ಜಾತ್ರಾ ಮಹೋತ್ಸವ ಅಂಗವಾಗಿ ಸ್ವಯಂ ರಕ್ತದಾನ ಶಿಬಿರ

0
33
loading...

ಕನ್ನಡಮ್ಮ ಸುದ್ದಿ-ಕುಷ್ಟಗಿ : ತಾಲೂಕಿನ ಹಿರೇಮನ್ನಾಪೂರ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಹಾಗೂ ಕಾಶಿವಿಶ್ವನಾಥ ಜಾತ್ರಾ ಮಹೋತ್ಸವದ ಅಂಗವಾಗಿ ಸೌರಭ ಕಲಾ ಸಂಘ ಮತ್ತು ಭಾರತಿಯ ರೆಡ್‍ಕ್ರಾಸ್ ಸಂಸ್ಥೆ ಕೊಪ್ಪಳ ಇವರ ಸಂಯೋಗದೊಂದಿಗೆ ರಕ್ತದಾನ ಶಿಬಿರವು ಇತ್ತೀಚೆಗೆ ನಡೆಯಿತು.
ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದ ಎ.ಎಸ್.ಐ ಸಿದ್ದಪ್ಪ ಮಾತನಾಡಿ ಮನುಷ್ಯನ ಪ್ತಿಯೊಂದು ಅಂಗಗಳಿಗೂ ರಕ್ತವು ತುಂಬಾ ಮುಖ್ಯವಾಗಿದೆ. ರಕ್ತದಾನ ಮಾಡಿದರೆ ಪ್ರತಿಯೊಬ್ಬರ ದೇಹದಲ್ಲೂ ನವ ಚೈತನ್ಯ ಮೂಡಿ ಹೊಸ ರಕ್ತಕಣಗಳು ಉತ್ಪತ್ತಿಯಾಗಲು ಪೂರಕವಾಗುತ್ತದೆ. ರಕ್ತದಾನದಿಂದ ಆರೋಗ್ಯವಂತ ಮನುಷ್ಯರಾಗುವಲ್ಲಿ ಸಂಶಯವೇ ಇಲ್ಲ. ಒಬ್ಬ ಮನುಷ್ಯನು ರಕ್ತದಾನವನ್ನು ಮಾಡಿದರೆ ಮೂರು ಜನರಿಗೆ ಜೀವ ಉಳಿಸಿದಂತಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಕುರಿತು ಇನ್ನೂರ್ವ ಪೊಲೀಸ್ ಅಧಿಕಾರಿ ಮಹಾಂತೇಶ ಚಿಟ್ಟಿ ಮಾತನಾಡಿ ಇವತ್ತಿನ ದಿನಮಾನದಲ್ಲಿ ಸಾಕಷ್ಟು ಸಂಸ್ಥೆಗಳು ಇಂತಹ ಕಾರ್ಯಕ್ರಮವನ್ನು ಮಾಡಲು ಹಿಂದೆ ಮುಂದೆ ನೋಡುತ್ತವೆ. ಆದರೆ ಜಾತ್ರಾ ಮಹೋತ್ಸವ ಅಂಗವಾಗಿ ಇಂತಹ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಹಾಕಿಕೊಂಡಿರುವಂತದ್ದು ಶ್ಲಾಘನೀಯವಾದದ್ದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ 50 ಜನ ಸ್ವಯಂಪ್ರೇರಿತರಾಗಿ ರಕ್ತದಾನವನ್ನು ಮಾಡಿದರು.
ಈ ಸಂದರ್ಭದಲ್ಲಿ ಸೌರಭ ಕಲಾ ಸಂಘ ಸಂಸ್ಥೆಯ ಅಧ್ಯಕ್ಷ ಸಿದ್ದು ಪಿ.ನಗರಕರ್, ಬಸವರಾಜ ಕೋರಗಿ, ರಹೀಮನಸಾಬ ಕೊಳೂರ, ಗುರುರಾಜ ಶ್ಯಾವಿ, ವಿಠೋಭ್ ಶಟ್ಟರ ಸೇರಿದಂತೆ ಹಲವಾರು ಯುವಕ ಮಿತ್ರರು ಇದ್ದರು.

loading...