ಜಾತಿ, ಮತ, ಪಂಥ, ಮೀರಿ ವಿಶ್ವಮಾನವನಾದ ಶ್ರೀರಾಮ

0
39
loading...

ಕನ್ನಡಮ್ಮ ಸುದ್ದಿ-ಧಾರವಾಡ : ಶ್ರೀರಾಮನ ಕಥೆ ಒಂದು ಅಮೃತಸಾಗರ. ಇದರ ಒಂದೊಂದು ಬಿಂದು ಜೀವನಕ್ಕೆ ಔಷಧ. ಕವಿವಾಲ್ಮೀಕಿ ಈ ಕಾವ್ಯವನ್ನು ಎಲ್ಲಭಾಷೆಗಳತಾಯಿ ಸಂಸ್ಕøತದಲ್ಲಿ ರಚಿಸಿದ. ಇದೇ ಪ್ರಪಂಚದ ಆದಿಕಾವ್ಯವಾಯಿತು ಎಂದು ಡಾ. ವೆಂಕಟನರಸಿಂಹಾಚಾರ್ಯ ಜೋಶಿ ಹೇಳಿದರು.
ವನವಾಸಿ ಶ್ರೀರಾಮಮಂದಿರದಲ್ಲಿ ಶ್ರೀರಾಮನವಮಿಯ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತೀಯ ಸಂಸ್ಕøತಿಯ ಕನ್ನಡಿ ಶ್ರೀರಾಮಾಯಣ ಕಾಲಿದಾಸಾದಿಕವಿಗಳು ಹಾಗು ಉಳಿದ ಪ್ರಾದೇಶಿಕ ಕವಿಗಳು ತಮ್ಮ ತಮ್ಮ ಭಾಷೆಗಳಲ್ಲಿ ರಾಮಾಯಣ ರಚಿಸಿದರು. ಇಲ್ಲಿ ಕಥಾನಾಯಕ ಜಾತಿ, ಮತ, ಪಂಥ, ದೇಶ, ಜನಾಂಗವನ್ನು ಮೀರಿ ವಿಶ್ವಮಾನವನಾಗಿ ಮೆರೆದಿದ್ದಾನೆ. ಕರ್ತವ್ಯ, ತ್ಯಾಗ ಹಾಗು ಮಾನವೀಯ ಸಂಬಂಧಗಳನ್ನು ಶ್ರಿರಾಮನು ನಿಭಾಯಿಸುವ ರೀತಿ ಅತ್ಯಂತ ಶ್ರೇಷ್ಟವಾಗಿತ್ತು ಎಂದರು.
ಕೊಳಲು ವಾದಕ ಖಾಜಿ ಅಬ್ದುಲ್ಲಾ, ರವಿಜೋಷಿ, ಆರ್. ಪಿ. ಕುಲಕರ್ಣಿ ಉಪಸ್ಥಿತರಿದ್ದರು.

loading...