loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ : ಪಬ್ಲಿಕ್ ಟಾಯ್ಲೆಟ್ಟಿನಲ್ಲಿ ಆಟೋಮೆಟಿಕ್ಕಾಗಿ ಕಾರ್ಯನಿರ್ವಹಿಸುವ ಯಾಂತ್ರಿ ಫ್ಲಶ್ ಸಿಸ್ಟಮನ್ನು ನಗರದ ವಿದ್ಯಾನಗರದ ಬಿವಿಬಿ ಕಾಲೇಜ್ ಆಪ್ ಇಂಜನೀಯರಿಂಗ್ ಆ್ಯಂಡ್ ಟೆಕ್ನಾಲಜಿಯ ಇಂಡಸ್ಟ್ರಿಯಲ್
ಪ್ರೊಡಕ್ಷನ್‍ದ ಅಂತಿಮ ವರ್ಷದ ವಿದ್ಯಾರ್ಥಿಗಳು ತಯಾರಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ವಿದ್ಯಾರ್ಥಿ ರವಿ ಜಾಗನೂರ,ಪ್ರದಾನಿ ನರೆಂದ್ರ ಮೋದಿಯವರು ಸರಕಾರದಿಂದ ಹಮ್ಮಿಕೊಂಡಿರುವ ಸ್ವಚ್ಚ ಭಾರತ್ ಮಿಶನ್ ವತಿಯಿಂದ ಈ ನೂತನ ವ್ಯವಸ್ಥೆ ಸಿದ್ದಪಡಿಸಲಾಗಿದೆ. ಶಂಶೋಧನೆಯ ಪ್ರಕಾರ ಸಾರ್ವಜನಿಕರ ಶೌಚಾಲಯದಲ್ಲಿ ಶೇ. 38 ರಷ್ಟು ನೀರು ವ್ಯರ್ಥವಾಗುತ್ತದೆ. ಈಗ ಸಿದ್ದಪಡಿಸಲಾಗಿರುವ ನವೀನ ಯೋಜನೆಯಿಂದಾಗಿ ವಿಶಿಷ್ಟವಾಗಿ ತಯಾರಿಸಲಾದ ನೂತನ ಯಾಂತ್ರಿಕ ಫ್ಲೆಶ್ ಸಿಸ್ಟಮಿನಡಿ ಶೇ 170-180ರಷ್ಟು ನೀರು ಉಳಿತಾಯವಾಗಲಿದೆ. ಇದಕ್ಕೆ ಯಾವುದೇ ರೀತಿಯ ಹಸ್ತಚಾಲಿತ ಕಾರ್ಯಬೇಕಾಗಿಲ್ಲ. ಹಾಗೂ ಯಾವುದೇ ರೀತಿಯ ವಿದ್ಯುತ್ (ಸೆನ್ಸಾರ) ಬಳಸದೆ ಸಮಗ್ರವಾಗಿ ಸ್ಟಿಯರಿಂಗ ಮತ್ತು ವಾಲ್ವ ಯಾಂತ್ರಿಕ ವ್ಯವಸ್ಥೆಯ ಅಡಿ ಸ್ವಯಂ ಚಾಲಿತವಾಗಿ ಕಾರ್ಯನಿರ್ವಹಿಸಲಿದೆ ಎಂದರು.
ಈ ನೂತನ ವ್ಯವಸ್ಥೆಯಲ್ಲಿ ವ್ಯಕ್ತಿಯು ಪ್ಲಾಟ ಫಾರ್ಮಿನಲ್ಲಿ ನಿಂತರೆ ಸಾಕು ಸ್ಟಿಯರಿಂಗ ವಾಲ್ವ ಯಾಂತ್ರಿಕ ವ್ಯವಸ್ಥೆಯಡಿ ಸ್ಯಂ ಚಾಲಿತಗೊಂಡು ನೀರು ಹೊರ ಸೂಸುತ್ತದೆ. ಹಾಗೂ ಆಟೋಮೆಟಿಕ್ಕಾಗಿ ಬಂದ್ ಆಗುತ್ತದೆ. ಸದ್ಯ 700 ಎಂಎಲ್ ನೀರು ಸಂಗ್ರಹದ ಟ್ಯಾಂಕ್ ಫಿಕ್ಷ ಮಾಡಲಾಗಿದೆ. ಇದನ್ನೂ 300 ಎಂಎಲ್ ಹಾಗೂ 500 ಎಂಎಲ್ ಗಳಿಗೂ ಹೊಂದಿಸಿಕೊಳ್ಳಬಹುದಾಗಿದೆ. ಸದ್ಯ ಸ್ಟಿಯರಿಂಗಿನ ಭಾರದ ಪ್ರಮಾಣವನ್ನು ಗರಿಷ್ಠ 150 ಕೆಜಿಗೆ ಸಿದ್ಧಪಡಿಸಲಾಗಿದೆ. ಈ ಉತ್ಪನ್ನವು ಅಸೆಂಬಲ್ಡ್ ಆಗಿರುವುದರಿಂದ ನಿರ್ವಹಣೆಯು ಅತಿ ಸುಲಬವಾಗಿದೆ. ಸ್ಚ್ಚತೆ ಕಾಪಾಡಲು ಅತೀ ಅವಶ್ಯವಾಗಿದೆ. ಒಂದು ಬಉತ್ಪನ್ನ ತಯಾರಿಸಲು ಸದ್ಯ ಅಂದಾಜು 3500 ರಿಂದ 4000 ರೂ. ಖರ್ಚು ತಗುಲುತ್ತದೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನ ತಯಾರಿಸಿದರೆ ಇನ್ನೂ ಖರ್ಚು ಕಡಿಮೆಯಾಗುತ್ತದೆ ಎಂದರು.
ಸಿಟಿಐಇ ನಿರ್ದೆಶಕ ಪ್ರೋ. ನಿತಿನ್ ಕುಲಕರ್ಣಿಅವರ ಮಾರ್ಗದರ್ಶನದಲ್ಲಿ ಯೋಜನೆ ತಯಾರಿಸಲಾಗಿದೆಯೆಂದು ಅವರು ಹೇಳಿದರು. ವಿಕ್ರಮ ನಾಡಿಗೇರ ಶಿವಾನಂದ ಗೂಂಡಣ್ಣವರ, ಪೂರ್ಣಿಮಾ ಪಾಟೀಲ ಸೇರಿ ಈಉತ್ಪಣ್ಣ ತಯಾರಿಸಿದ್ದೇವೆ ಎಂದರು ವಿಕ್ರಮ ಮತ್ತು ಶಿವಾನಂದ ಈ ಸಂದರ್ಭದಲ್ಲಿದ್ದರು.

loading...