ಜಮೀನುಗಳಿಗೆ ಜಿಂಕೆ ದಾಳಿ; ಅಪಾರ ಪ್ರಮಾಣದ ಬೆಳೆ ನಾಶ !

0
42
Back Camera
ಕಣ್ಣು ಮುಚ್ಚಿ ಕುಳಿತ ಅರಣ್ಯ ಅಧಿಕಾರಿಗಳು | ಜಿಂಕೆ ಓಡಿಸುವಲ್ಲಿ ರೈತರು ಹೈರಾಣ 
loading...

ಚಂದ್ರಶೇಖರ ಸೋಮಣ್ಣವರ
ಲಕ್ಷ್ಮೇಶ್ವರ: ಶಿರಹಟ್ಟಿ ತಾಲೂಕಿನಾದ್ಯಂತ ಗ್ರಾಮೀಣ ಭಾಗಗಳಲ್ಲಿ ಜಿಂಕೆಗಳು ಹಗಲು ರಾತ್ರಿ ಎನ್ನದೇ ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ಹಾಳು ಮಾಡುತ್ತಿರುವ ಕಾರಣ ರೈತರು ಜಿಂಕೆಗಳನ್ನು ಓಡಿಸಿ ಓಡಿಸಿ ಹೈರಾಣಾಗಿದ್ದಾರೆ.
ಕಳೆದ ಎರಡು ಮೂರು ವರ್ಷಗಳಿಂದಲೂ ಸರಿಯಾಗಿ ಮಳೆ ಬೆಳೆ ಬರದೇ ತೀವ್ರ ಬರಗಾಲದ ನಡುವೆಯೂ ಹಾಗೂ ಕೊಳವೆ ಭಾವಿಗಳ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದ ಪರಿಣಾಮವಾಗಿ ಅಲ್ಪ ಸಲ್ಪ ಸಿಗುವ ನೀರಿನಿಂದ ಬೆಳೆಗಳನ್ನು ಬೆಳೆಯುತಿದ್ದು ಈಗ ಜಿಂಕೆಗಳ ಹಾವಳಿಯಿಂದಾಗಿ ರಾತ್ರಿ ಇಡೀ ನಿದ್ರೆ ಸಹ ಮಾಡದೆ ಕಂಗೆಟ್ಟಿದ್ದಾನೆ.
ರೈತರ ಹೆಸರಿನಲ್ಲಿ ಪುಕ್ಕಟೆ ಪ್ರಚಾರ ಪಡೆದುಕೊಳ್ಳುವ ರಾಜಕೀಯ ಪ್ರತಿನಿಧಿಗಳು ಹಾಗು ಸರ್ಕಾರ ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಈ ವರೆಗೂ ಶಾಸ್ವತ ಪರಿಹಾರ ಕಂಡುಕೊಂಡಿಲ್ಲ. ಹಾಗಾದರೆ ಬೆಳೆಗಳನ್ನು ನಾಶಮಾಡುವ ಪ್ರಾಣಿಗಳಿಗೆ ಕಡಿವಾಣ ಹಾಕುವವರು ಯಾರು?
ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಅರಣ್ಯ ಇಲಾಖೆ ಶಾಸ್ವತ ಪರಿಹಾರದ ಕ್ರಮ ಕೈಗೊಳ್ಳಬೇಕೆಂದು ರೈತರ ಆಕ್ರೋಶವಾಗಿದೆ. ಸರ್ಕಾರ ಈ ಹಿಂದೆಯೇ ಅರಣ್ಯ ಪ್ರದೇಶದಿಂದ 5 ಕಿ.ಮಿ ವ್ಯಾಪ್ತಿಯಲ್ಲಿರುವ ರೈತರ ಜಮೀನುಗಳಿಗೆ ಸೋಲಾರ್ ವಿದ್ಯುತ್ ತಂತಿಗಳನ್ನು ಅಳವಡಿಸಲು ಯೋಜನೆ ರೂಪಿಸಿ ಅರಣ್ಯ ಇಲಾಖೆಗೆ ಸೂಚಿಸಿತು.್ತ ಆದರೆ, ಯೋಜನೆಗೆ ಹಣ ಬಿಡುಗಡೆಯಾಗದೇ ಇರುವುದರಿಂದ ಈ ವರೆಗೂ ಅನುಷ್ಠಾನಗೊಂಡಿಲ್ಲ. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷಗಳು ನಂತರ ರೈತರನ್ನು ಹೇಗೆ ಕಡೇಗಣಿಸುತ್ತಿವೆ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆಯಾಗಬಹುದು.
ರೈತರು ಬೆಳೆದ ಬೆಳೆಗಳಿಗೆ ಸಹ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಕೂಡಾ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿ ಸಾಲದ ಬಾದೆಯಿಂದಾಗಿ ಇತ್ತ ನೆಮ್ಮದಿ, ನಿದ್ರೆ ಇಲ್ಲದೇ ಕೊರಗಿ ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ನಂತರ ಸರ್ಕಾರ ಒಂದಿಷ್ಟು ಪರಿಹಾರ ಕೊಟ್ಟು ಕೈಚಲ್ಲಿಬಿಡುತ್ತವೆ.
ಒಟ್ಟಾರೆಯಾಗಿ ರೈತರನ್ನು ಮೂಲೆಗುಂಪಾಗಿ ಮಾಡುವ ಸರ್ಕಾರ ಮತ್ತು ರಾಜಕೀಯ ಪಕ್ಷಗಳಿಗೆ ಮುಂಬರುವ ಚುನಾವಣೆಗಳಲ್ಲಿ ರೈತರು ತಕ್ಕ ಪಾಠ ಕಲಿಸುವರೋ ಇಲ್ಲವೋ ಕಾದು ನೋಡಬೇಕಿದೆ.
ಬಾಕ್ಸ್: ಅರಣ್ಯ ಇಲಾಖೆಯಿಂದ ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಶಾಸ್ವತ ಪರಿಹಾರದ ಯಾವುದೇ ಯೋಜನೆಗಳಿಲ್ಲ. ಆದರೆ ರೈತರು ಅರ್ಜಿ ಸಲ್ಲಿಸಿದರೆ ಬೆಳೆ ನಷ್ಟಕ್ಕೆ ಖಂಡಿತಾ ಪರಿಹಾರ ನೀಡಲಾಗುವುದು.
-ವೀರೇಶ, ವಲಯ ಅರಣ್ಯ ಅಧಿಕಾರಿ, ಶಿರಹಟ್ಟಿ.
ಬಾಕ್ಸ್: ಜಿಂಕೆಗಳ ಹಾವಳಿಯಿಂದಾಗಿ ರೈತರಿಗೆ ನೆಮ್ಮದಿಯು ಇಲ್ಲ ನಿದ್ರೆಯು ಸಹ ಇಲ್ಲದಂತಾಗಿದ್ದು ನಿಯಂತ್ರಣಕ್ಕೆ ಅರಣ್ಯ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು.
-ಬಸವರಾಜ ರಾಹುತ ರೈತ, ಸುಗನಹಳ್ಳಿ.

loading...