ಚು.ಸಾ.ಪ ಜಿಲ್ಲಾ ಸಾಹಿತ್ಯ ಸಮ್ಮೆಳನ

0
48
loading...

ಕನ್ನಡಮ್ಮ ಸುದ್ದಿ-ಧಾರವಾಡ : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೆಳನ ಎಪ್ರೀಲ್ 2 ಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹಮ್ಮಿಕೊಂಡಿದೆ ಎಂದು ಕ.ಚು.ಸಾ.ಪ. ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮ್ಮೇಳನವು ವಾಸ್ತು ತಜ್ಞ ಲೇಖಕ ಡಾ.ಎಮ್.ಎಸ್.ಹುಲ್ಲೋಳಿ ಅವರ ಸರ್ವಾದ್ಯಕ್ಷತೆಯಲ್ಲಿ ನಡೆಯಲಿದೆ. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್‍ನ ಗೌರವಾಧ್ಯಕ್ಷ ಪ್ರಭುಚನ್ನಬಸಪ್ಪ ಸ್ವಾಮೀಜಿ ಉದ್ಘಾಟನೆ ಮಾಡುವರು. ನಿಕಟ ಪೂರ್ವ ಅಧ್ಯಕ್ಷ ಬಾಸ್ಕರರಾವ್ ಹೆಗಡೆ, ಡಾ.ಎಮ್.ಎಸ್.ಹುಲ್ಲೋಳಿ ಅವರಿಗೆ ಅಧಿಕಾರ ಹಸ್ತಾಂತರ ಮಾಡುವರು. ಪತ್ರಕರ್ತ ಮನೋಜಗೌಡ ಪಾಟಿಲ ಅತಿಥಿಯಾಗಿ ಆಗಮಿಸಲಿದ್ದು, ಕ.ಚು.ಸಾ.ಪ. ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡಶೇಟ್ರು, ಕ.ಚು.ಸಾ.ಪ. ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಕ.ಚು.ಸಾ.ಪ.ನ ಧಾರವಾಡ ಜಿಲ್ಲಾಧ್ಯಕ್ಷ ಮಹೇಶ ಹೊರಕೇರಿ ಉಪಸ್ಥಿತರಿರುತ್ತಾರೆ ಎಂದರು.
ಮದ್ಯಾನ್ನ 12 ಕ್ಕೆ ಪ್ರೊ.ಇಟಗಿ ಈರಣ್ಣ ಅವರ ನೆನಪಿಗಾಗಿ ಗೋಷ್ಠಿ ನಡೆಯಲಿದ್ದು, ನಾ ಕಂಡ ಹಾಗೆ ಬದುಕು – ಬರಹ ವಿಷಯದ ಕುರಿತು ನಿವೃತ್ತ ಪ್ರಾಚಾರ್ಯ ಪ್ರೊ.ಯು.ವಿ.ರಾಘವೇಂದ್ರ ಮಾತನಾಡಲಿದ್ದು, ಹಿರಿಯ ಕವಿ ಪ್ರೊ.ಎಸ್.ವಿ.ಪಟ್ಟಣಶೆಟ್ರು ಅಧ್ಯಕ್ಷತೆವಹಿಸುವರು. ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಉಪಸ್ಥಿತರಿರುವರು. ಮದ್ಯಾನ್ನ 2.30 ಕ್ಕೆ ಚುಟುಕು ಸಾಹಿತ್ಯ ವಿಚಾರಗೋಷ್ಠಿ – ಸಂವಾದ, 3.30 ಕ್ಕೆ ಚುಟುಕು ವಸಂತ ಗೋಷ್ಠಿ ನಡೆಯಲಿದೆ ಎಂದರು.
ಸಂಜೆ 5 ಕ್ಕೆ ಸಮ್ಮೆಳನದ ಸಮಾರೋಪ ಸಮಾರಂಭ ನಡೆಯಲಿದ್ದು ಮಾಜಿ ಸಂಸದ ಪ್ರೊ.ಐ.ಜಿ.ಸನದಿ ಸಮಾರೋಪ ನುಡಿಗಳನ್ನಾಡುವರು. ಕೃಷ್ಣಮೂರ್ತಿ ಕುಲಕರ್ಣಿ ಸಮ್ಮೆಳನದ ನಿರ್ಣಯ ಮಂಡನೆ ಮಂಡಿಸಲಿದ್ದು, ಸಾರ್ವಧ್ಯಕ್ಷ ಡಾ.ಎಮ್.ಎಸ್.ಹುಲ್ಲೋಳ್ಳಿ, ಎಸ್.ಆಯ್.ನೇಕಾರ ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಂಕರ ಕುಂಬಿ, ಶಿವಕುಮಾರ ತಾವರಗಿ, ಚನ್ನಬಸಪ್ಪ ಧಾರವಾಡಶೆಟ್ರು ಉಪಸ್ಥಿತರಿದ್ದರು.

loading...