ದಲಿತರ ಏಳಿಗೆಗಾಗಿ ಶ್ರಮಿಸಿದ ಡಾ. ಜಗಜೀವನರಾಮ್

0
228
loading...

ಕನ್ನಡಮ್ಮ ಸುದ್ದಿ-ಧಾರವಾಡ : ರಾಷ್ಟ್ರೀಯವಾದಿ ದಲಿತ ನಾಯಕರು, ದಲಿತ ಚಳುವಳಿಗಳ ಬಗ್ಗೆ ಅಧ್ಯಯನವಾಗಿಲ್ಲ ಹೊಸ ಆಕರಗಳ ಹಿನ್ನೆಲೆಯಲ್ಲಿ ಇತಿಹಾಸ ಪುನರ್ ಬರವಣಿಗೆ ಅಗತ್ಯವಿದೆ ಎಂದು ಡಾ.ಜಗಜೀವನರಾಮ್ ಅಧ್ಯಯನ ಮತ್ತು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಪ್ರಭಾರಿ ನಿರ್ದೇಶಕ ಪ್ರೊ.ಕೆ.ಸದಾಶಿವ ಅಭಿಪ್ರಾಯಟ್ಟರು.
ಕರ್ನಾಟಕ ವಿವಿಯಲ್ಲಿ ಡಾ. ಬಾಬು ಜಗಜೀವನರಾಮ್ ಅವರ 110 ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ದಲಿತರ ಏಳಿಗೆಗಾಗಿ ಜೀವನವೀಡಿ ಶ್ರಮಿಸಿದ ಡಾ.ಬಾಬು ಜಗಜೀವನರಾಮ್ ಬಹಳ ದೊಡ್ಡ ಸ್ವಾತಂತ್ರ್ಯ ಹೋರಾಟಗಾರ ಹಾಗೂ ರಾಷ್ಟ್ರೀಯವಾದಿ ಕೂಡ ಆಗಿದ್ದರು. ಹದಿನೆಳನೆಯ ವಯಸ್ಸಿಗೆ ವಿದ್ಯಾರ್ಥಿ ಸಂಘಟನೆಗೆ ತೊಡಗಿಸಿಕೊಂಡ ಡಾ,ಬಾಬು ಜಗಜೀವನರಾಮ್ ಮದನ ಮೋಹನ ಮಾಲವೀಯಾ ಅವರಂತಹ ಹಿರಿಯ ಗುರುತಿಸುವಂತೆ ಬೆಳೆದರು. ಖಿಲಾಫತ್ ಚಳುವಳಿ ಸಂದರ್ಭದಲ್ಲಿ ಅವರ ಸಂಘಟನಾ ಚಾತುರ್ಯಕ್ಕೆ ಕಲ್ಕತ್ತಾದ ಅಂದಿನ ಪತ್ರಿಕೆಗಳು ‘ಭವಿಷ್ಯದ ನಾಯಕ’ ಎಂದಿದ್ದವು. ಬಿಹಾರ ಡಿಪ್ರೇಸ್ಡ್ ಕ್ಲಾಸ್ ಲೀಗನ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದ ಅವರು 1935 ರಲ್ಲಿ ಬೆಂಗಳೂರಿನಲ್ಲಿ ಅದರ ಶಾಖೆಯನ್ನು ಪ್ರಾರಂಭಿಸಿದ್ದರು ಎಂದು ಹೇಳಿದರು.
ಡಾ.ಬಾಬು ಜಗಜೀವನರಾಮ್ ಇಂಗ್ಲಿಷ, ಹಿಂದಿ, ಬಂಗಾಳಿ, ಸಂಸ್ಕøತ, ಭಾಷೆಗಳಲ್ಲಿ ಪರಿಣಿತಿ ಹೊಂದಿದ್ದರು. ಗಾಂಧೀಜಿ ತಮ್ಮ ಹರಿಜನ ಪತ್ರಿಕೆಯಲ್ಲಿ ‘ಅಗ್ನಿಯಲ್ಲಿ ಪುಟವಿಟ್ಟ ಚಿನ್ನ’ ಎಂದು ಅವರನ್ನುಕೊಂಡಾಡಿದ್ದರು. ಸೇನೆಯಲ್ಲಿ ಜಾತಿಗೆ ಸಂಬಂಧಿಸಿದ ಯಾವುದೇ ರೆಜೀಮೆಂಟ ಇರಬಾರದು ರಾಷ್ಟ್ರೀಯತೆಯೇ ಮುಖ್ಯ ಎಂದು ಹೇಳುತ್ತಿದ್ದ ಡಾ.ಬಾಬು ಜಗಜೀವನ ರಾಮ್ ರಕ್ಷಣಾ ಸಚಿವರಾಗಿದ್ದಾಗ ತಮ್ಮ ಜಾತಿಯ ಚಮ್ಮಾರ ರೆಜಿಮೆಂಟನ್ನು ತೆಗೆದು ಹಾಕಿದ್ದರು. ಪ್ರತಿಯೊಬ್ಬ ವ್ಯಕ್ತಿ ತಮ್ಮ ಜಾತಿಯನ್ನು ಮೀರಿ ಬೆಳೆಯಬೇಕು ಎಂಬುದು ಅವರ ಆಶಯವಾಗಿತ್ತು.
ಸ್ವಾತಂತ್ರ್ಯ ಪೂರ್ವದಲ್ಲಿ ದಲಿತರು ಸ್ತ್ರೀಯರು, ರೈತರು ರಾಷ್ಟ್ರೀಯ ಚಳಿವಳಿಗೆ ಧುಮುಕಲು ಕಾರಣರಾದ ಜಗಜೀವನ ರಾಮ್‍ಅವರು 26 ತಿಂಗಳ ಸೆರೆಮನೆವಾಸ ಅನುಭವಿಸಿದರು ಎಂದರು.
ಕುಲಪತಿ ಪ್ರೊ.ಪ್ರಮೋದ ಗಾಯಿ ಅಧ್ಯಕ್ಷತೆವಹಿಸಿ ಮಾತನಾಡಿ, ಜಗಜೀವನರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಸ್ಥಾಪಿಸಲು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್. ಆಂಜನೇಯ ಅವರು 2 ಕೋಟಿ ರೂ ಮಂಜುರಾತಿ ಮಾಡಿದ್ದು ಬರುವ ಮೇ ತಿಂಗಳಲ್ಲಿ ಮೀರಾಕುಮಾರಿಯವರು ಇದನ್ನು ಉದ್ಘಾಟನೆ ಮಾಡಲಿದ್ದಾರೆ ಎಂದರು.
ಕುಲಸಚಿವ ಪ್ರೊ. ಎಮ್.ಎನ್.ಜೋಶಿ ಸ್ವಾಗತಿಸಿದರು.ಮೌಲ್ಯಮಾಪನ ಕುಲಸಚಿವ ಎನ್.ವಾಯ್. ಮಟ್ಟಿಹಾಳ ಪರಿಚಯಿಸಿದರು. ವಿತ್ತಾಅಧಿಕಾರಿ ಆರ್.ಎಲ್. ಹೈದ್ರಾಬಾದ ಉಪಸ್ಥಿತರಿದ್ದರು. ಪ್ರೊ ಹರೀಶ ರಾಮಸ್ವಾಮಿ ವಂದಿಸಿದರು.

loading...