ಕನ್ನಡಮ್ಮ ಸುದ್ದಿ-ಅಥಣಿ :  ಅಥಣಿ ಭಾಗದಲ್ಲಿ ಆರ್‍ಟಿಒ ಕಚೇರಿ ಸ್ಥಾಪನೆಯ ಸಲುವಾಗಿ ಮುಂದಿನ ಬಜೆಟನಲ್ಲಿ ಅನುದಾನ ಬಿಡುಗಡೆ ಮಾಡುವದಕ್ಕೆ ಪ್ರಯತ್ನ ಮಾಡುತ್ತೇನೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಇಂದು ಅವರು ಅಥಣಿಯಲ್ಲಿ ಸುಮಾರು 4 ಕೋಟಿ ರೂ ಅನುದಾನದಲ್ಲಿ ನಿರ್ಮಾನವಾಗುವ ಹೈಟೇಕ್ ಬಸ್ ನಿಲ್ದಾನಕ್ಕೆ ಶಂಕು ಸ್ಥಾಪನೆ ನೇರವೆರಿಸಿ ಮಾತನಾಡಿದರು. ಕರ್ನಾಟಕದಿಂದ ನೇರೆ ರಾಜ್ಯಗಳಿಗೆ ಸಾಕಷ್ಟು ನಮ್ಮ ಸಾರಿಗೆ ಇಲಾಖೆಯಿಂದ ವಾಹನಗಳ ಸೌಲಭ್ಯ ಕಲ್ಪಸುವ ಉತ್ಸುಕತೆ ನಮಗೆ ಇದೆ. ಇದಕ್ಕಾಗಿ ನೇರೆ ರಾಜ್ಯಗಳ ಸಂಗಡ ಮಾತುಕತೆ ನಡೆಸಲು ಸಾಕಷ್ಟು ಪ್ರಯತ್ನ ಪಟ್ಟರು ಉಪಯೋಗವಾಗಿಲ್ಲ ಎಂದ ಅವರು, ಶೀಘ್ರದಲ್ಲಿ ಅಥಣಿ ಬೆಂಗಳೂರ ಹೈಟೆಕ ಬಸ್ ಪ್ರಾರಂಭಿಸುವದಾಗಿ ಹೇಳಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಶಾಸಕ ಲಕ್ಷ್ಮಣ ಸವದಿ  ಮಾತನಾಡಿ, ಇಂದಿನ ಸರಕಾರದಲ್ಲಿ ಹಿರಿಯ ಸಚಿವರಾದ ರಾಮಲಿಂಗಾರೆಡ್ಡಿ ಅವರು ಒಬ್ಬ ಆದರ್ಶ ರಾಜಕಾರಣಿ. ಅವರ ಸಾಧನೆ ಎಲ್ಲರಿಗೂ ಮಾದರಿ. ಶೀಘ್ರದಲ್ಲಿ ಅಥಣಿ-ಬೆಂಗಳೂರ,ಅಥಣಿ-ಮುಂಬಯಿ ಬಸ್ ಸೇವೆ ಆರಂಭಿಸಬೇಕು ಆರ್‍ಟಿಒ ಆಫೀಸ್ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಮುಖ್ಯ ಅತಿಥಿಗಳಾಗಿದ್ದ ಸಂಸದ ಪ್ರಕಾಶ ಹುಕ್ಕೇರಿ ಮಾತನಾಡಿ, ಚಿಕ್ಕೋಡಿಗೆ ಸಾರಿಗೆ ಇಲಾಖೆ ವಿಭಾಗ ಕಚೇರಿ ಆರಂಭಕ್ಕೆ ಬೇಕಾಗುವ 5 ಎಕರೆ ಭೂಮಿ ಒದಗಿಸಲಾಗಿದೆ ಎಂದರು.
ವಾಯುವ್ಯ ಸಾರಿಗೆ ಇಲಾಖೆಯ ಅಧ್ಯಕ್ಷ ಸದಾನಂದ ಡಂಗನವರ, ನೂತನ ಹೊಸ ಬಸ್ಸಗಳಿಗೆ ಚಾಲನೆ ನೀಡಿದರು
ತಹಸಿಲ್ದಾರ ಆರ್,ಉಮಾದೇವಿ, ಮಾಜಿ ಶಾಸಕ ಶಾಹಾಜನ್ ಡೊಂಗರಗಾಂವ,ಎಸ್.ಕೆ.ಬುಟಾಳೆ,ಮಹೇಷ ಕುಮಟಳ್ಳಿ,ಎಸ್.ಎಮ್.ನಾಯಕ,ಜಿಲ್ಲಾ ಕಾಂಗ್ರಸ್ ಅಧ್ಯಕ್ಷ ವಿನಯ ನವಲಗಟ್ಟಿ,ಅನೀಲ ಸುಣದೋಳಿ,ವಿಠ್ಠಪ್ಪ ದೇಸಾಯಿ.ಬಸವರಾಜ ಬುಟಾಳೆ, ಚಂದ್ರಕಾಂತ ಇಮ್ಮಡಿ,ಟಿ.ಕೆ.ಪಾಲನೇತ್ರಾ ನಾಯಕ ಮುಖ್ಯ ಕಾಮಗಾರಿ ಅಭಿಯಂತರರು. ಎಸ್.ಚಂದ್ರಶೇಖರ ವಿಭಾಗಿ ನಿಯಂತ್ರಕರು ವಾ.ಕ.ರ.ಸಾ.ಸಂಸ್ಥೆ ಚಿಕ್ಕೋಡಿ ಮುಂತಾದವರು ಉಪಸ್ಥಿತರಿದ್ದರು.
ಬಾಕ್ಸ:
ಲಸಂಸದ ಪ್ರಕಾಶ ಹುಕ್ಕೇರಿ ಅವರು ಹೈಟೆಕ್ ಬಸ್ ನಿಲ್ದಾಣ ತಾವೇ ಮಂಜೂರಾತಿ ನೀಡಿರುವದಾಗಿ ಹೇಳುತ್ತಿದ್ದಾರೆ. ಆದರೆ ಅಥಣಿ ಬಸ್ ನಿಲ್ದಾಣ ಮಂಜೂರಿಗೆ ಪ್ರಸ್ತಾವಣೆ ಸಲ್ಲಿಸಿದ್ದೇನೆ.
ಲಕ್ಷ್ಮಣ ಸವದಿ
ಶಾಸಕರು
loading...