ಪಿ.ಎ.ಸಿ.ಎಲ್ ಕಂಪನಿ ಕುರಿತು ಮನವಿ

0
130
loading...

ಕನ್ನಡಮ್ಮ ಸುದ್ದಿ-ಮುಂಡಗೋಡ : ಪಲ್ರ್ಸ್ ಅಗ್ರೊಟೆಕ ಕಾರ್ಪೊರೇಶನ ಲಿಮಿಟೆಡ್ (ಪಿ.ಎ.ಸಿ.ಎಲ್,) ಕಂಪನಿಯಲ್ಲಿ ಹಣ ತುಂಬಿರುವÀ ಗ್ರಾಹಕರಿಗೆ ವಿಳಂಬ ಮಾಡದೇ ತಕ್ಷಣ ಹಣ ಹಿಂತಿರುಗಿಸುವಂತೆ ಹಾಗೂ ಕಂಪನಿಯ ಪ್ರತಿನಿಧಿಗಳಿಗೆ ರಕ್ಷಣೆ ನೀಡುವ ಕುರಿತು. (ಪಿ.ಎ.ಸಿ.ಎಲ್, ಕಂಪನಿಯ) ಮುಂಡಗೋಡ ತಾಲೂಕಿನ ಪ್ರತಿನಿಧಿಗಳು, (ಏಂಜೆಂಟರು) ತಹಸೀಲ್ದಾರ ಮುಖಾಂತರ ಮಾನ್ಯ ಪ್ರಧಾನ ಮಂತ್ರಿಗಳಿಗಳು ಮತ್ತು ನಿವೃತ ನ್ಯಾಯ ಮೂರ್ತಿ ಆರ್.ಎಮ್ ಲೋದಾ ಕಮೀಟಿ, ಹಾಗೂ ಸೆಕ್ಯೂರಿಟಿ ಎಕ್ಷ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ), ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ, ಜಿಲ್ಲಾಧಿಕಾರಿಗಳು ಕಾರವಾರ (ಉ.ಕ), ಪೋಲಿಸ್ ವರಿಷ್ಠಾಧಿಕಾರಿಗಳು ಕಾರವಾರ, ಹಾಗೂ ಮುಂಡಗೋಡ ಠಾಣೆ ಆರಕ್ಷಕ ವೃತ್ತ ನೀರಿಕ್ಷಕರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಪಲ್ರ್ಸ್ ಆಗ್ರೋಟೆಕ್ ಕಂಪನಿ ದೇಶಾದ್ಯಂತ 320 ಶಾಖೆಗಳನ್ನು ಪ್ರಾರಂಭಿಸಿ ಕರ್ನಾಟಕದಲ್ಲಿ 15 ಶಾಖೆಗಳನ್ನು ಹೋಂದಿದೆ. ಈ ಕಂಪನಿಯು ಅಗ್ರಿಕಲ್ಚರ್ ಲ್ಯಾಂಡ್ ಇನ್‍ವೆಸ್ಟಮೆಂಟ್‍ನಲ್ಲಿ ಗ್ರಾಹಕರಿಂದ ಠೇವಣಿ ಮುಖಾಂತರ ಅಂದರೆ ಇನ್‍ಸ್ಟಾಲ್ಮೆಂಟ್ ಮತ್ತು ಕ್ಯಾಷ್‍ಡೌನ್ ಪೇಮೆಂಟ್ ಪ್ಲಾನ್‍ಗಳ ಮೂಲಕ ಹಣ ಕಟ್ಟಿಸಿಕೊಂಡು ಆ ಹಣಕ್ಕೆ 12% ಬಡ್ಡಿಯನ್ನು ಹಾಕಿ ಗ್ರಾಹಕರಿಗೆ ಹಿಂತಿರುಗಿಸುತ್ತಾ ಬರುತ್ತಿತ್ತು.
