ಪಶು ಭಾಗ್ಯ ಯೋಜನೆ ಪಲಾನುಭವಿಗಳಿಗೆ ಸಹಾಯಧನದ ಚೆಕ್ ವಿತರಣೆ

0
203
loading...

ಹೈನುಗಾರಿಕೆಯಿಂದ ಆರೋಗ್ಯಯುತ, ಆರ್ಥಿಕವಾಗಿ ಕುಟುಂಬ ನಿರ್ವಹಣೆ ಸಾಧ್ಯ ಬೊಮ್ಮಾಯಿ
ಕನ್ನಡಮ್ಮ ಸುದ್ದಿ-ಶಿಗ್ಗಾವಿ : ಪಶು ಪಾಲನೆ ಮತ್ತು ಹೈನುಗಾರಿಕೆಯಿಂದ ಆರೋಗ್ಯಯುತ ಹಾಗೂ ಆರ್ಥಿಕ ಸಬಲತೆಯೊಂದಿಗೆ ಕುಟುಂಬ ನಿರ್ವಹಣೆ ಸಾದ್ಯವೆಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ತಾಲೂಕ ಪಂಚಾಯತ ಆವರಣದಲ್ಲಿ ಜಿಪಂ, ತಾಪಂ, ಪಶುಪಾಲನಾ ಪಶುವೈದ್ಯ ಸೇವಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ 2016-17 ನೇ ಸಾಲಿನ ಪಶುಭಾಗ್ಯ ಯೋಜನೆಯಡಿ ಪಲಾನುಭವಿಗಳಿಗೆ ಸಹಾಯದನದ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಡತನ ಹೊಂದಿದ ಎಷ್ಟೋ ಕುಟುಂಬಗಳಿಗೆ ಹೈನುಗಾರಿಕೆ ಉತ್ತಮ ಶಕ್ತಿಯಾಗಿದೆ. ರಾಜ್ಯ ಸರ್ಕಾರ ಪಶುಪಾಲನೆ ಮತ್ತು ಹೈನುಗಾರಿಕೆ ಅಭಿವೃದ್ದಿಯ ದೃಷ್ಟಿಯಿಂದ ಪಶುಭಾಗ್ಯ ಯೋಜನೆ ರೂಪಿಸಿದೆ ಇದರ ಸದುಪಯೋಗ ಪಡೆದುಕೊಂಡು ಗುಣಮಟ್ಟದ ಹಾಲು ನೀಡುವದರೊಂದಿಗೆ ಆರ್ಥಿಕವಾಗಿ ಸಬಲತೆ ಹೊಂದಿ ಯೋಜನೆಯನ್ನು ಸದುಪಯೋಗ ಪಡೆಸುವಂತೆ ಪಲಾನುಬವಿಗಳಿಗೆ ಕರೆ ನೀಡಿದರು.
ಹಾಗೂ ಧಾರವಾಡ ಕೆ.ಎಮ್.ಎಪ್. ಮೂರು ಜಿಲ್ಲೆಗಳನ್ನು ಹೊಂದಿದ್ದು ಧಾರವಾಡ, ಗದಗ, ಹಾವೇರಿ ಇವುಗಳಲ್ಲಿ ಅತಿ ಹೆಚ್ಚು ಹೈನುಗಾರಿಗೆ ಹಾವೇರಿ ಜಿಲ್ಲೆಯದ್ದಾಗಿದೆ ಆದರೆ ಲಾಭ ಎಲ್ಲ ಜಿಲ್ಲೆಗಳಿಗೂ ಒಡೆದು ಹೋಗುತ್ತದೆ ಹಾಗಾಗಿ ಹಾವೇರಿ ಜಿಲ್ಲೆಗೆ ಪ್ರತ್ತೇಕ ಕೆ.ಎಮ್.ಎಪ್ ಆಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಲಾನುಭವಿಗಳಿಗೆ ಚೆಕ್ ವಿತರಣೆ ಮಾಡಿದರು. ಜಿಪಂ ಉಪಾಧ್ಯಕ್ಷಿಣಿ ಮಮತಾಜಬಿ ತಡಸ, ಸದಸ್ಯರಾದ ಶೋಭಾ ಗಂಜಿಗಟ್ಟಿ, ತಾಪಂ ಅಧ್ಯಕ್ಷಿಣಿ ಪಾರವ್ವ ಆರೇರ, ಉಪಾದ್ಯಕ್ಷಿಣಿ ಪದ್ಮಾವತಿ ಪಾಟೀಲ, ಸದಸ್ಯರಾದ ಬಿ.ಎಸ್.ಹಿರೇಮಠ, ವಿಶ್ವನಾಥ ಹರವಿ, ಯಲ್ಲಪ್ಪ ನರಗುಂದ, ಸಾತಪ್ಪ ದೇಸಾಯಿ, ಎ.ಪಿ.ಎಮ್.ಸಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣವರ, ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಪಶುಭಾಗ್ಯ ಸಮಿತಿ ನಾಮ ನಿರ್ಧೇಶಿತ ಸದಸ್ಯರಾದ ಯಲ್ಲಪ್ಪ ಅರೆಹುಣಸಿ, ಸಯ್ಯದ ಅಬ್ದುಲಖಾದರ ಅಬ್ದುಲ್ ರಹೀಮಹಾಫೀಜ, ದೇವಪ್ಪ ಗುಡ್ಡಣ್ಣವರ, ಕಲಾವತಿ ದೇವಶೆಟ್ಟಿ ವೇದಿಕೆಯಲ್ಲಿದ್ದರು.
ಪಶುಪಾಲನಾ ಪಶುವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ|| ಕೆ.ಆರ್.ಹೊಸಮನಿ, ಸವಣೂರ ಡಾ|| ಬಿ.ಎಚ್.ಜಿಲ್ಲೆ, ಡಾ|| ಕವಿರಾಜ ಐರಣಿ, ಹಿರಿಯ ಪಶುವೈದ್ಯಕೀಯ ವಿಕ್ಷಕ ಡಾ|| ಸಿ.ಡಿ.ಯತ್ನಳ್ಳಿ ಹಾಗೂ ಜೆ.ಎಸ್.ಅಗಸರ, ಜೆ.ಟಿ.ಬಾಬಣ್ಣವರ, ಎ.ಎನ್.ಸೂರಿ ಹಾಗೂ ಪಶುಭಾಗ್ಯ ಪಲಾನುಬವಿಗಳು ಉಪಸ್ಥಿತರಿದ್ದರು.

loading...