ರಾಜ್ಯದಲ್ಲಿ ಉದ್ಯೊಗ ಖಾತ್ರಿ ಯೋಜನೆಯಲ್ಲಿ ದುಡಿದ ಜನತೆಗೆ ಕೂಲಿಗೆ ಹಣವಿಲ್ಲ!

0
56
loading...

ಕನ್ನಡಮ್ಮ ಸುದ್ದಿ-ಶಿರಹಟ್ಟಿ : ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸ ಮಾಡಿದ ಕೆಲಸಗಾರರಿಗೆ ಕೂಲಿಯೇಸಿಗುತ್ತಿಲ್ಲ.ನರೇಗಾ ಬೊಕ್ಕಸವೇ ಖಾಲಿಯಾಗಿರುವದರಿಂದ ಕರ್ನಾಟಕ ರಾಜ್ಯದಲ್ಲಿ ಇಂತಹ ಸನ್ನಿವೇಶ ತಲೆದೋರಿದೆ.
ದಿನವಿಡಿ ಬೆವರಿಳಿಸಿದ ಕೂಲಿಕಾರರು ದುಡಿಮೆಯ ಹಣಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದು. ಕಾಲಮಿತಿಯಲ್ಲಿ ಕೂಲಿದೊರೆಯದಾಗಿದೆ. ಹಲವರು 20 ದಿನಗಳಿಗೂ ಹೆಚ್ಚು ಕೂಲಿ ಮಾಡಿಯೂ ನಯಾ ಪೈಸೆಯೂ ಇಲ್ಲದೇ ಕುಳಿತಿದ್ದಾರೆ. ಮಾ 18 ರಿಂದ ಈವರೆಗೆ ಕೂಲಿಯೂ ಬಿಡುಗಡೆಯಾಗಿಲ್ಲ .ಕಳೆದ ಮುರ್ನಾಲ್ಕು ವರ್ಷಗಳಿಂದ ಸತತವಾಗಿ ಬರಗಾ¯ ಎದುರಾಗಿರುವದರಿಂದ ಜನ,ಕೆಲಸವಿಲ್ಲದೇ ಗುಳೆ ಹೋಗುತ್ತಿದ್ದಾರೆ.ಅದನ್ನು ತಪ್ಪಿಸಲುನೆರವಾಗಬೇಕಿದ್ದ,ಯೋಜನೆ ಇಲ್ಲಿ ಇದ್ದು ಇಲ್ಲದಂತಾಗಿದೆ. ನರೇಗದಲ್ಲಿ ಕೆಲಸ ಮಾಡಿದವರಿಗೆ ಎರಡ್ಮೂರು ದಿನದಲ್ಲಿಯೇ ಕೂಲಿ ನೀಡಬೇಕೆಂದು ಪ್ರತಿಯೊಂದು ಸಭೆ,ಸಮಾರಂಭಗಳಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭರವಸೆ ನೀಡುತ್ತಾರೆ.ಆದರೆ.ಇದು ಕಾರ್ಯರೂಪಕ್ಕೆ ಬರುತ್ತಿಲ್ಲ.
ಕಾಯುತ್ತಿದ್ದಾರೆ ಕಾರ್ಮಿಕರು: ನರೇಗಾದಡಿ ಕೂಲಿಯ ಹಣವನ್ನು ನೀಡಲು ಫಂಡ್ ಟ್ರಾನ್ಸ್‍ಫರ್ ಆರ್ಡರ್(ಎಫ್‍ಟಿಓ)ಗೆ ಗ್ರಾಮ ಪಂಚಾಯತಿ ಅಧ್ಯಕ್ಷರು,ಪಿಡಿಒ ಅವರುವ ಸಹಿ ಮಾಡಿ ಬ್ಯಾಂಕಿಗೆ ಸಲ್ಲಿಸಿದ್ದಾರೆ.ನರೇಗಾದ ನ್ಯಾಸನಲ್ ಎಲೆಕ್ಟ್ರಾನಿಕ್ ಫಂಡ್ ಮ್ಯಾನೆಜ್‍ಮೆಂಟ್ ಸಿಸ್ಟಮ್ ಖಾತೆಯಲ್ಲಿ ಹಣವಿಲ್ಲದಿರುವುದರಿಂದ ಕಾರ್ಮಿಕರ ಖಾತೆಗೆ ಹಣ ಜಮಾ ಆಗುತ್ತಿಲ್ಲ.ಇದರಿಂದಾಗಿ ಕೆಲಸ ಮಾಡಿ ತಿಂಗಳು ಕಳೆದರೂ,ಕೂಲಿಗಾಗಿ ಕಾರ್ಮಿಕರು ಚಾತಕಪಕ್ಷಿಗಳಾಗಿ ಕಾಯುತ್ತಿದ್ದಾರೆ.

