ಮಲಪ್ರಭಾ ಸಕ್ಕರೆ ಕಾರ್ಖಾನೆ ಅವ್ಯವಹಾರ ಸಿಬಿಐ ತನಿಖೆಯಾಗುವಂತೆ ಒತ್ತಾಯ

0
19
loading...

ಕನ್ನಡಮ್ಮ ಸುದ್ದಿ-ಬೆಳಗಾವಿ:3 ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರ ಬಗ್ಗೆ ಶೀಘ್ರವೇ ಸಿಬಿಐ ತನಿಖೆಯಾಗಬೇಕೆಂದು ಜಿಲ್ಲೆಯ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
2004 ರಿಂದ ಕಾರ್ಖಾನೆಯ ಆಡಳಿತ ನಡೆಸುತ್ತ ಬಂದಿರುವ ಶಾಸಕ ಡಿಬಿ ಇನಾಮದಾರ ಹಾಗೂ ಆಡಳಿತ ಮಂಡಳಿ ಸದಸ್ಯರು 12 ವರ್ಷಗಳಿಂದ ಕಾರ್ಖಾನೆಯಲ್ಲಿ ಅವ್ಯವಹಾರ ನಡೆಸುತ್ತಿದ್ದಾರೆ. ಕಾರ್ಖಾನೆ ಸೇಲ್ ಪರ ಲೇಸ್ ಸಕ್ಕರೆ ಹೊಂದಿದ್ದೂ ದೇಶದಲ್ಲಿ ಒಳ್ಳೆಯ ಬೇಡಿಕೆಯಿದ್ದರೂ ಸಹ ಆಡಳಿತ ಮಂಡಳಿ ಮಾತ್ರ 168 ಕೋಟಿಗಳಷ್ಟು ಹಾನಿಯುಂಟಾಗಿದೆ ಎಂದು ಹೇಳುತ್ತಲೇ ಇದೆ.
ಅಲ್ಲದೇ ಪ್ರತಿ ವರ್ಷ ಎಫ್.ಆರ್.ಪಿ ಪ್ರಕಾರ ಕೂಡಾ ದರ ಕೂಡ ಕೊಡದೆ ವಂಚಿಸುತ್ತಿದೆ. ಆದ್ದರಿಂದ ಇದನ್ನು ಕೂಡಲೇ ಸಿಬಿಐ ತನಿಖೆಯಾಗಬೇಕು ಹಾಗೂ ಕಾರ್ಖಾನೆಯ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾಡಳಿತವೇ ನಿರ್ವಹಿಸಬೇಕು ಎಂದೂ ಮನವಿಯಲ್ಲಿ ಒತ್ತಾಯಿಸಿದರು. ಈ ಬಾರಿ ನ್ಯಾಯ ಸಿಗದಿದ್ದರೆ ಸತತವಾಗಿ ರೈತರಿಗೆ ಹಾಗೂ ಸರ್ಕಾರಕ್ಕೆ ವಂಚನೆ ಮಾಡುತ್ತಾ ಬಂದಿರುವ ಆಡಳಿತ ಮಂಡಳಿ ವಿರುದ್ಧ ಏ.24ರಂದು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರಾಘವೇಂದ್ರ ನಾಯಕ, ಚುನಪ್ಪಾ ಪೂಜಿರೆ, ಭರಮು ಕೇಮಲಾಪುರೆ ಹಾಗೂ ಯಲ್ಲಪ್ಪಾ ಚನ್ನಾಪುರ ಮೊದಲಾದವರು ಪಾಲ್ಗೊಂಡಿದ್ದರು.

loading...