ಡಾ||ಅಂಬೇಡ್ಕರ ಜನ್ಮ ದಿನಾಚರಣೆಃ ಪ್ರಜಾಪ್ರಭುತ್ವದ ಜನ್ಮ ದಿನಾಚರಣೆ

0
48
loading...

ಕನ್ನಡಮ್ಮ ಸುದ್ದಿ-ಶಿಗ್ಗಾವಿ : ದೇಶದಲ್ಲಿರುವ ಜಾತಿ,ಮತ, ಪಂಥ, ಸಂಕಷ್ಟಗಳನ್ನು ಒಗ್ಗೂಡಿಸಿ ಒಂದೆ ದ್ವಜ ಮತ್ತು ಸಂವಿಧಾನದ ಕೆಳಗೆ ನಿಲ್ಲಿಸುವಂತ ಒಂದು ದೊಡ್ಡ ಸಾಧನೆ ಮಾಡಿದ ಡಾ|| ಅಂಬೇಡ್ಕರ ಅವರ ಜನ್ಮ ದಿನಾಚರಣೆಯಷ್ಟೆ ಅಲ್ಲ ಇದನ್ನು ಭಾರತದ ಪ್ರಜಾ ಪ್ರಭುತ್ವದ ಜನ್ಮ ದಿನಾಚರಣೆಯಾಗಿ ಆಚರಿಸಬೇಕು ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಶುಕ್ರವಾರ ಪಟ್ಟಣದ ಸಂತೆ ಮೈದಾನದಲ್ಲಿರುವ ಬಯಲು ರಂಗ ಮಂದಿರದಲ್ಲಿ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ ಅವರ 126 ನೇ ಹಾಗೂ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ|| ಬಾಬು ಜಗಜೀವನರಾಂ ಅವರ 110 ನೇ ಜನ್ಮ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂತ ಮಹಾನುಭಾವರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿ ಕೊಳ್ಳುವ ಸಂಕಲ್ಪದಿನವಾಗಿದೆ.
ಸರ್ಕಾರದಿಂದ ಜನಪ್ರೀಯ ಕಾರ್ಯಗಳಾಗುತ್ತಿವೆ ಆದರೆ ಜನುಪಯೋಗಿ ಕಾರ್ಯಗಳಾಗುತ್ತಿಲ್ಲ. ಸರ್ಕಾರದ ಬಜೆಟ್‍ನಲ್ಲಿ ಶೇಕಡಾ 21.6% ಕೆಳವರ್ಗದವರಿಗೆ ಅನುದಾನ ನೀಡಿದೆ, ಆದರೆ ಆ ಅನುದಾನಗಳು ಯಾರಿಗೆ ಸಲ್ಲಬೇಕೋ ಅವರಿಗೆ ಸಲ್ಲುತ್ತಿಲ್ಲ. ಅನುದಾನಗಳನ್ನು ನೀಡಿದ ನಂತರ ಅದು ಹೇಗೆ ಬಳಕೆಯಾಗಿದೆ, ಎಷ್ಟು ಬಳಕೆಯಾಗಿದೆ ಎಂಬುದನ್ನು ಪರೀಶಿಲಿಸುವ ವ್ಯವಸ್ಥೆ ಸರ್ಕಾರದಿಂದಾಗಬೇಕು ಎಂದರು. ಪಟ್ಟಣದಲ್ಲಿ 50 ಲಕ್ಷ ಅನುದಾನದಲ್ಲಿ ಡಾ|| ಅಂಬೇಡ್ಕರ ಭವನ ನಿರ್ಮಾಣವಾಗಿದೆ ಹೆಚ್ಚುವರಿಯಾಗಿ ಭವನ ನಿರ್ಮಾಣಕ್ಕೆ 1 ಕೋಟಿ ಪ್ರಸ್ಥಾವನೆ ಸಲ್ಲಿಸಿರುವದಾಗಿ ಹೇಳಿದರು.
ಹಸಿರು ಕ್ರಾಂತಿಯ ಹರಿಕಾರ ಡಾ|| ಬಾಬು ಜಗಜೀವನರಾಂ ಅವರ ಒಂದು ವಿಚಾರದಾರೆಯಿಂದ ಕೃಷಿ ಪ್ರಗತಿ ಹೊಂದಿ ಅಪಾರ ಜನಸಂಖ್ಯೆ ಇದ್ದರೂ ಆಹಾರ ಕೊರತೆ ಇಲ್ಲದಂತಾಗಿz.É ಆದರೆ ಪ್ರಕೃತಿ ವೈಪರಿತ್ಯದಿಂದಾಗಿ ಸತತ ಬರಗಾಲ ರೈತರ ಸಂಕಷ್ಟ ಇವುಗಳ ಬಗ್ಗೆ ಎರಡನೆಯ ಹಸಿರು ಕ್ರಾಂತಿಯ ಅವಷ್ಯಕತೆಯಿದೆ ಎಂದರು.
