ಬೇಸಿಗೆ ರಜೆಯಲ್ಲಿ ಸ್ವಲ್ಪ ಓದು ಸ್ವಲ್ಪ ಮೋಜು

0
51
loading...

ಕನ್ನಡಮ್ಮ ಸುದ್ದಿ-ಮುಂಡಗೋಡ : ಬೇಸಿಗೆ ರಜೆಯಲ್ಲಿ ಶಿಕ್ಷಣ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಮಕ್ಕಳಿಗೆ ಹೊರೆಯಾಗದಂತೆ ಮನೋರಂಜನಾ ರೀತಿಯಲ್ಲಿ ಸ್ವಲ್ಪ ಓದು ಸ್ವಲ್ಪ ಮೋಜು ಎಂಬ ಶಿಕ್ಷಣಕ್ಕೆ ಪೂರಕವಾದ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಮಕ್ಕಳು ಇದರ ಸಮರ್ಪಕ ಸದುಪಯೋಗಪಡೆದುಕೊಳ್ಳಬೇಕಿದೆ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆ ಉಪನಿರ್ಧೇಶಕ ಪ್ರಸನ್ನಕುಮಾರ ಹೇಳಿದರು
ಸೋಮವಾರ ಇಲ್ಲಿಯ ಶಾಸಕರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಮಟ್ಟದ ಸ್ವಲ್ಪ ಓದು ಸ್ವಲ್ಪ ಮೋಜು ಬೇಸಿಗೆ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು. 2017-18 ನೇ ಸಾಲಿನಲ್ಲಿ 6 ಹಾಗೂ 7 ನೇ ತರಗತಿಗೆ ಪ್ರವೇಶ ಪಡೆಯಲಿರುವ ಶಾಲಾ ಮಕ್ಕಳಿಗೆ ದಾಸೋಹದೊಂದಿಗೆ ಮನೋರಂಜನಾ ರೀತಿಯಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಘಂಟೆಯವರೆಗೆ 3 ಘಂಟೆಗಳ ಕಾಲ ನಡೆಯುವ ಸ್ವಲ್ಪ ಓದು ಸ್ವಲ್ಪ ಮೋಜು ಎಂಬ ಬೇಸಿಗೆ ಶಿಬಿರದಲ್ಲಿ ತರಬೇತಿ ಹೊಂದಿದ ಶಿಕ್ಷಕರಿಂದ ಸಾಮಾಜಿನ ಜ್ಞಾನದ ಅರಿವು ನೀಡಲಾಗುತ್ತದೆ. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 150 ಕ್ಕೂ ಹೆಚ್ಚು ಮಕ್ಕಳು ಹೊಂದಿದ ಮುಂಡಗೋಡ ತಾಲೂಕಿನ 20, ಯಲ್ಲಾಪುರ 6, ಹಳಿಯಾಳ 28 ಮತ್ತು ಜೋಯಿಡಾ ತಾಲೂಕಿನ 6 ಶಾಲೆಗಳನ್ನು ಆಯ್ಕೆ ಮಾಡಲಾಗಿದ್ದು, 5 ವಾರಗಳ ಕಾಲ ಈ ಶಿಬಿರ ನಡೆಯಲಿದೆ ಎಂದು ಹೆಳಿದರು.
ಜಿ.ಪಂ ಸದಸ್ಯ ಎಲ್.ಟಿ.ಪಾಟೀಲ ಉದ್ಘಾಟಿಸಿ ಮಾತನಾಡಿ, ಎಲ್ಲ ರೀತಿಯ ತಿಳಿವಳಿಕೆ ಹೊಂದಿದರೆ ಮಾತ್ರ ಮಕ್ಕಳು ಉತ್ತಮ ವಿದ್ಯಾರ್ಥಿಗಳಾಗಿ ಹೊರಹೊಮ್ಮಲು ಸಾದ್ಯ. ಪಠ್ಯೇತರ ಚಟುವಟಿಕೆಯೊಂದಿಗೆ ಸಾಮಾನ್ಯ, ಸಾಮಾಜಿಕ ಜ್ಞಾನ ಕೂಡ ಮಕ್ಕಳಲ್ಲಿ ಬರಬೇಕಿದೆ. ನೈರ್ಮಲಿಕರಣದಲ್ಲಿ ದೇಶದ ಪ್ರಧಾನಿಗಳ ಕನಸು ಹಾಗೂ ಆದರ್ಶವನ್ನು ಮಕ್ಕಳು ಕೂಡ ಅಳವಡಿಸಿಕೊಳ್ಳಬೇಕು ಎಂದರು.
ಕುಮಟಾ ಡಯಟ್ ಪ್ರಾಂಶುಪಾಲ ಪ್ರಶಾಂತ ವೆರ್ಣೇಕರ, ಶಿರಸಿ ಶಿಕ್ಷಣಾಧಿಕಾರಿ ಎಮ್.ಎಸ್.ಹೆಗಡೆ, ದೈಹಿಕ ಶಿಕ್ಷಣ ಪರಿವೀಕ್ಷಕ ಎನ್.ಆರ್ ಕಳ್ಳಿಮನಿ, ಸಮನ್ವಯಾಧಿಕಾರಿ ಆನಂದ ಕೊರವರ, ಸರಕಾರಿ ನೌಕರ ಸಂಘದ ಅಧ್ಯಕ್ಷ ಸುಬಾಸ ಡೋರಿ, ಪ್ರದೀಪ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು. ಆನಂದ ಕೊರವರ ಸ್ವಾಗತಿಸಿದರು. ವಿನೋದ ನಾಯ್ಕ ನಿರೂಪಿಸಿದರು.

loading...