ದಿನಾಂಕ 1-03-2014 ರ ಸುಪ್ರೀಂ ಕೋರ್ಟ ಆದೇಶದ ಮೇರೆಗೆ ಸಿ.ಬಿ.ಐ, ನವರು ಕಂಪನಿಯ ಬಗ್ಗೆ ವಿಚಾರಣೆ ನಡೆಸಲು ಕಂಪನಿಯ ಬ್ಯಾಂಕ್ ಅಕೌಂಟ್ ಮುಟ್ಟುಗೋಲು ಮಾಡಿತು. 22-03-2014 ರಂದು ಸೆಬಿಯವರು ಕಂಪನಿಯು 5.85 ಕೋಟಿ ಗ್ರಾಹಕರಿಂದ ಸಂಗ್ರಹಿಸಿದ 49.100 ಕೋಟಿ ಹಣವನ್ನು ಮೂರು ತಿಂಗಳ ಒಳಗಾಗಿ ಹಿಂತಿರುಗಿಸಲು ಆದೇಶ ಮಾಡಿತ್ತು. ಈ ಆದೇಶದ ವಿರುಧ್ಧ ಕಂಪನಿಯು ಸೆಕ್ಯೂರಿಟಿ ಅಫಿಲೇಟ್ ಟ್ರಿಬ್ಯುನಲ್‍ಗೆ ಮೇಲ್ಮನವಿ ಸಲ್ಲಿಸಿತ್ತು. ಆ ಮೇಲ್ಮನವಿಯು ದಿನಾಂಕ 12-08-2015 ರಂದು ವಜಾ ಆಗಿದೆ. ನಂತರ ಕಂಪನಿಯು ಸುಪ್ರೀಂ ಕೋರ್ಟಗೆ ಮೇಲ್ಮನವಿಯನ್ನು ಸಲ್ಲಿಸಿದ್ದು. ಅದರ ನಂ; ಸಿವಿಲ್ ಅಫೀಲ್ ನಂ; 13301/2015 ಮತ್ತು 13394/15 ಆಗಿರುತ್ತದೆ.
ಸಾಮಾನ್ಯ ವರ್ಗದ ಗ್ರಾಹಕರು ಕೂಲಿ ಕೆಲಸಗಾರರು ಉಳಿತಾಯ ಮಾಡಿದ ಹಣವನ್ನು ಈ ಕಂಪನಿಯಲ್ಲಿ ತೊಡಗಿಸಿದ್ದಾರೆ. ಮತ್ತು ಅವಧಿ ಮುಗಿದ ನಂತರ ಕಂಪನಿಯಿಂದ ಹಣ ಬಾರದೆ ಇರುವುದರಿಂದ ತೀವ್ರ ಕಷ್ಟ ಎದುರಿಸುವಂತಾಗಿದ್ದು, ಕೆಲ ಗ್ರಾಹಕರು ತಮ್ಮ ಹಣ ನೀಡದಿದ್ದರೆ ನಿಮ್ಮ ವಿರುದ್ಧ ಪೋಲಿಸ್ ಠಾಣೆಯಲ್ಲಿ ದೂರು ನೀಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ, ಮತ್ತು ಪ್ರತಿನಿಧಿಗಳು ತಮ್ಮನ್ನು ಪರಿಚಯಿಸಿದ ಹಿರಿಯ ಪ್ರತಿನಿಧಿಗಳ ಮೇಲೆ ಒತ್ತಡ ತರುತ್ತಿದ್ದಾರೆ. ಪ್ರತಿನಿಧಿಗಳು ನೂರಾರು ಜನ ಗ್ರಾಹಕರಿಂದ ಹಣ ಹೂಡಿಕೆ ಮಾಡಿಸಿರುವದರಿಂದ ಗ್ರಾಹಕರ ಒತ್ತಡದಿಂದ ಜೀವಂತವಾಗಿ ಬದುಕುವುದು ಕಷ್ಟವಾಗಿ ಆತ್ಮಹತ್ಯೆ ಯೋಚನೆ ಮಾಡುತ್ತಿದ್ದಾರೆ. ಅದರಿಂದ ತಾವುಗಳು ಕರ್ನಾಟಕ ರಾಜ್ಯದ 50 ಲಕ್ಷಕ್ಕಿಂತ ಹೆಚ್ಚಿನ ಗ್ರಾಹಕರ ಸುಮಾರು 5000 ಕೋಟಿ ಹಣವನ್ನು ಕಂಪನಿಯಿಂದ ಹಿಂತಿರುಗಿಸಲು ತಾವು ಕ್ರಮ ಕೈಗೊಳ್ಳಬೇಕು. ಮತ್ತು ಕರ್ನಾಟಕ ರಾಜ್ಯದಲ್ಲಿ ಹತ್ತು ಲಕ್ಷಕ್ಕಿಂತ ಹೆಚ್ಚಿನ ಪ್ರತಿನಿಧಿಗಳಿದ್ದು ಅವರಿಗೆ ಸೂಕ್ತ ಕಾನೂನು ರಕ್ಷಣೆ ಒದಗಿಸಬೇಕೆಂದು ಕೇಳಿಕೊಳ್ಳುತೇವೆ. ಒಂದು ವೇಳೆ ಪ್ರತಿನಿಧಿಗಳಿಗೆ ರಕ್ಷಣೆ ನೀಡದಿದ್ದರೆ ಲೋದಾ ಕಮೀಟಿಯ ವಿಳಂಭ ನೀತಿಯಿಂದ ಸಾವಿರಾರು ಪ್ರತಿನಿಧಿಗಳು ಪ್ರಾಣ ಕಳೆದುಕೊಳ್ಳುವ ಸಂಭವವಿದ್ದು ಅವರ ಕುಟುಂಭಗಳು ಅನಾಥವಾಗುತ್ತವೆ. ಗ್ರಾಹಕರಿಗೆ ಮತ್ತು ಪ್ರತಿನಿಧಿಗಳಿಗೆ ಟಿವಿ ಮತ್ತು ಪತ್ರಿಕೆ ಮಾಧ್ಯಮದ ಮುಖಾಂತರ ಪ್ರತಿ ವಾರಕ್ಕೊಮ್ಮೆ ಮಾಹಿತಿ ನೀಡಬೇಕು ಮತ್ತು ಸೆಬಿ, ಯವರು ಕೂಡಲೇ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಯನ್ನು ಹರಾಜು ಪ್ರಕ್ರೀಯೇ ನಡೆಸಿ ತಕ್ಷಣವೇ ಕಂಪನಿಯಲ್ಲಿ ಹಣ ತುಂಬಿರುವ ಗ್ರಾಹಕರಿಗೆ ಹಣ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂಧರ್ಭದಲ್ಲಿ ಪಲ್ರ್ಸ್ ಅಗ್ರೊಟೆಕ ಕಾರ್ಪೊರೇಶನ ಲಿಮಿಟೆಡ್ (ಪಿ.ಎ.ಸಿ.ಎಲ್,) ಕಂಪನಿಯ ತಾಲೂಕಿನ ಪ್ರತಿನಿಧಿಗಳಾದ, ವಾಯ್.ಪಿ.ಭುಜಂಗಿ, ಶಿವಾಜಿ ನಿಂಬಾಯಿ, ವಿರುಪಾಕ್ಷ ಪಾಟೀಲ್, ಬೀರು ಕಾತ್ರಟ್, ಬಾಷಾಸಾಬ ದುಂಡಶಿ, ಬಾಬು ಜಗ್ಗು ಕೋಕರೆ, ನವಲು ವಿಠ್ಠು ಮಿಸಳ, ಬೀರು ಬಾಬು ಕಾತ್ರಟ್, ಪೂರ್ಣಿಮಾ ಆರ್ ಅಂಗಡಿ, ಉಮೇಶ ಹೊಸಳ್ಳಿ, ಬಸವರಾಜ ಬಿ ಜಿನ್ನುರ, ವಿಶ್ವನಾಥ ಮುಡುರ, ಮುನಾಫ್ ದುಂಡಶಿ, ಶಾಕೀರ ಅಹ್ಮದ್, ಅಮೀನಾಬಿ ಕಾಂಜಾದೆ, ಸಬೀಯಾ ಅತ್ತಾರ, ರಹೀಮಖಾನ ಬೆಂಡಿಗೇರಿ, ಮುಂತಾದವರಿದ್ದರು.

loading...