ಅಪಾಯಕಾರಿ ಉದ್ಯಮಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲು ಡಿಸಿ ಸೂಚನೆ

0
91
loading...

ಕನ್ನಡಮ್ಮ ಸುದ್ದಿ
ಬೆಳಗಾವಿ : 6 ದೇಶನೂರು ಗ್ರಾಮದಲ್ಲಿ ಕಳೆದ ವರ್ಷ ಸಂಭವಿಸಿದ ರೈಲ್ವೇ ವ್ಯಾಗನ್ ಮರು ಕಳುಸದಂತೆ ಸುರಕ್ಷತಾ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಎನ್.ಜಯರಾಮ್ ಸೂಚಿಸಿದರು.
ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾ ಭವನದಲ್ಲಿ ಜರುಗಿದ ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈಲ್ವೇ ವ್ಯಾಗನ್ ಗಳ ಸುತ್ತ ಆಯ್ಓಸಿ ನವರು ಸುರಕ್ಷತಾ ಕ್ರಮಗಳನ್ನು ಬಿಪಿಸಿಎಲ್ ಘಟಕದವರು ಅಳವಡಿಸಿಕೊಳ್ಳಲು ಸೂಚಿಸಿದರು.
ಪ್ರತಿಯೊಂದು ಅಪಾಯಕಾರಿ ಉದ್ಯಮಗಳ ಉತ್ಪಾದನಾ ಘಟಕಗಳಲ್ಲಿ ವೈದ್ಯಕೀಯ ತಂಡದ ಜೊತೆಗೆ ನಿರಂತರ ವೈದ್ಯರು, ಅರೇ ವೈದ್ಯಕೀಯ ಚಿಕಿತ್ಸಾ ತಂಡ ನೇಮಕ ಮಾಡಿಕೊಳ್ಳಲು ತಿಳಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ೮೦೦ ನೋಂದಾಯಿತ ಪ್ಯಾಕ್ಟರಿಗಳಿದ್ದು ಅದರಲ್ಲಿ ೫ ಅತೀ ಹೆಚ್ಚು ಅಪಾಯಕಾರಿ ಪ್ಯಾಕ್ಟರಿ ಎಂದು ಗುರುತಿಸಲಾಗಿದೆ ಅವುಗಳಲ್ಲಿ ಸರಕ್ಷತೆಗೆ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಘಟನೆಗಳು ಜರುಗಿಲ್ಲವೆಂದು ರವೀಂದ್ರನಾಥ ರಾಥೋಡ ಅವರು ಅಪಾಯಕಾರಿ ಕಾರ್ಖಾನೆಗಳು ಕುರಿತು ಸಭೆಗೆ ಮಾಹಿತಿ ನೀಡಿದರು.
ಜಿಪಂ ಸಿಇಓ ರಾಮಚಂದ್ರನ್. ಆರ್. ಅಪರ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಮಹಾನಗರ ಪಾಲಿಕೆ, ಕೃಷಿ, ತೋಟಗಾರಿಕೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ವಾಯು ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ದಳ, ಪಂಚಾಯತ ರಾಜ್ಯ ಇಂಜಿನಿಯರಿಂಗ್ ವಿಭಾಗ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

loading...