ಲಾರಿ ಡಿಕ್ಕಿ ಸೈಕಲ್ ಸವಾರ ಸ್ಥಳದಲ್ಲಿ ಸಾವು

0
24
loading...

ನಗರದ ಕಲ್ಪನಾ ಶಕ್ತಿ ಎದುರು ಸೈಕಲ್ ಸವಾರನಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಗುರುವಾರ ಸಂಜೆ 5.30ಕ್ಕೆ ನಡದಿದೆ.

ಸವದತ್ತಿ ತಾಲೂಕಿನ ಚಿಚಡಿ ಗ್ರಾಮದ ಸೋಮಪ್ಪಾ ದುಂಡಪ್ಪಾ ಕಡಲೆನ್ನವರ (55) ಎಂಬುವವರು ಸೈಕಲ್ ಮೇಲೆ ನಗರದ ಭಾಗ್ಯ ನಗರದಲ್ಲಿರುವ ಮನೆಗೆ ತೆರಳುವಾಗ ಕೆಎ-28 ಎ-3840 ಎಂಬ ಸಂಖ್ಯೆಯ ಟ್ರಕ್ ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಈ ಕುರಿತು ಉತ್ತರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

loading...