ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವಂತೆ ಆಗ್ರಹ

0
63
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದ ರಾಜ್ಯ ಹೆದ್ದಾರಿ 31ರ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರೀಯೆಯನ್ನು ಕೈಬಿಡುವಂತೆ ಆಗ್ರಹಿಸಿ ಗ್ರಾಮ ರೈತರು ಹಾಗೂ ದಲಿತ ಸಮುದಾಯ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು ಅಭಿವೃದ್ಧಿ ಪಡಿಸುತ್ತಿರುವ ಜಿಲ್ಲೆಯ ಹೀರೆಬಾಗೇವಾಡಿ ಬೈಲಹೊಂಗಲ ಸವದತ್ತಿ ರಾಜ್ಯ ಹೆದ್ದಾರಿ 31 ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸಂಪಗಾಂವ ಗ್ರಾಮದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಈ ಭಾಗದ ಭೂಮಿಯು ಫಲವತ್ತಾದ ಏರಿ ನೀರಾವರಿ ಜಮೀನಾಗಿದ್ದು, ಇದನ್ನು ಸ್ವಾಧೀನ ಪಡಿಸಿಕೊಳ್ಳುವುದರಿಂದ ಈ ಭಾಗದ ರೈತರಿಗೆ ತೊಂದರೆ ಉಂಟಾಗುತ್ತದೆ. ರಾಜ್ಯ ಸರ್ಕಾರ ತಿಗಡಿಹರಿನಾಲಾ ಯೋಜನೆಯಡಿ ಈಗಾಗಲೇ ರೈತರ ಜಮೀನನ್ನು ಸ್ವಾಧೀನಪಸಿಕೊಂಡಿದ್ದು, ಈಗ ಮತ್ತೆ ಭೂಮಿಯನ್ನು ಪಡೆಯುತ್ತಿರುವುದು ಈ ಭಾಗದ ರೈತರನ್ನು ಸಂಕಷ್ಟಕ್ಕಿಡು ಮಾಡಿದೆ. ಆದ್ದರಿಂದ ಬೈಪಾಸ್ ರಸ್ತೆ ನಿರ್ಮಿಸಲು ಭೂಸ್ವಾಧೀನಕ್ಕೆ ಮುಂದಾದರೆ ಉಗ್ರ ಹೋರಾಟ ನಡೆಸುದಾಗಿ ಮನವಿಯಲ್ಲಿ ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಂಜುನಾಥ ಶಿಡ್ಲೆವಗೋಳ, ಅರ್ಜುನ ದಾಂಡಿಗ್ಯಾಗೋಳ, ಶಿವಲಿಂಗಪ್ಪ ಶೆಟ್ಟರ್, ಅಭಯ ಅವಲಕ್ಕಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

loading...