ಬಸವ ಜಯಂತಿ ಪ್ರಯುಕ್ತ ಸಸಿ ನೆಟ್ಟ ಯುವಪಡೆ

0
40
loading...

ಕನ್ನಡಮ್ಮ ಸುದ್ದಿ-ಕುಷ್ಟಗಿ : ಜಗಜ್ಯೋತಿ ಬಸವೇಶ್ವರರ ಜಯಂತಿ ಪ್ರಯುಕ್ತ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಅಭಿಮಾನಿ ಬಳಗದ ವತಿಯಿಂದ ಪಟ್ಟಣದ 2ನೇ ವಾರ್ಡನ ಬಸವ ಉದ್ಯಾನವದಲ್ಲಿ ಹಾಗೂ ಅಕ್ಕಪಕ್ಕದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಯುವಪಡೆ ಹಮ್ಮಿಕೊಂಡಿತ್ತು.
ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಸಸಿ ನೆಟ್ಟು ನೀರುಣಿಸಿ ನಂತರ ಮಾತನಾಡಿ ಬಸವಣ್ಣನವರ ಜಯಂತಿಯಂದು ಯುವ ಪಡೆಯು ಇಂಥ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ. ನಾವೆಲ್ಲರೂ ಉತ್ತಮ ಆರೋಗ್ಯ ಹಾಗೂ ಜೀವನವನ್ನು ಸಾಗಿಸಬೇಕಾಗಿ ಹಸಿರು ವಾತಾವರಣ ತುಂಬಾ ಮುಖ್ಯ. ಹಸಿರಿನಿಂದಲೇ ನಮ್ಮೆಲ್ಲರ ಉಸಿರು. ಸಕಲ ಜೀವರಾಶಿಗಳಿಗೆ ಕುಡಿಯಲು ನೀರು ಜನ ಜಾನುವರುಗಳಿಗೆ ನೀರು ಸಿಗಬೇಕಾದರೆ ಹಸಿರಿನಿಂದ ಮಾತ್ರ ಸಾಧ್ಯ. ಮುಂದಿನ ಪೀಳೀಗೆಗೆ ಕುಡಿಯುವ ನೀರು ಸಿಗಬೇಕಾದರೆ ಹಸಿರು ವತಾವರಣವನ್ನು ನಿರ್ಮಾಣ ಮಾಡುವ ಸಂಕಲ್ಪ ಇಂದಿನ ಯುವ ಪಡೆ ಮಾಡಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಯುವಕ ಪಡೆಯ ಮುಖಂಡರಾದ ಅಬ್ದುಲ್ ರಜಾಕ್ ಸುಳ್ಳದ, ಮಹ್ಮದ ಯುಸೂಪ, ಸುನೀಲ, ಅಮರೇಶ ಹಳೇಗೌಡ್ರ, ಅಸ್ಲಂ ಲಾರಾ, ಕಸಾಪ ಅಧ್ಯಕ್ಷ ನಟರಾಜ ಸೋನಾರ, ವೀರೇಶ ಬಂಗಾರಶೆಟ್ರ, ಸಿ.ಪಿ. ಪಾಟೀಲ, ಪುರಸಭೆ ಸದಸ್ಯರಾದ ಚನ್ನಪ್ ನಾಲಗಾರ, ಚಂದ್ರು ಹಿರೇಮನಿ, ಸಂತೂಷ ಸರಗಣಾಚಾರ, ಸೇರಿದಂತೆ ವಾರ್ಡ ನಾಗರಿಕರು ಉಪಸ್ಥಿತರಿದ್ದರು. ಇದೇ ವೇಳೆ ಸುಮಾರು 50ಕ್ಕೂ ಹೆಚ್ಚು ವಿವಿಧ ಬಗೆಯ ಸಸಿಗಳನ್ನು ನೆಟ್ಟು ನೀರುಣಿಸಲಾಯಿತು.

loading...