ಸೂಲಿಬೆಲೆ ಬಹಿರಂಗವಾಗಿ ಕ್ಷಮೆ ಯಾಚಿಸಲು ಆಗ್ರಹ

0
57
loading...

ಕನ್ನಡಮ್ಮ ಸುದ್ದಿ ಬೆಳಗಾವಿ: ಮಾಜಿ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಬಗ್ಗೆ ಚಕ್ರವತಿ ಸೂಲಿಬೆಲೆ ಮಾದ್ಯಮದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಈ ನಿಟ್ಟಿನಲ್ಲಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರವಾದ ಹೋರಾಟವನ್ನು ಕೈಗೊಳ್ಳಲಾಗುವುದೆಂದು ಬಿ ಎಸ್ ಯಡಿಯೂರಪ್ಪ ಅಭಿಮಾನಿ ಬಳಗ ಬೆಳಗಾವಿ ಆಗ್ರಹಿಸಿದರು.
ನಗರದ ಚನ್ನಮ್ಮ ವೃತ್ತದಲ್ಲಿ ಚಕ್ರವರ್ತಿ ಸೂಲಿಬೆಲೆ ಪ್ರತಿಕೃತ ದಹನಕ್ಕೆ ಬೆಂಕಿ ಹಚ್ಚುವ ಮೂಲಕ ನೂರಾರು ಕಾರ್ಯಕರ್ತರು ಸೂಲಿಬೆಲೆ ವಿರುದ್ಧ ದಿಕ್ಕಾರ ಕೂಗಿದರು.
ನಂತರ ರುದ್ರಗೌಡ ಪಾಟೀಲ ಮಾತನಾಡಿ, ಕರ್ನಾಟಕದ ಅಭಿವೃದ್ಧಿ ಹರಿಕಾರ ಎಂದೆ ಖ್ಯಾತಿ ಹೊಂದಿದ ಮಾಜಿ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸಿಎಂ ಆಗಲು ಅನರ್ಹ ಎಂದು ಟೀಕಿಸಿದ್ದಾರೆ. ಆದರೆ, ಯಡಿಯೂರಪ್ಪ ಒಂದು ಸಮುದಾಯಕ್ಕೆ ಮೀಸಲಿರದೆ ಅವರು ಎಲ್ಲ ಸಮಾಜದ ಜೊತೆಗಿದ್ದಾರೆ. ಅಲ್ಲದೇ ಎಲ್ಲ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ.
ಸೂಲಿಬೆಲೆ ಕೇವಲ ಭಾಷಣ ಮಾತನಾಡುವುದನ್ನು ಬಿಟ್ಟರೆ ಬೇರೆ ಅಭಿವೃದ್ಧಿಯ ಕಾರ್ಯದ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ ರಾಷ್ಟ್ರ ದೇಶಗಳ ಬಗ್ಗೆ ತಿಳಿದವರೆ ಈ ತೆರನಾಗಿ ಅವಹೇಳನಕಾರಿಯ ಭಾಷಣ ಮಾಡಿರುವುದು ಸೂಕ್ತವಲ್ಲ ಎಂದರು
ಹಾಗಾಗಿ ಸೂಲಿಬೆಲೆ ಅವರು ಮಾದ್ಯಮದ ಮೂಲಕ ಬಹಿರಂಗಹವಾಗಿ ಕ್ಷಮೆ ಕೇಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಾನಂದ ಕಾರಿ, ದುಂಡಪ್ಪ ನಾವಲಗಟ್ಟಿ, ವಿಶಾಲ ಪಾಟೀಲ, ಆನಂದ ನಾವಲಗಟ್ಟಿ, ಯಲ್ಲಪ್ಪ ಯರಗಣ್ಣವಿ, ಗುರು ಆರ್ಯೆರ್ ಸೇರಿದಂತೆ ಇತರರು ಇದ್ದರು.

loading...