ಬರಕ್ಕೆ ಸೆಡ್ಡು ಹೊಡೆದ ಪ್ರಗತಿ ಪರ ರೈತ

0
51
loading...

30 ಟನ್ ಕಲ್ಲಂಗಡಿ ಬೆಳೆದ ರೈತ | 3 ಎಕರೆಯಲ್ಲಿ 4 ಲಕ್ಷ ಆದಾಯ
*ಕೆ ಎಮ್. ಪಾಟೀಲ
ಬೆಳಗಾವಿ: ಬರಕ್ಕೆ ಅಂಜದೆ ಬರಗಾಲದಲ್ಲಿಯು ಉತ್ತಮ ಬೆಳೆಯನ್ನು ಬೆಳೆಯಬಹುದೆಂದು ಅಥಣಿ ತಾಲೂಕಿನ ಕೊಹಳ್ಳಿ ಗ್ರಾಮದ ಮೈನುದಿನ್ ಮಲ್ಲಿಕ್‍ಸಾಬ ಡೊಂಗರಗಾಂವ್ ಎಂಬುವವರು 3 ಎಕರೆ ಭೂಮಿಯಲ್ಲಿ ನಾಮಧಾರಿ ತಳಿ, ಕರಿ ಕಲ್ಲಂಗಡಿಯನ್ನು 30 ಟನ್ ಇಳುವರಿ ಬೆಳೆದು ಜಿಲ್ಲೆಗೆ ಮಾದರಿ ರೈತರಾಗಿದ್ದಾರೆ.
ಸದ್ಯದ ಪರಿಸ್ಥಿತಿಯನ್ನು ಕಂಡರೆ ಮಳೆಯಾಗದೇ, ಇದ್ದ ಬೆಳೆಯು ಬಿಸಿಲಿನ ತಾಪಕ್ಕೆ ಕರಗಿಹೋಗುತ್ತಿವೆ ಇಂತಹ ಸಂದರ್ಭದಲ್ಲಿ ಮೈನುದಿನ್ ರೈತ ಬರಕ್ಕೆ ಸೆಡ್ಡು ಹೊಡೆದು ಇರುವ ಎರಡು ಇಂಚು ನೀರನ್ನು ಬಳಸಿಕೊಂಡಿದ್ದಾನೆ. ತಮಗೆ ಇರುವ 15 ಎಕರೆ ಜಮೀನಿನಲ್ಲಿ 3 ಎಕರೆಯನ್ನು ಕಲ್ಲಂಗಡಿಗಾಗಿ ಉಪಯೋಗಿಸಿದ್ದಾರೆ. ಅದರಲ್ಲಿ ಒಂದು ಎಕರೆ ಕರಿ ಕಲ್ಲಂಗಡಿ ಇನ್ನು ಎರಡು ಎಕರೆದಲ್ಲಿ ನಾಮಧಾರಿ ತಳಿಯ ಕಲ್ಲಂಗಡಿ ಬೆಳೆದಿದ್ದಾರೆ.
ಇವರು ತಮ್ಮ ಜಮೀನಿಗೆ ಅತಿಯಾಗಿ ಸಾವಯ ಗೊಬ್ಬರ, ಮಿತವಾಗಿ ರಸಾಯನಿಕ ಗೊಬ್ಬರ ಬಳಸಿ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡಿದ್ದಾರೆ. ಇದರಿಂದ ಇವರಿಗೆ ಹೆಚ್ಚುವರಿ ಇಳುವರಿ ಬರಲು ಸಾಧ್ಯವಾಯಿತು ಎಂದು ಹೇಳುತ್ತಿದ್ದಾರೆ.
