಯಕವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಜವಳಿ ಮತ್ತು ಮುಜರಾಯಿ ಖಾತೆ ಸಚಿವರಾದ ರುದ್ರಪ್ಪ. ಲಮಾಣಿ ಯವರು ತಿಳಿಸಿದರು.
ಯುಗಾದಿ ಹಬ್ಬದಂದು ಹಾವೇರಿಯ ದಾನೇಶ್ವರಿ ನಗರದ ಮೂರನೆ ಕ್ರಾಸಿನಲ್ಲಿರುವ ಉದ್ಯಾನವನ ನಿರ್ಮಾಣದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡುತ್ತಾ ನಗರಾಭಿವ್ರದ್ಧಿ ಪ್ರಾಧಿಕಾರದಿಂದ ಸುಮಾರು 10 ಲಕ್ಷ ರೂಪಾಯಿಗಳ ಅನುದಾನದಿಂದ ನಿರ್ಮಾಣವಾಗುತ್ತಿರುವ ಉದ್ಯಾನವನದಲ್ಲಿ ಹಸಿರೇ ಉಸಿರೇ ಎನ್ನುವ ಹಾಗೆ ಸುಸಜ್ಜಿತವಾಗಿ ಉತ್ತಮ ಗಿಡಗಳನ್ನು ಬೆಳೆಸಿ ಮಕ್ಕಳಿಗೆ, ಹಿರಿಯರಿಗೆ ಹಾಗೂ ಎಲ್ಲರಿಗೂ ಉತ್ತಮ ಆರೋಗ್ಯ ಭಾಗ್ಯ ಸಿಗುವಂತಾಗಲಿ ಎಂದು ಹಾರೈಸಿದರು. ಹಾಗೂ ದಾನೇಶ್ವರಿ ನಗರದಲ್ಲಿರುವ ವಿಘ್ನೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಭೆ ಸಮಾರಂಭ ನಡೆಸಲು ಅನುಕೂಲವಾಗುವಂತೆ ಶಾಸಕರ ಅನುದಾನದಲ್ಲಿ ಛಾವಣಿ ನಿರ್ಮಿಸಿ ಕೊಡುವದಾಗಿ ವಾಗ್ದಾನ ಮಾಡಿದರು.
ಉದ್ಯಾನವನದ ಭೂಮಿ ಪೂಜಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಾಭಿವ್ರದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಂಜೀವಕುಮಾರ ನೀರಲಗಿಯುವರು ವಹಿಸಿದ್ದರು. ಹಾಗೂ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಕೊಟ್ರೇಶಪ್ಪ .ಬಸೇಗಣ್ಣಿಯವರ, ನಗರ ಸಭೆಯ ಅಧ್ಯಕ್ಷರಾದ.ಪಾರ್ವತೆಮ್ಮ ಹಲಗಣ್ಣನವರ,ಸದಸ್ಯರಾದ ಸಚಿನ .ಡಂಬಳ ನಗರಾಭಿವ್ರದ್ಧಿ ಪ್ರಾಧಿಕಾರದ ಸದಸ್ಯರಾದ ಲಕ್ಶ್ಮೇಶ್ವರಮಠ. ಭಾಗವಹಿಸಿದ್ದರು.
ದಾನೇಶ್ವರಿ ನಗರದ ಗಜಾನನ ಯುವಕ ಮಂಡಳಿಯ ಅಧ್ಯಕ್ಷರು ಹಾಗು ಸದಸ್ಯರು ಮತ್ತು ದಾನೇಶ್ವರಿ ನಗರ ಸುಧಾರಣೆ ಸಮಿತಿಯ ಸದಸ್ಯರು ಮತ್ತು ನಗರದ ಯಾವತ್ತು ನಾಗರಿಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ದಾನೇಶ್ವರಿ ನಗರದ ಸುಧಾರಣ ಸಮೀತಿಯ ಅಧ್ಯಕ್ಶರಾದ ಎಮ್.ಜಿ.ಹಿರೇಮಠ. ಪ್ರಾಸ್ತಾವಿಕ ಮಾತನಾಡಿದರು. ದೇವೇಂದ್ರಪ್ಪ. ಬಸಮ್ಮನವರ. ಕಾರ್ಯಕ್ರಮ ನಿರೂಪಿಸಿದರು.

loading...