ಕನ್ನಡಮ್ಮ ಸುದ್ದಿ-ನಿಪ್ಪಾಣಿ : ಬೆಂಗಳೂರಿನ ವಿಶ್ವ ವೀರಶೈವ ಸಂಸ್ಕøತಿ ಪ್ರತಿಷ್ಠಾನ ಹಾಗೂ ಕರ್ನಾಟಕ ಸಾಂಸ್ಕøತಿಕ ಅಕಾಡೆಮಿ ವತಿಯಿಂದ ಸ್ಥಳೀಯ ಹಿರಿಯ ಸಮಾಜ ಸೇವಕ ಮತ್ತು ಸಮಾಧಿಮಠ ಟ್ರಸ್ಟ್ ಅಧ್ಯಕ್ಷ ಅಣ್ಣಾಸಹೇಬ ಖೋತ ಅವರಿಗೆ “ಸಹಕಾರ ರತ್ನ“ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಖೋತ ಅವರ ಸಹಕಾರ ಮತ್ತು ಸಾಮಾಜಿಕ ಕ್ಷೇತ್ರದಲ್ಲಿಯ ಗಣನೀಯ ಸೇವೆ ಸಲ್ಲಿಸಿದುದನ್ನು ಪರಿಗಣಿಸಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಿದ ಜನಪದೋತ್ಸವ ಮತ್ತು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಜಸ್ಟೀಸ್ ಅರಳಿ ನಾಗರಜ್ ಅವರ ಅಧ್ಯಕ್ಷತೆಯಲ್ಲಿ ಚಲನಚಿತ್ರ ನಟಿ ಮಮತಾ ರಾಹುತ್ ಮತ್ತು ಜೆ.ಪವಿತ್ರ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
loading...