ಪ್ರಾರ್ಥನೆ ಅಂತರಂಗ ಮತ್ತು ಬಹಿರಂಗ ಶುದ್ದಿ ಮಾಡುತ್ತದೆ

0
97
loading...

ಕನ್ನಡಮ್ಮ ಸುದ್ದಿ-ಧಾರವಾಡ : ವಿಶ್ವದ ಪ್ರತಿಯೊಂದು ಧರ್ಮವು ಪ್ರಾರ್ಥನೆ ಆಧಾರಿತವಾಗಿದ್ದು ಪ್ರಾರ್ಥನೆ ಅಂತರಂಗ ಮತ್ತು ಬಹಿರಂಗ ಶುದ್ದಿ ಮಾಡುತ್ತದೆ ಇದನ್ನು ಪ್ರತಿಯೊಬ್ಬರು ಅಳವಡಿಕೆ ಮಾಡಿಕೊಳ್ಳಬೇಕು ಎಂದು ವಿದ್ಯಾನಿಕೇತನ ನಿರ್ದೇಶಕ ಫಾದರ್ ಪ್ರಶಾಂತ ಡಿಸೋಜಾ ಹೇಳಿದರು.
ಶಹರದ ವಿದ್ಯಾಮಂದಿರದಲ್ಲಿ ಭಾರತ ಏಕತಾ ಆಂದೋಲನ ಹಾಗೂ ಬಸವಶಾಂತಿ ಮಿಶನ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಸತ್ಸಂಗ ಸಮಾರಂಭದಲ್ಲಿ ಮಾತನಾಡಿದರು. ಮನುಷ್ಯ ತನ್ನಲ್ಲಿರುವ ಕೋಪತಾಪ, ಅಹಂಕಾರ, ಮದ ಮತ್ಸರಗಳನ್ನು ತೊರೆದು ಹಾಕಿ ವಿಶಾಲ ಮನಸ್ಸಿನಿಂದ ಪ್ರಾರ್ಥನೆ ಮಾಡಿದಾಗ ಮಾತ್ರ ಈ ಜಗತ್ತು ಆನಂದಮಯವಾಗಿರುತ್ತದೆ. ಜಗತ್ತಿನಲ್ಲಿ ಸೌಹಾರ್ಧತೆ ಮತ್ತು ಶಾಂತಿ ನೆಲೆಸಬೇಕು ಎಂದರೆ ಸರ್ವ ಜನಾಂಗಕ್ಕೂ ಪ್ರಾರ್ಥನೆ ಸದ್ವಿಚಾರಗಳ ಚಿಂತನೆ ಅವಶ್ಯ ಎಂದರು.
ಹಿರಿಯ ಸಾಹಿತಿ ರಂಜಾನ ದರ್ಗಾ ಅಧ್ಯಕ್ಷತೆವಹಿಸಿ ಮಾತನಾಡಿ, ದಯೆಯೇ ಧರ್ಮದ ಮೂಲ ಉದ್ದೇಶವಾಗಿದೆ ಸಮಾಜದ ಒಳಿತಿಗಾಗಿ ಪ್ರಾರ್ಥನೆ ಅವಶ್ಯವಾಗಿದ್ದು ಮಾನವನ ನಡೆ ನುಡಿಗಳು ಒಂದಾದಾಗ ಶಾಶ್ವತ ನೆಮ್ಮದಿ ಸಿಗಲು ಸಾಧ್ಯವಿದೆ. ತನಗೆ ಕೇಡು ಬಯಸಿದವರಿಗೂ ಸಹ ಸದ್ಬುದ್ದಿ ನೀಡು ಎಂದು ಭಗವಂತನಲ್ಲಿ ಬಿನ್ನಯಿಸುವದೆ ಪ್ರಾರ್ಥನೆಯಾಗಿದೆ. ಜನರಿಗೆ ಪ್ರಾರ್ಥನೆಯ ಮಹತ್ವ ತಿಳಿಸಿಕೊಡಲು ಇಂತಹ ಸತ್ಸಂಗ ಸಮಾರಂಭಗಳು ಹೆಚ್ಚಾಗಬೇಕು ಎಂದರು.
ಸಮಾರಂಭದಲ್ಲಿ ಕವಯತ್ರಿ ಡಾ.ಸುಮಿತ್ರಾ ಹಲವಾಯಿ ಅವರು ರಚಿಸಿದ ಬೆಂದ ರೆಕ್ಕೆಗಳು ಕವನ ಸಂಕಲನ ಲೋಕಾರ್ಪಣೆ ಮಾಡಿತು. ಬಸವಶಾಂತಿ ಮಿಶನ್ ಅಧ್ಯಕ್ಷ ಮಹಾದೇವ ಹೊರಟ್ಟಿ ಸ್ವಾಗತಿಸಿದರು. ಮಂಜುಳಾ ಪ್ಯಾಟಿಶೆಟ್ಟರ ವಂದಿಸಿದರು.

loading...