ಜಮೀನಿಗೆ ಮಾಡಿದ ಕರ್ಚು: ಮೈನುದಿನ್ 3 ಎಕರೆ ಭೂಮಿಯಲ್ಲಿ 1 ಎಕರೆ ಜಾಗಾದಲ್ಲಿ 1 ಸಾವಿರ ಕರಿಕಲ್ಲಂಗಡಿ ಸಸಿಗಳನ್ನು ತಂದು ಬೆಳೆಸಿದ್ದಾರೆ. ಇನ್ನು ಬೆಂಗಳೂರಿನಿಂದ ನಾಮಧಾರಿ ತಳಿಯ ಕಲ್ಲಂಗಡಿ 2 ಎಕರೆಯಲ್ಲಿ ಭಿಜವನ್ನು ತಂದು ನಾಟಿ ಮಾಡಿದ್ದಾರೆ. ಅಲ್ಲದೇ ಮೂರು ಎಕರೆ ಜಮೀನಿಗೆ ಮಲ್ಚಿಂಗ್ ವಿಧಾನದಿಂದ ಕೃಷಿ ಮಾಡಿದ್ದಾರೆ. ಈ ವಿಧಾನದಿಂದ ಹೆಚ್ಚುವರಿ ಇಳುವರಿ ಬರಲು ಸಾದ್ಯವಾಯಿತು ಎಂದು ಹೇಳುತ್ತಿದ್ದಾರೆ. 3 ಎಕರೆ ಭೂಮಿಗೆ 80 ಸಾವಿರ ಹಣವನ್ನು ಕರ್ಚುಮಾಡಿ ಬರೊಬ್ಬರಿ ನಾಲ್ಕು ಲಕ್ಷ ಹಣವನ್ನು ಸಂಪಾದಿಸಿದ್ದಾರೆ.
 ಕೃಷಿ ಹೊಂಡ ಆಧಾರ: ಸರ್ಕಾರದಿಂದ ಕೆಲ ರೈತರು ಕೃಷಿ ಹೊಂಡ ನಿರ್ಮಾಣಕ್ಕೆಂದು ಹಣವನ್ನು ತೆಗೆದುಕೊಂಡು ಹೊಂಡವನ್ನು ನಿರ್ಮಾಣ ಮಾಡುವುದೇ ಇಲ್ಲ ಆದರೆ, ಈ ರೈತನು ಕೃಷಿಹೊಂಡವನ್ನು ಸಬ್ಸಿಡಿ ಆಧಾರದಲ್ಲಿ 1.50 ಕೋಟಿ ಲೀಟರ್ ನೀರು ಸಂಗ್ರಹವಾಗುವ ಹೊಂಡವನ್ನು ನಿರ್ಮಿಸಿ ತಾವು ಹಾಕಿದ ಕಲ್ಲಂಗಡಿಗೆ ಹನಿ ನೀರಾವರಿ ಮೂಲಕ ನೀರನ್ನು ಬಿಡುವ ವಿಧಾನ ರೂಡಿಸಿಕೊಂಡಿದ್ದಾರೆ. ಇದರಿಂದ ಸಂಪೂರ್ಣ ಭೂಮಿಯು ಮಲ್ಚಿಂಗ್ ವಿಧಾನದಿಂದ ಭೂಮಿಯಲ್ಲಿ ತೇವಾಂಶವು ಸದಾ ಇರುತ್ತದೆ. ಹಾಗೆಯೇ ಕಲ್ಲಂಗಡಿಗೆ ಅತೀ ಹೇರಳವಾಗಿ ಇಳುವರಿ ಬರಲು ಸಾಧ್ಯ ಎಂದು ಹೇಳುತ್ತಿದ್ದಾರೆ.
ಕರಿ ಕಲ್ಲಂಗಡಿ ಅತಿ ಹೆಚ್ಚು ಲಾಭ: ಪ್ರತಿ ವರ್ಷ ನಾಮಧಾರಿ ತಳಿಯ ಕಲ್ಲಂಗಡಿಯನ್ನು ಬೆಳೆಯುತ್ತಿರುವ ನಾನು ಈ ವರ್ಷ ಕರಿ ಕಲ್ಲಂಗಡಿಯನ್ನು ನಾಟಿ ಮಾಡಿದೆ ನನಗೆ ಕರಿ ಕಲ್ಲಂಗಡಿಯು ಉತ್ತಮ ಇಳುವರಿ ಬಂದು ಅಷ್ಟೆ ಪ್ರಮಾಣದಲ್ಲಯು ಲಾಭವು ಆಗಿದೆ. ಕರಿ ಕಲ್ಲಂಗಡಿ ಇದು ಎಲ್ಲ ವರ್ಗದವರಿಗೂ ಅನುಕೂಲ ಕಾರಣ ಇದು ಸುಮಾರು ಒಂದು ತಿಂಗಳ ವರೆಗೂ ಬಾಳಿಕೆ ಬರುತ್ತೆ ಇದನ್ನು ಕೊಂಡುಕೊಂಡು ಹೋದ ದಲ್ಲಾಳಿಗೆ ಸಹಾಕವಾಗುತ್ತದೇ ಅಲ್ಲದೇ ಹೆಚ್ಚಿನ ಹಣವನ್ನು ನೀಡಿ ದಲ್ಲಾಳಿಗಳು ತೆಗೆದುಕೊಂಡು ಹೋಗುತ್ತಾರೆ. ಈ ಬಾರಿಯೂ ಕಲ್ಲಂಗಡಿಯು ಕೆಜಿಗೆ 7 ರೂ. ಮಾರಾಟವಾಗಿದೆ.
