ಸುಳ್ಳು ಹೇಳುವುದರಲ್ಲಿ‌ ಬಿಎಸ್ ವೈ ನಿಸ್ಸಿಮ: ಕುಮಾರಸ್ವಾಮಿ ಆರೋಪ

0
39
loading...


ಕನ್ನಡಮ್ಮ ಸುದ್ದಿ

ಬೆಳಗಾವಿ:6 ಬಿಜೆಪಿ‌ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸುಳ್ಳು ಹೇಳುವುದರಲ್ಲಿ ನಿಸ್ಸಿಮ ರಾಜ್ಯದಲ್ಲಿ‌‌ ಭೀಕರ ಬರಗಾಲವಿದ್ದರೂ ಕೇಂದ್ರ ಸರಕಾರ ಸ್ಪಧಿಸುತ್ತಿಲ್ಲ ಮಾಜಿ‌ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ‌ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ‌ ಹೇಳಿದರು.
ಅವರು ಗುರುವಾರ ರಾಮದುಗ೯ದ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡು ಪತ್ರಕತ೯ರೊಂದಿಗೆ ಮಾತನಾಡುತ್ತ, ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ರೈತರಿಗೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ. ಯಡಿಯೂರಪ್ಪನವರು ಅಧಿಕಾರದಲ್ಲಿರುವಾಗಲೇ ರೈತರ ಸಾಲ ಮನ್ನಾ ಮಾಡಲು ಧ್ವನಿ‌ ಎತ್ತಲಿಲ್ಲ. ರೈತರ ಸಾಲಮನ್ನಾ ಕೇಂದ್ರ ಹಾಗೂ ರಾಜ್ಯ ಸರಕಾರ ರೈತರೊಂದಿಗೆ ಚೆಲ್ಲಾಟವಾಡುತ್ತಿವೆ ಎಂದು ಕುಮಾರಸ್ವಾಮಿ‌ ಆರೋಪಿಸದರು.

loading...