ಆಟೋ‌ಮೀಟರ್ ಗೆ ಇಂದೇ ಡೆಡ್‌ ಲೈನ್

0
198
loading...

ರಾಜಶೇಖರಯ್ಯಾ ಹಿರೇಮಠ
ಬೆಳಗಾವಿ:17 ಕಳೆದ ನಾಲ್ಕು ವರ್ಷಗಳಿಂದ ನಗರದಲ್ಲಿ ಸಂಚರಿಸುವ ಆಟೋಗಳಿಗೆ ಮೀಟರ್ ಅಳವಡಿಸಬೇಕೆಂದು ಜಿಲ್ಲಾಧಿಕಾರಿಗಳು ಆದೇಶ ನೀಡಿದರೂ ಪೊಲೀಸ್ ಇಲಾಖೆ ಹಾಗೂ ಆರ್‍ಟಿಓ ಇಲಾಖೆಯ ವೈಮನಸ್ಸು ಹಾಗೂ ರಾಜಕಾರಣಿಗಳ ಒತ್ತಡದಿಂದ ಮೀಟರ್ ಕಾರ್ಯಾಚರಣೆ ನೆನೆಗುದಿಗೆ ಬಿದಿದ್ದೆ. ತಿಂಗಳಲ್ಲಿ ಮೀಟರ್ ಅಳವಡಿಸದಿದ್ದರೇ ನಗರ ಪೊಲೀಸ್ ಇಲಾಖೆ ಹಾಗೂ ಆರ್‍ಟಿಒ ಮೇಲೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಸರಕಾರಕ್ಕೆ ಪತ್ರ ಬರೆಯುವುದಾಗಿ ಎಚ್ಚರಿಕೆ ನೀಡಿ ಆದೇಶ ನೀಡಿದ್ದಕ್ಕೆ ಇಂದೇ ಕೊನೆಯ ಡೆಡ್ ಲೈನ್ ಆಗಿದೆ.
ಜಿಲ್ಲಾಧಿಕಾರಿಗಳ ಆದೇದಂತೆ ಮೀಟರ್ ಇಲ್ಲದ ಆಟೋಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಸಂಚಾರಿ ಪೊಲೀಸರು ಒಂದೇ ದಿನಕ್ಕೆ ಸುಮಾರು 230ಕ್ಕೂ ಹೆಚ್ಚು ಆಟೋಗಳನ್ನು ಸೀಜ್ ಮಾಡಿದ ಸಂದರ್ಭದಲ್ಲಿ ಉತ್ತರ ಕ್ಷೇತ್ರದ ಶಾಸಕ ಫಿರೋಜ್ ಸೇಠ್ ಡಿಸಿಪಿ ಅಮರನಾಥ ರೆಡ್ಡಿ ಅವರೊಂದಿಗೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸೀಜ್ ಮಾಡಿದ ಆಟೋಗಳನ್ನು ದಂಡ ಕಟ್ಟಿಸಿ ಬಿಡುಗಡೆಗೊಳಿಸಿದರು. ಆದರೆ ಜಿಲ್ಲಾಧಿಕಾರಿಗಳು ನೀಡಿದ ಗಡುವು ಬುಧವಾರ ಕೊನೆಗೊಳಲಿದೆ. ಪ್ರತಿ ವರ್ಷ ಜಿಲ್ಲಾಧಿಕಾರಿಗಳು ಆದೇಶ ನೀಡುತ್ತಾರೆ ಆದರೆ ಮೀಟರ್ ಕಡ್ಡಾಯವಾಗುವುದು ದುಸ್ಥರವಾಗಿದೆ.
ಕಳೆದ ಮೂರುವರೇ ವರ್ಷಗಳಿಂದ ಜಿಲ್ಲಾಧಿಕಾರಿಗಳು ಆರ್‍ಟಿಓ ಹಾಗೂ ಪೊಲೀಸ್ ಇಲಾಖೆಗೆ ಸಾರ್ವಜನಿಕರ ಹಿತದೃಷ್ಠಿಯನ್ನು ಗಮದಲ್ಲಿಟ್ಟುಕೊಂಡು ಮೀಟರ್ ಅಳವಡಿಸಬೇಕೆಂದು ಆದೇಶ ನೀಡುತ್ತ ಬಂದಿದ್ದರೂ ಪೊಲೀಸ್ ಇಲಾಖಗೆ ಆರ್‍ಟಿಒ ಸಿಬ್ಬಂದಿಗಳು ಸಹಕರಿಸುತ್ತಿರಲಿಲ್ಲ. ಆದ್ದರಿಂದ ಸಂಚಾರಿ ಪೊಲೀಸ್‍ರು ಏಕಾಂಗಿಯಾಗಿ ಕಾರ್ಯಾಚರಣೆ ನಡೆಸಲು