ಅಧಿಕಾರಿಗಳ ಬೇವರಿಳಿಸಿದ ಸಂಸದ ಹುಕ್ಕೇರಿ

0
172
loading...


ಕನ್ನಡಮ್ಮ ಸುದ್ದಿ
ಚಿಕ್ಕೋಡಿ 27: ಬಸ್ ನಿಲ್ದಾಣದ ತುಂಬ ಕಸ ತುಂಬಿಕೊಂಡಿದ್ದರೆ ಜನರ ಪರಿಸ್ಥಿತಿ ಏನು? ಬಸ್ ನಿಲ್ದಾಣ ಸ್ವಚ್ಛತೆ ಬಗ್ಗೆ ಕ್ರಮ ಕೈಕೊಳ್ಳದಿದ್ದರೆ ನಿಮ್ಮ ಜೊತೆ ನಾನು ಕಸ ಹೊಡೆಯಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಸಂಸದ ಪ್ರಕಾಶ ಹುಕ್ಕೇರಿ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಲೆಫ್ಟ ರೈಟ್ ತೆಗೆದುಕೊಂಡರು.
ಪಟ್ಟಣದ ಹೈಟೆಕ್ ನಿಲ್ದಾಣದ ಆವರಣದಲ್ಲಿ ಕಸ ತುಂಬಿರುವುದನ್ನು ಕಂಡ ಸಂಸದ ಪ್ರಕಾಶ ಹುಕ್ಕೇರಿ ಅಧಿಕಾರಿ ವಿರುದ್ಧ ಹರಿಹಾಯ್ದರು. ಬಸ್ ನಿಲ್ದಾಣ ಉದ್ಘಾಟನೆಯಾಗಿ ಆರು ತಿಂಗಳು ಕಳೆದಿಲ್ಲ ಆದರೆ ಇಲ್ಲಿನ ವ್ಯವಸ್ಥೆ ನೋಡಿದರೆ ಅಸಹ್ಯವಾಗುತ್ತದೆ. ಸ್ವಚ್ಛತೆಯಿದ್ದರೆ ಮಾತ್ರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಜನ ಓಡಾಡಲು ಸಾಧ್ಯ ಹೀಗಾಗಿ ಅಧಿಕಾರಿಗಳು ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ತರಾಟೆಗೆ ತೆಗೆದುಕೊಂಡರು.
ಮುಂದಿನ ಭೇಟಿ ವೇಳೆ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಯ ಕೊರತೆ ಕಂಡು ಬಂದರೆ ಅದಕ್ಕೆ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಜೊತೆಗೆ ಅಧಿಕಾರಿಗಳು ಸಹ ನನ್ನ ಜೊತೆಗೆ ಕಸ ಹೊಡೆಯಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿಪಡಬೇಕಿಲ್ಲ ಎಂದರು

loading...