ಲಾರಿ-ಬೈಕ್ ಮಧ್ಯೆ ಭೀಕರ ಅಪಘಾತ: ಬೈಕ್ ಸವಾರನ ಸಾವು

0
52
loading...

ಯಲ್ಲಾಪುರ : ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಇಡಗುಂದಿ ಬಳಿಯ ದೋಣಗಾರ್ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಮೃತಪಟ್ಟ ಬೈಕ್ ಸವಾರನನ್ನು ದೋಣಗಾರ ಗ್ರಾಮದ ಬೋಡೆಮನೆಯ ಸುಬ್ರಾಯ ಗಣಪತಿ ಬೋಡೆ (72) ಎಂದು ಗುರುತಿಸಲಾಗಿದೆ. ಯಲ್ಲಾಪುರದಿಂದ ಕೆಲಸ ಮುಗಿಸಿ ಮನೆಗೆ ಬೈಕ್ ನಲ್ಲಿ ತೆರಳುತ್ತಿದ್ದ ಸುಬ್ರಾಯ ಗಣಪತಿ ಬೋಡೆ ದೋಣಗಾರ್ ಕ್ರಾಸ್ ಬಳಿ ತಿರುವಿನಲ್ಲಿ ಬೈಕ್ ತಿರುಗಿಸುತ್ತಿದ್ದಾಗ. ಅಂಕೋಲಾ ಕಡೆಯಿಂದ ಬಂದ ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಅಫಘಾತ ಸಂಭವಿಸಿದ ಪರಿಣಾಮ ಲಾರಿಯ ಚಕ್ರ ಇವರ ಮೇಲೆ ಹರಿದು ಹೋಗಿದ್ದು ಇವರ ದೇಹ ಸಂಪೂರ್ಣ ನುಜ್ಜುಗುಜ್ಜಾಗಿದೆ. ಪಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

loading...