ಚಿಕ್ಕೋಡಿಯಲ್ಲಿ ನಾಳೆ ರೈತ ಸಂಘದಿಂದ ಬೃಹತ್ ಪ್ರತಿಭಟನೆ

0
26
loading...


ಕನ್ನಡಮ್ಮ ಸುದ್ದಿ
ಚಿಕ್ಕೋಡಿ 12: ಸರಕಾರದ ರೈತ ವಿರೋಧಿ ನೀತಿ ಖಂಡಿಸಿ ಕನರ್ಾಟಕ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ರೈತಪರ ಸಂಘಟನೆಗಳು ನಾಳೆ ಗುರುವಾರ ದಿ.13ರಂದು ಮ.12ಗಂಟೆಗೆ ಪ್ರವಾಸಿ ಮಂದಿರದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ರೈತ ಸಂಘದ ವಕ್ತಾರ ತ್ಯಾಗರಾಜ್ ಕದಮ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು, ರೈತ ಸಮುದಾಯ ಕಳೆದ ನಾಲ್ಕೈದು ವರ್ಷಗಳ ಸತತ ಬರಗಾಲದಿಂದ ಕಂಗೆಟ್ಟಿದ್ದು ರೈತರ ನೆರವಿಗೆ ನಿಲ್ಲಬೇಕಾದ ಸರಕಾರ ಹಾಗೂ ಜನಪ್ರತಿನಿಧಿಗಳು ರೈತರ ಹಿತ ಮರೆತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸಾಲಮನ್ನಾ ವಿಷಯವಾಗಿ ರೈತರಿಗೆ ಮೋಸ ಮಾಡಿವೆ. ಸರಕಾರಗಳಿಗೆ ಸುಪ್ರಿಂ ಕೋರ್ಟ ರೈತರ ಸಾಲಮನ್ನಾ ಮಾಡುವಂತೆ ಆದೇಶಿಸುವ ಪರಿಸ್ಥಿತಿ ನಿಮರ್ಾಣವಾಗಿರುವುದು ರಾಜ್ಯದಲ್ಲಿ ರೈತರಿಗೆ ಶೋಚನೀಯ ಪರಿಸ್ಥಿತಿ ನಿಮರ್ಾಣವಾದಂತೆ ಭಾಸವಾಗುತ್ತಿದೆ ಎಂದರು.
ಮುಂದುವರೆದ ಅವರು, ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಹೋಬಳಿಯಲ್ಲಿ ಬರದ ಭೀಕರತೆ ಹೆಚ್ಚಾಗಿ ಜನಜಾನುವಾರು ನೀರು ಹಾಗೂ ಮೇವಿಗಾಗಿ ನರಳಾಡುತ್ತಿದ್ದಾರೆ. ಆದರೆ ಕೆಲ ಗ್ರಾಮಗಳಿಗೆ ಟ್ಯಾಂಕರ ನೀರು ಪೂರೈಸುವ ಮೂಲಕ ತಾಲೂಕಾಡಳಿತ ನಾಮಕಾವಾಸ್ತೆ ಬರ ನಿರ್ವಹಣೆಗೆ ಮುಂದಾಗಿದ್ದು, ಇನ್ನೂ ಬಹುಪಾಲು ರೈತರಿಗೆ ಮೇವು ಹಾಗೂ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದರು.
ಕರಗಾಂವ ಏತ ನೀರಾವರಿ:
ಈ ಭಾಗದ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ನಾಗರಮುನ್ನೋಳಿ ಹೋಬಳಿ ಜನ ಪ್ರತಿ ಬೇಸಿಗೆಯಲ್ಲಿ ಹನಿ ನೀರಿಗೂ ತತ್ವಾರ ಪಡುವಂತಾಗಿದ್ದು, ಕರಗಾಂವ ಏತ ನೀರಾವರಿ ಯೋಜನೆಗಾಗಿ ಮಂಜೂರಾತಿಗಾಗಿ ರೈತರು ಮಾಡಿರುವ ಹೋರಾಟಗಳಿಗೆ ಬೆಲೆ ಇಲ್ಲದಂತಾಗಿದ್ದು ಕರಗಾಂವ ಏತ ನೀರಾವರಿ ಯೋಜನೆ ತ್ವರಿತ ಅನುಷ್ಠಾನಕ್ಕಾಗಿ ಪ್ರಥಮ ಹಂತವಾಗಿ ಮನವಿ ಸಲ್ಲಿಸಿ, ನಂತರ ಹೋರಾಟ ರೂಪುರೇಷೆ ಸಿದ್ಧಪಡಿಸಲಾಗುವದೆಂದರು.

loading...