ನಗರಸಭೆ ನೂತನ ಅಧ್ಯಕ್ಷೆ ಆಶಾ ಗುಂಡೇರ ಆಧಿಕಾರ ಸ್ವೀಕಾರ

0
42
loading...

ಕನ್ನಡಮ್ಮ ಸುದ್ದಿ-ರಾಣೇಬೆನ್ನೂರು : ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಭೀಕರವಾಗಿದ್ದು ಅದನ್ನು ಪರಿಹಾರಿಸಿ ಜನರಿಗೆ ಸರಿಯಾದ ರೀತಿಯಲ್ಲಿ ನೀರು ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ನಗರಸಭೆ ನೂತನ ಅಧ್ಯಕ್ಷೆ ಆಶಾ ಗುಂಡೇರ ಹೇಳಿದರು.
ಇಲ್ಲಿಯ ನಗರಸಭೆ ಕಛೇರಿಯಲ್ಲಿ ಗುರುವಾರ ನಗರಸಭೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು, ನದಿಯಲ್ಲಿ ನೀರು ಇಲ್ಲದ ಕಾರಣ ನಗರದಲ್ಲಿ ನೀರಿನ ಸಮಸ್ಯೆ ಎದುರಾಗಿದು, ಕೂಡಲೇ ಭದ್ರಾ ಡ್ಯಾಮನಿಂದ ನೀರನ್ನು ಬಿಡಿಸಲು ವಿಧಾನಸಭಾಧ್ಯಕ್ಷರಾದ ಕೆ.ಬಿ.ಕೋಳಿವಾಡರಿಗೆ ಮನವಿ ಸಲ್ಲಿಸಲಾಗುವದು. ನಗರದಲ್ಲಿ ಪ್ರತಿ ವಾರ್ಡ್‍ನಲ್ಲಿ ಬೋರೊವೆಲ್ ಮೂಖಾಂತರ ನೀರನ್ನು ಒದಗಿಸಲು ಪ್ರಯತ್ನ ಮಾಡುತ್ತೇನೆ ಎಂದರು.
ನನ್ನ ಅಧಿಕಾರ ಅವಧಿಯಲ್ಲಿ ಪಾರದರ್ಶಕತೆಯ ಆಡಳಿತವನ್ನು ನೀಡಲಾಗುವುದು, ಸರ್ಕಾರದಿಂದ ಬರುವಂತ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡುವುದರ ಮೂಲಕ ಜನತೆಗೆ ಸಾಧ್ಯವಾದಷ್ಟು ಮೂಲಭೂತ ಸೌಕರ್ಯವನ್ನು ನೀಡಲಾಗುವುದು ಹಾಗೂ ಅಧಿಕಾರಿಗಳಿಂದ ಸಮರ್ಪಕವಾಗಿ ಕೆಲಸವನ್ನು ತೆಗೆದುಕೊಳ್ಳಲಾಗುವುದು.
ಅಮೃತ ಯೋಜನೆಯಲ್ಲಿ ಉದ್ಯಾನವನ ಅಭಿವೃದ್ಧಿ, 24*7 ಕುಡಿಯುವ ನೀರಿನ ಯೋಜನೆ, ದೊಡ್ಡ ಕೆರೆ ಅಭಿವೃದ್ಧಿ, ಮುದೇನೂರು ಸಮೀಪದಲ್ಲಿ ನದಿಗೆ ಅಡ್ಡಲಾಗಿ ಬ್ಯಾರೇಜ್ ಕಟ್ಟಲಾಗುವದು, ಅಪ್ಪಾರ ತುಂಗಾ ಯೋಜನೆ ಅಡಿಯಲ್ಲಿ ದೊಡ್ಡ ಕೆರೆಗೆ ನೀರನ್ನು ತುಂಬಿಸುವುದು ಹಾಗೂ ನಗರದಲ್ಲಿ ಕಸ ಸಮಸ್ಯೆ ಹೆಚ್ಚಾಗಿದು ನಿರ್ವಹಣೆಗೆ ಹೆಚ್ಚಿನ ಸಲಕರಣಿಗಳು ಮತ್ತು ಕಾರ್ಮಿಕರು ನಿಯೋಜಿಸಲಾಗುವುದು ಎಂದರು.
ಕೆಪಿಸಿಸಿ ಸದಸ್ಯ ಪ್ರಕಾಶ ಕೋಳಿವಾಡ, ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಮೀರಾ ಪ್ರಭಾಕರ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಶೇರುಖಾನ ಕಾಬುಲಿ, ತಾಲೂಕ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೃಷ್ಣಪ್ಪ ಕಂಬಳಿ, ಬಸವನಗೌಡ ಮರದ, ನಗರಸಭೆ ಸದಸ್ಯರಾದ ಬಸವರಾಜ ಹುಚ್ಚಗೊಂಡರ, ಪುಟ್ಟಪ್ಪ ಮರಿಯಮ್ಮನವರು, ಪ್ರಕಾಶ ಜೈನ, ಶೇಖಪ್ಪ ಹೊಸಗೌಡ್ರ, ನಾಗರಾಜ ಕಲಾಲ, ನೂರಲ್ ಖಾಜಿ, ಶಶಿಧರ ಬಸೇನಾಯ್ಕ, ಖಾದರಖಾನ್ ಪಠಾಣ, ವರ್ತಕರ ಸಂಘದ ಅಧ್ಯಕ್ಷ ರಾಮಪ್ಪ ಮೋಟಗಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

loading...