ಜಮೀನಿನಲ್ಲಿ ಸ್ವಂತ ವಿದ್ಯುತ್ ಉತ್ಪಾದನೆ: ಸರ್ಕಾರ ನೀಡುವಂತ ಲೋಡ್ ಸೆಡ್ಡಿಂಗ್ ವಿದ್ಯುತ್‍ಗೆ ಮೊರೆ ಹೋಗದೆ ಮೈನುದಿನ್ ತನ್ನ ಭೂಮಿಯಲ್ಲಿ ಸೋಲಾರ್ ಪ್ಲಾಂಟ್ ಅಳವಡಿಕೆ ಮಾಡಿ ಸ್ವತಃ ತನ್ನ ಜಮೀನಿಗೆ ಬೇಕಾಗುವಷ್ಟು ವಿದ್ಯುತ್ ಉತ್ಪಾದಿಸುತ್ತಿದ್ದಾನೆ ಇದರಿಂದ ತನ್ನ ಕೃಷಿಗೆ ಬಹಳಷ್ಟು ಸಹಾಯಕವಾಗಿದೆ ಎಂದು ಹೇಳುತ್ತಿದ್ದಾರೆ.
ಒಟ್ಟಾರೆಯಾಗಿ ಚಲವೊಂದಿದ್ದರೆ ಏನಾದರು ಸಾದಿಸಬಹುದೆಂದು ಮೈನುದಿನ್ ರೈತ ಇತರ ರೈತರಿಗೆ ವಾಣಿಜ್ಯ ಬೆಳೆಯನ್ನು ಯಾವ ರೀತಿಯಾಗಿ ಬೆಳೆಯಬೇಕು ಎಂದು ತೊರಿಸಿಕೊಟ್ಟಿದ್ದಾನೆ.
ಬಾಕ್ಸ್
ಜಮೀನಿಗೆ ಅತಿಯಾಗಿ ಸಾವಯವ ಗೊಬ್ಬರ, ಮಿತವಾಗಿ ರಸಾಯನಿಕ ಗೊಬ್ಬರವನ್ನು ಉಪಯೋಗಿಸಬೇಕು ಅಂದಾಗ ಉತ್ತಮ ಇಳುವರಿ ಬರಲು ಸಾಧ್ಯ. ಅಲ್ಲದೇ, ಕರಿ ಕಲ್ಲಂಗಡಿಯನ್ನು ಅತಿ ಹೆಚ್ಚು ಬೆಳೆಯುವುದರಿಂದ ರೈತರಿಗೆ ಹೆಚ್ಚಿಗೆ ಲಾಭವಾಗುತ್ತದೆ ಕಾರಣ ಇದು ಒಂದು ತಿಂಗಳು ಇಟ್ಟು ತಿಂದರು ಕೆಡುವುದಿಲ್ಲ. ಹಾಗೆಯೇ ಇದಕ್ಕೆ ದಲ್ಲಾಳಿಗಳು ಹೆಚ್ಚಿನ ದರವನ್ನು ನೀಡಿ ಕೊಂಡುಕೊಂಡು ಹೋಗುತ್ತಾರೆ.
-ಮೈನುದಿನ್ ಡೊಂಗರಗಾಂವ್. ಕೊಹಳ್ಳಿ ಗ್ರಾಮದ ರೈತ

loading...