ವಿ ಪ ಸದಸ್ಯ ಸೋಮಣ್ಣ ಬೇವಿನಮರದ, ಸದಸ್ಯ ಶ್ರೀಕಾಂತ ಪೂಜಾರ, ಪುರಸಭೆ ಸದಸ್ಯ ಫಕ್ಕಿರೆಶ ಶಿಗ್ಗಾಂವಿ ಮಾತನಾಡಿದರು, ಬಂಕಾಪೂರ,
ಇದೇ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಯಲ್ಲಿ ಹೆಚು ಅಂಕ ಗಳಿಸಿದ ತಾಲೂಕಿನ ಪ್ರತಿಭಾವಂತ ಎಸ್‍ಸಿಎಸ್‍ಟಿ ವಿದ್ಯಾರ್ಥಿಗಳಿಗೆ ಸರಕಾರದಿಂದ ಲ್ಯಾಪಟಾಪ್, ಅಂತರ್ ಜಾತಿ ವಿವಾಹವಾದವರಿಗೆ ಪ್ರೋತ್ಸಾಹಧನದ ಚೆಕ್ ಅನ್ನು ಹಾಗೂ ಗಂಗಮ್ಮ ಬೋಮ್ಮಾಯಿ ಟ್ರಷ್ಟ್ ವತಿಯಿಂದ ತಾಲೂಕಿನ 2015-16 ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ಶಾಸಕ ಬಸವರಾಜ ಬೋಮ್ಮಾಯಿ ಹಾಗೂ ವಿ ಪ ಸದಸ್ಯ ಸೋಮಣ್ಣ ಬೇವಿನಮರದ ವಿತರಿಸಿದರು.
ಇದಕ್ಕೂ ಮೊದಲು ಬಂಕಾಪೂರ ಸರಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಎಚ್ ಜಿ ಪಂಚಾಕ್ಷರಯ್ಯ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿ ಪಂ ಸದಸ್ಯ ಬಸವರಾಜ ದೇಸಾಯಿ, ದೀಪಾ ಅತ್ತೀಗೇರಿ ತಾ ಪಂ ಅದ್ಯಕ್ಷೆ ಪಾರವ್ವ ಆರೇರ, ಸದಸ್ಯ ಈಶ್ವರ ಹರವಿ, ಪುರಸಭೆ ಅದ್ಯಕ್ಷ ಶಿವಪ್ರಸಾದ ಸುರಗೀಮಠ, ತಾ ಪಂ ಮಾಜಿ ಸದಸ್ಯ ನಿಂಗಪ್ಪ ಹರಿಜನ, ನ್ಯಾಯವಾದಿ ಪಿ ಆರ್ ಮಾದರ, ಪ್ರೇಮಾ ಪಾಟೀಲ, ಶಿವಾನಂದ ಮ್ಯಾಗೇರಿ, ತಹಶೀಲ್ದಾರ ಶಿವಾನಂದ ರಾಣೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಮ್ ಎಚ್ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಎಸ್ ಎಚ್ ನಾಯಕರ್, ದಲಿತ ಮುಖಂಡರಾದ ಅಶೋಕ ಕಾಳೆ, ಕರೆಪ್ಪ ಕಟ್ಟಿಮನಿ, ತಿರಕಪ್ಪ ಚಿಕ್ಕೇರಿ, ಮಲ್ಲೇಶಪ್ಪ ಹರಿಜನ, ನಿಂಗಪ್ಪ ಹರಿಜನ, ಸಮತಾ ಸೈನಿಕದಳ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಭೀಮನವರ, ತಾಲೂಕಾಧ್ಯಕ್ಷ ಗಂಗಾಧರ ಕುಂದೂರ, ಚಲವಾದಿ ಸಮಾಜದ ತಾಲೂಕ ಅಧ್ಯಕ್ಷ ಶೇಖಪ್ಪ ಭೀಮನವರ, ಉಪಾಧ್ಯಕ್ಷ ಶಿವಾನಂದ ಕಾಳಿ, ನೀಲವ್ವ ಕಾಲವಾಡ, ನಾಗರಾಜ ವಡ್ಡರ, ಬಸವರಾಜ ವಡ್ಡರ, ಡಿ ಎಮ್ ಧಾರವಾಡ, ಸುರೇಶ ಹರಿಜನ, ಬಸವರಾಜ ಕಡೆಮನಿ ಸೇರಿದಂತೆ ದಲಿತ ಮುಖಂಡರು ಹಾಗೂ ಸಮಾಜದ ಭಾಂದವರು ಹಾಜರಿದ್ದರು.

loading...