ನೂರಾರು ಕೋಟಿ ಬಾಕಿ: ರಾಜ್ಯದಲ್ಲಿ ಮಾರ್ಚ್ 18 ರಿಂದ ಮಾರ್ಚ್.31ರವೆರೆಗೆ ಕೂಲಿ ಮಾಡಿದ ಸಹಸ್ರಾರು ಜನರು ಇಂದಿಗೂ ಅಲೆದಾಡುತ್ತಿದ್ದಾರೆ. ರಾಜ್ಯದಲ್ಲಿ ನೂರಾರು ಕೋಟಿ ರೂ,ಕೂಲಿಯನ್ನು ನರೇಗಾದಡಿ ಕೆಲಸ ನಿರ್ವಹಿಸಿದ ಕಾರ್ಮಿಕರಿಗೆ ನೀಡಬೇಕಾಗಿದೆ.

ಹೆಡ್ ಅಕೌಂಟ್‍ನಲ್ಲಿ ಹಣವಿಲ್ಲ: ಕಳೆದ 20 ದಿನಗಳಿಂದ ಕೂಲಿಯ ಹಣ ಕಾರ್ಮಿಕರ ಖಾತೆಗೆ ಬ್ಯಾಂಕಿನಲ್ಲಿ ಜಮಾ ಆಗದಿರುವದರಿಂದ ಗ್ರಾಮಪಂಚಾಯಿತಿ ಮಟ್ಟದಲ್ಲಿ ಪಿಡಿಒಗಳಿಗೆ ಕೂಲಿ ಕಾರ್ಮಿಕರು ಕೂಲಿಯ ಹಣಕ್ಕೆ ದುಂಬಾಲು ಬೀಳುವಂತಾಗಿದೆ.ಈ ನಡುವೆ ಇದೇ ಸಮಸ್ಯೆಯಿಂದಾಗಿ ಪಿಡಿಒಗಳು ಗ್ರಾಮಗಳಿಗೆ ಹೋಗಲು ಹಿಂದೇಟು ಹಾಕುವಂತಾಗಿದೆ. ಜಿಲ್ಲಾಮಟ್ಟದ ಅಧಿಕಾರಿಗಳು ಕೂಲಿನೀಡಲು ಕೈಗೊಳ್ಳಬೇಕಾದ ಎಲ್ಲ ಕ್ರಮಗಳನ್ನು ಪೂರ್ಣಗೊಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಮುಖ್ಯ ಖಾತೆಯಲ್ಲಿ ಹಣವಿಲ್ಲದಿರುವುದು ಕೂಲಿಯೇ ಬಂದಿಲ್ಲ.ಆರ್ಥಿಕ ವರ್ಷ ಮಾರ್ಚ್‍ಗೆ ಪೂರ್ಣಗೊಂಡಿದೆ.ಎಪ್ರಿಲ್‍ನಿಂದ ಹೊಸ ಆರ್ಥಿಕ ವರ್ಷ ಆರಂಭವಾಗುತ್ತಿದೆ.ಈ ಮಧ್ಯಂತರ ಅವಧಿಯೇ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ.

ಆರ್ಥಿಕ ವರ್ಷದ ಕೊನೆ ಮತ್ತು ಆರಂಭದ ತಿಂಗಳಾಗಿರುವದರಿಂದ ಸ್ವಲ್ಪಮಟ್ಟಿಗೆ ತಾಂತ್ರಿಕ ಸಮಸ್ಯೆಯಾಗುತ್ತಿದೆ.ಕೂಲಿಕಾರ್ಮಿಕರು ಆತಂಕ ಪಡಬೇಕಿಲ್ಲ. ಶೀಘ್ರವೇ ನರೇಗಾದಡಿ ಕೆಲಸ ಮಾಡಿದವರಿಗೆ ಹಣ ನೀಡಲಾಗುವದು ಎನ್ನುತ್ತಾರೆ ಉನ್ನತಮಟ್ಟದ ಅಧಿಕಾರಿಗಳು.

ಬಾಕ್ಸ್ ………
ಬರ ಇರುವದರಿಂದ ನರೇಗಾದಲ್ಲಿ ಕೆಲಸ ಸಿಗುತ್ತದೆ.ಜೀವನ ಸಾಗಿಸಬಹುದೆನ್ನುವ ಜನರ ನಿರೀಕ್ಷೆ ಹುಸಿಯಾಗಿದೆ.ಕೂಲಿಗೆ ಹೋಗಿ ಬಂದು 20 ದಿನ ಕಳೆದರೂ ಹಣ ಬಂದಿಲ್ಲ.ಇದರಿಂದ, ಜೀವನ ಸಾಗಿಸುವದು ಕಷ್ಟವಾಗಿದ್ದು,ಸರಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು.
ಶಂಕ್ರಪ್ಪ,ನರೇಗಾ ಕೂಲಿ ಕಾರ್ಮಿಕ.

loading...