ಪ್ರಾರಂಭಿಸಿದಾಗ ರಾಜಕಾರಣಿಗಳು ಮೀಟರ್ ಇಲ್ಲದ ಆಟೋಗಳಿಗೆ ರಕ್ಷಣೆ ನೀಡಿ ಪೊಲೀಸ್ ಅಧಿಕಾರಿಗಳ ಮೇಲೆ ದರ್ಪ ತೋರಿದರು. ಆಟೋಗಳನ್ನು ಬಿಡಿಸಿಕೊಂಡು ಹೋಗುವ ಸಂದರ್ಭದಲ್ಲಿ ಆಟೋ ಚಾಲಕರು ಪೊಲೀಸರ ಕಣ್ಣೇದುರೇ ಕುಣಿದು ಕುಪ್ಪಳಿಸುವಾಗ ಕಾರ್ಯಾಚರಣೆ ನಡೆಸಿದ ಸಂಚಾರಿ ಪೊಲೀಸರು ಮೂಖ ಪ್ರೇಕ್ಷಕರಾಗಿ ನಿಂತಿದ್ದರು.
ಕಳೆದ ವರ್ಷ ಮೀಟರ್ ಕಡ್ಡಾಯಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ಆದೇಶ ಮಾಡಿದ ಸಂದರ್ಭದಲ್ಲಿ ಸಂಚಾರಿ ಸಿಪಿಐ ಜಾವೇದ ಮುಷಾಪುರೆ ಕಾರ್ಯಾಚರಣೆ ನಡೆಸಲು ಬಿದಿಗೆ ಇಳಿದಾಗ ಆಟೋ ಚಾಲಕರ ಸಂಘಟನೆಗಳು ಹಾಗೂ ಮ್ಯಾಕ್ಸಿಕ್ಯಾಬ್ ಅವರ ವಿರುದ್ಧ ಹೋರಾಟ ನಡೆಸಿ ಮೀಟರ್ ಕಾರ್ಯಾಚರಣೆ ಸ್ಥಗೀತಗೊಳ್ಳಿಸಿದ್ದರೂ. ಸದ್ಯ ಮೀಟರ್ ಅಳವಡಿಕೆ ಪ್ರಹಸನವಾಗಿದ್ದರೂ ಸತ್ಯಾಸತ್ಯತೆಯನ್ನು ಜಿಲ್ಲಾಧಿಕಾರಿಗಳು ಅರಿತು. ಪೊಲೀಸ್ ಹಾಗೂ ಆರ್‍ಟಿಒ ಇಲಾಖೆಯ ಮೇಲೆ ಕ್ರಮ ಕೈಗೊಳ್ಳಲು ಸರಕಾರಕ್ಕೆ ಪತ್ರ ಬರೆಯುವ ಬದಲು ಇದರ ಹಿಂದೆ ಇರುವ ರಾಜಕಾರಣಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಬರುವುದಾದರೇ ಮೊದಲು ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.
ತಿಂಗಳೊಗೆ ನಗರದಲ್ಲಿ ಸಂಚರಿಸುವ ಆಟೋ ಗಳಿಗೆ ಮೀಟರ್ ಅಳವಡಿಸಬೇಕೆಂಬ ಜಿಲ್ಲಾಡಳಿತದ ಆದೇಶಕ್ಕೆ ಸಡ್ಡು ಹೊಡೆದ ಆಟೋ ಚಾಲಕರು ಜಿಲ್ಲಾಧಿಕಾರಿಗಳಿಗೆ ಆರ್‍ಟಿಒ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ನಮ್ಮ ಮೇಲೆ ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ ಮೀಟರ್ ದರವನ್ನು ಅಳವಡಿಸಬೇಕೆಂದು ಜಿಲ್ಲಾಡಳಿತಕ್ಕೆಯೇ ಗಡುವು ನೀಡಿದ್ದರು. ಆದರೆ ಇಂದು ಮೀಟರ್ ಅಳವಡಿಕೆಗೆ ಕೊನೆಯ ದಿನ ಜಿಲ್ಲಾಧಿಕಾರಿಗಳು ಹೇಳಿದಂತೆ ಕ್ರಮ ಕೈಗೊಳ್ಳಲು ಸರಕಾರಕ್ಕೆ ಪತ್ರ ಬರೆಯುತ್ತಾರೆ ಕಾದು ನೋಡಬೇಕು.

loading...