ಬೆಳಕೆ ಕಿರು ಬಂದರು ನಿರ್ಮಾಣಕ್ಕೆ ಶಿಲನ್ಯಾಸ ನೇರವೇರಿಸಿ ಶಾಸಕ ವೈದ್ಯ

0
41
loading...

ಕನ್ನಡಮ್ಮ ಸುದ್ದಿ-ಭಟ್ಕಳ : ಬೆಳಕೆ ಮೀನುಗಾರಿಕೆ ಪ್ರದೇಶದಲ್ಲಿ ಕಿರು ಬಂದರು ನಿರ್ಮಾಣ ಮಾಡಲು ಸರ್ಕಾರದಿಂದ ಬಿಡುಗಡೆಗೊಂಡ 2.40 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯ ಶಿಲನ್ಯಾಸವನ್ನು ಶನಿವಾರ ಭಟ್ಕಳ ಶಾಸಕ ಮಂಕಾಳ ಎಸ್ ವೈದ್ಯ ಮೀನುಗಾರಿಕೆ ಬಂದರು ಪ್ರದೇಶದಲ್ಲಿ ಗುದ್ದಲಿ ಪೂಜೆಯ ಮೂಲಕನೇರವೇರಿಸಿದರು.
ಶಿಲನ್ಯಾಸದ ನಂತರ ಮಾತನಾಡಿದ ಅವರು ನಾನು ಸಾಮಾನ್ಯ ಜನರಿಗೆ ಅನುಕೂಲವಾಗುವ ಹಾಗೂ ಅವರವರ ವೃತ್ತಿಗೆ ಅನುಕೂಲವಾಗುವಂತಹ ಕಾಮಗಾರಿಗಳ ಅನುದಾನವನ್ನು ತರಲು ಪ್ರಯತ್ನಿಸುತಿದ್ದೇನೆ ಎಂದು ತಿಳಿಸಿದರು. ಬೆಳಕೆ ಕ್ಷೇತ್ರ ಜನರು ಕಳೇದ ಬಾರಿ ವಿಧಾನಸಭೆ ಚುಣಾವಣೆ ವೇಳೆ ನಾನು ಅತೀ ಹೆಚ್ಚು ಮತ ಗಳಿಸಲು ಸಹಕರಿಸಿದ್ದಾರೆ. ಹಾಗಾಗಿ ಇಲ್ಲಿನ ಜನರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ನಾನು ಬದ್ದ ಎಂದು ತಿಳಿಸಿದರು. ಈಗಾಗಲೇ ಪ್ರತಿ ಗ್ರಾಮ ಫಂಚಾಯತ್‍ನಲ್ಲಿ ಅಂದಾಜು 5 ಕೋಟಿ ಮೊತ್ತದ ಅಭಿವೃದ್ದಿ ಕಾಮಗಾರಿಯಾಗಬೇಕು ಎಂಬ ಗುರಿಯೊಂದಿಗೆ ಶ್ರಮಿಸುತ್ತಿದ್ದು ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಫಲನಾಗುತ್ತೇನೆ ಎಂದು ತಿಳಿಸಿದರು.
ಬೆಳಕೆ ಜಿಲ್ಲಾ ಪಂಚಾಯತ್ ಸದಸ್ಯ ಅಲ್ಬರ್ಟ ಡಿಕೊಸ್ತಾ ಈ ಸಂದರ್ಭದಲಿ ಮಾತನಾಡಿದರು. ತಾಪಂ ಅಧ್ಯಕ್ಷ ಈಶ್ವರ ನಾಯ್ಕ, ತಾಪಂ ಸದಸ್ಯ ಮಹಾಬಲೇಶ್ವರ ನಾಯ್ಕ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿಠ್ಠಲ ನಾಯ್ಕ, ಹೆಸ್ಕಾಂ ನಿರ್ದೆಶಕ ಮಂಜುನಾಥ ನಾಯ್ಕ, ಎಪಿಎಂಸಿ ಸದಸ್ಯ ಸುರೇಶ ನಾಯ್ಕ, ಬೆಳ್ಕೆ ಸೊಸೈಟಿ ಅಧ್ಯಕ್ಷ ಮಂಜುನಾಥ ನಾಯ್ಕ, ಸೋಡಿಗದ್ದೆ ದೇವಸ್ಥಾನದ ಅಧ್ಯಕ್ಷ ನಾಗರಾಜ ಈ ಎಚ್, ಊರಿನ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

loading...