ಹೊಸ ಗಣಕ ಯಂತ್ರ ಅಳವಡಿಕೆ

0
41
loading...

ಕನ್ನಡಮ್ಮ ಸುದ್ದಿ-ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘದ ಗಣಕ ಯಂತ್ರ ವಿಭಾಗಕ್ಕೆ ಸೇರ್ಪಡೆಯಾದ ನೂತನ ತಂತ್ರಜ್ಞಾನ ಸಮ್ಮಿಳಿತ, ಹೆಚ್ಚು ಸಾಮಥ್ರ್ಯದ ಹೊಸ ಗಣಕ ಯಂತ್ರವನ್ನು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎನ್. ಮುನಿರಾಜು ಗುಂಡಿ ಒತ್ತುವ ಮೂಲಕ ಚಾಲನೆ ನೀಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸಹಕಾರ್ಯದರ್ಶಿ ಶಿವಾನಂದ ಭಾವಿಕಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಮ್ಯಾನೇಜರ ಶ್ರೀಮತಿ ಮೀನಾಕ್ಷಿ ಗುದಗಿ, ಸಂಘದ ಕಚೇರಿ ಆಧೀಕ್ಷಕ ಎಸ್. ಎಂ. ರಾಚಯ್ಯನವರ, ಸಹಾಯಕ ಅಧೀಕ್ಷಕ ಎನ್. ಎಸ್. ಕಾಶಪ್ಪನವರ, ಗಣಕಯಂತ್ರ ಸಹಾಯಕರಾದ ರಾಜಶೇಖರ ಪಟ್ಟಣಶೆಟ್ಟಿ, ಆನಂದೀಶ್ವರ ಗೋಣೆಪ್ಪನವರ ಉಪಸ್ಥಿತರಿದ್ದರು.

loading...